ಖಾದ್ಯ ತೈಲ ಬೆಲೆ ಏರಿಕೆ ತಡೆಗಟ್ಟಲು ಮೋದಿ ಸರಕಾರದ ಮಾ’ಸ್ಟರ್ ಪ್ಲಾನ್. ಏನಿದು ಮೋದಿ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ?
ಖಾದ್ಯ ತೈಲ, ಕಳೆದ ಎರಡು ವರ್ಷಗಳಿಂದ ಚರ್ಚೆಯಲ್ಲಿರುವ ವಿಷಯಗಳಲ್ಲಿ ಒಂದು. ವಿಪಕ್ಷಗಳು ಮೋದಿ ಸರ್ಕಾರವನ್ನು ತರಾ’ಟೆಗೆ ತೆಗೆದುಕೊಳ್ಳಲು ಮುಖ್ಯ ವಿಷಯಗಳಲ್ಲಿ ಇದು ಪ್ರಥಮವಾದದ್ದು. ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರಿಗು ಇದರ ಬಿ’ಸಿ ಮುಟ್ಟಿದೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಗಿಂತಲೂ ಈ ಖಾದ್ಯ ತೈಲದ ಬೆಲೆ ೧೦೦-೨೦೦% ಒಂದೇ ವರ್ಷದಲ್ಲಿ ಹೆಚ್ಚಿದೆ. ಇದಕ್ಕೆ ಕೇಂದ್ರ ಸರಕಾರ ಕೊರೊನ ಸಾಂಕ್ರಾಮಿಕ ಕಾರಣ ಎಂದು ಹೇಳಿದರೆ ಜನರು ಅದನ್ನು ಒಪ್ಪಿಕೊಳ್ಳುವುದಕ್ಕೂ ತಯಾರಿಲ್ಲ. ಆದರೂ ಸರಕಾರ ಬೆಲೆ ತ’ಗ್ಗಿಸಲು ತನ್ನ ಪ್ರಯತ್ನವನ್ನು ಮಾಡುತ್ತಿದೆ.
ಬೆಲೆ ಜಾಸ್ತಿ ಆಗಲು ಕಾರಣವೇನು?
ಭಾರತ ೮೦% ಖಾದ್ಯ ತೈಲಗಳನ್ನು ಹೊರಗಿನ ದೇಶಗಳಿಂದ ಮುಖ್ಯವಾಗಿ ಪಾಮ್ ಆಯಿಲ್ ಅನ್ನು ಇಂಡೋನೇಷ್ಯಾ ದಿಂದ ಸೋಯಾ ಆಯಿಲ್ ಅನ್ನು ರಷ್ಯಾ ಹಾಗು ಇನ್ನಿತರ ಆಯಿಲ್ ಗಳನ್ನೂ ಆಫ್ರಿಕಾ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಕೊರೊನ ಇಂದ ಆ ದೇಶಗಳಲ್ಲಿ ಉತ್ಪಾಧನೆ ಕುಂ’ಠಿತ ಗೊಂಡಿದೆ. ಅದು ಮಾತ್ರಲ್ಲದೆ ಅಲ್ಲಿನ ಉತ್ಪಾಧನೆ ಕಳೆದ ೧೦ ವರ್ಷಗಳಿಗೆ ಹೋಲಿಸಿದರೆ ಬಹಳ ಕಡಿಮೆ ಆಗಿದೆ, ಇದಕ್ಕೆ ಕಾರಣ ಮಳೆ ಪ್ರಮಾಣ ಸರಿಯಾಗಿ ಆಗದೆ ಇದುದ್ದು ಹಾಗೆ ಕ್ಲೈಮೇಟ್ ಚೇಂಜ್ ನಂತಹ ಕಾರಣಗಳಿಗೆ. ಅದೇ ರೀತಿ ಚೀನಾ ಉಳಿದ ದೇಶಗಳಿಗೆ ಹೋಲಿಸಿದರೆ ಅತಿ ಹೆಚ್ಚು ಪ್ರಮಾಣದಲ್ಲಿ ಖಾದ್ಯ ತೈಲಗಳನ್ನು ಆಮದು ಮಾಡಿಕೊಂಡಿದ್ದು ತೈಲಗಳ ಬೆಲೆ ಹೆಚ್ಚಳಕ್ಕೆ ನೇರ ಕಾರಣವಾಗಿದೆ.
ಸರಕಾರ ತೆಗೆದುಕೊಂಡ ನಿರ್ಧಾರಗಳೇನು?
ಸರಕಾರ ಬೆಲೆ ನಿಯಂತ್ರಣಕ್ಕೆ ಆಮದು ಮಾಡಿಕೊಳ್ಳುವ ತೈಲಗಳ ಆಮದು ಸುಂಕವನ್ನು ಬಹಳಷ್ಟು ತ’ಗ್ಗಿಸಿದೆ. ಹಾಗೆ ಮುಂದೆ ಇಂತಹ ಪೈಸ್ಥಿತಿ ಆಗದಿರಲು ತೈಲ ಆಮದು ತ’ಗ್ಗಿಸಿಕೊಳ್ಳಲು ಇಂದು ಮೋದಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಸರಕಾರ ರೈತರಿಗೆ ಬೆಂಬಲ ಬೆಲೆ ಯಾ ೯ನೆ ಕಂತುವಿನ ಹಣ ಬಿಡುಗಡೆ ಸಮಯದಲ್ಲಿ ಒಂದು ದೊಡ್ಡ ಘೋಷಣೆ ಮಾಡಿದ್ದಾರೆ. ಖಾದ್ಯ ತೈಲ ವಿದೇಶಗಳ ಅ’ವಲಂಬನೆ ತಪ್ಪಿಸಲು ಹಾಗು ದೇಶಿಯಾಗಿ ಉತ್ಪಾದನೆ ಹೆಚ್ಚಿಸಲು ಮೋದಿ ಸರಕಾರ ಒಟ್ಟು ೧೧,೦೦೦ ಕೋಟಿ ಹಣವನ್ನು ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಮೋದಿ ಹೇಳಿದ್ದಾರೆ. ಪಾಮ್ ಆಯಿಲ್ ಆಮದು ಪ್ರಸ್ತುತವಾಗಿ ೫೫% ಇದೆ. ಇದನ್ನು ೨೦೨೪-೨೫ ಹೊತ್ತಿಗೆ ೪೫% ಗೆ ಇ’ಳಿಸಲು ಈ ಯೋಜನೆ ಹಾಕಲಾಗಿದೆ ಎಂದು ಹೇಳಿದ್ದಾರೆ. ಸರಕಾರದ ಈ ಯೋಜನೆ ಕಾರ್ಯಗತವಾದರೆ ಮುಂದಿನ ಕೆಲ ವರ್ಷಗಳಲ್ಲಿ ಭಾರತ ಖಾದ್ಯ ತೈಲಗಳ ಆಮದು ಕಡಿಮೆ ಮಾಡಿ ಅದರ ಬೆಲೆ ಕೂಡ ಹೆಚ್ಚಾಗದಂತೆ ಮಾಡಬಹುದು.