ಸಿಕ್ಕಿಂ ನ ವಾಸ್ತವಿಕತೆ ಬಗ್ಗೆ ನಮ್ಮ ಅನೇಕರಿಗೆ ಗೊತ್ತಿಲ್ಲ. ಮಾಧ್ಯಮಗಳ ಕಡೆಗಣನೆಗೆ ಒಳಗಾದ ಭಾರತದ ರತ್ನ.
ಸಿಕ್ಕಿಂ ಒಟ್ಟು ೭೦೯೬ sq km ಇರುವಂತಹ ದೇಶದ ಎರಡನೇ ಸಣ್ಣ ರಾಜ್ಯ ಸಿಕ್ಕಿಂ. ಇಲ್ಲಿನ ಒಟ್ಟು ಜನಸಂಖ್ಯೆ ಒಟ್ಟು ೬ ಲಕ್ಷ ಅಷ್ಟೇ. ಈ ಸಿಕ್ಕಿಂ ಅಲ್ಲಿ ಒಟ್ಟು 4 ಜಿಲ್ಲೆಗಳಿವೆ. ಜನಸಂಖ್ಯೆ ಆದರದ ಮೇಲೆ ಅತಿ ಕಡಿಮೆ ಜನಸಂಖ್ಯೆ ಇರುವ ರಾಜ್ಯ ಸಿಕ್ಕಿಂ. ಮಾಧ್ಯಮಗಳು ಈ ನಾರ್ತ್ ಈಸ್ಟ್ ರಾಜ್ಯಗಳ ಬಗ್ಗೆ ನಮಗೆ ಯಾವುದೇ ಹೆಚ್ಚಿನ ಮಾಹಿತಿ ನೀಡುವುದಿಲ್ಲ. ಮಾಧ್ಯಮ ಅಷ್ಟೇ ಅಲ್ಲದೆ ಹಿಂದಿನ ಕೇಂದ್ರ ಸರಕಾರಗಳು ಕೂಡ ಈ ಕಡೆಯ ರಾಜ್ಯಗಳನ್ನು ಕಡೆಗಣನೆ ಮಾಡಿತ್ತು. ಅದೇ ಕಾರಣಕ್ಕೆ ಈ ಪ್ರದೇಶಗಳಲ್ಲಿ ಏನಾದರು ಒಳ್ಳೆ ವಿಷ್ಯಗಳು ನಡೆದರೆ ನಮಗೆ ತಿಳಿಯುವುದು ಬಹಳ ಕಡಿಮೆ. ಸಿಕ್ಕಿಂ ಅಲ್ಲಿ ಕೆಲ ವರ್ಷಗಳಿಂದ ಬಹಳ ಒಳ್ಳೆ ಸಂಗತಿಗಳು ನಡೆದಿವೆ. ಆ ಕೆಲ ಸಂಗತಿಗಳ ಬಗ್ಗೆ ನಾವು ನಿಮಗೆ ಇಲ್ಲಿ ಹೇಳಲಿದ್ದೇವೆ.
೧. ಓಪನ್ ಡೆಫೆಕೇಷನ್ ಫ್ರೀ ರಾಜ್ಯ:- ಸ್ವಚ್ಛ ಭಾರತ ಯೋಜನೆ ೨೦೧೬ ರಲ್ಲಿ ಭಾರತದಾದ್ಯಂತ ಜಾರಿಗೆ ತರಲಾಯಿತು. ಇದು ಇನ್ನು ದೇಶದ ಹಳ್ಳಿ ಪ್ರದೇಶಗಳಲ್ಲಿ ಹೇಳುವಷ್ಟು ಬದಲಾವಣೆ ಮಾಡಿಲ್ಲ. ಆದರೆ ಈ ಯೋಜನೆ ಅಡಿಯಲ್ಲಿ ಅನೇಕ ಶೌಚಾಲಯ ಕತ್ತಲಾಗಿವೆ. ಆದರೆ ನಿಮಗಿದು ಗೊತ್ತೇ ಈ ಯೋಜನೆ ಶುರುವಾಗುವ ೮ ವರ್ಷಗಳ ಮೊದಲೇ ಅಂದರೆ ೨೦೦೮ ರಲ್ಲಿ ಸಿಕ್ಕಿಂ ಬಯಲು ಮುಕ್ತ ಶೌಚಾಲಯ ದ ಹತ್ತಿರ ತಲುಪಿತ್ತು ಎಂದು? ಇದಕ್ಕೆ ಕಾರಣ ಅಲ್ಲಿನ ಆಡಳಿತ ೧೯೯೯ ರಲ್ಲಿ ಅಲ್ಲಿ ಒಂದು ಯೋಜನೆ ಜರಿ ಮಾಡಲಾಗಿತ್ತು ಮನೆಯಲ್ಲಿ ಶೌಚಾಲಯ ಕಟ್ಟಿಸಿದರೆ ಸರಕಾರ ಹಣ ನೀಡುತ್ತವೆ ಎನ್ನುವ ಯೋಜನೆ ಜಾರಿ ಮಾಡಿತ್ತು. ಇದೆ ಕಾರಣಕ್ಕೆ ಸಿಕ್ಕಿಂ ೨೦೦೮ ರಲ್ಲೇ ದೇಶದ ಮೊದಲ ಬಯಲು ಮು’ಕ್ತ ಶೌಚಾಲಯ ಪೂರ್ಣಗೊಳಿಸಿದ ರಾಜ್ಯವಾಗಿ ಮಾರ್ಪಾಡಾಗಿತ್ತು.
೨. ಸ್ವಚ್ಛತೆ:- ಕಸ ಕಡ್ಡಿ ನಮ್ಮ ಬೆಂಗಳೂರಲ್ಲಿ ನೋಡಿದರೆ ನಮಗೂ ನಾಚಿಕೆಯಾಗುತ್ತದೆ. ಅದಕ್ಕೆ ಸರಿಯಾದ ವಿಲೇವಾರಿ ಪದ್ಧತಿ ಇನ್ನು ಆಗಿಲ್ಲ ಆದರೆ ಸಿಕ್ಕಿಂ ಅಲ್ಲಿ ಅಲ್ಲಿನ ಜನತೆ ಇದರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಅದಲ್ಲದೆ ಶಾಲೆ ಗಳಲ್ಲಿ ಕೂಡ ಸ್ವಚ್ಛತೆ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತದೆ. ಹೆಣ್ಣು ಮಕ್ಕಳ ಪ್ಯಾಡ್ ವಿಲೇವಾರಿ ಕೂಡ ಬಹಳ ಕಟ್ಟು ನಿಟ್ಟಿನ ಕ್ರಮದೊಂದಿಗೆ ನಡೆಯುತ್ತದೆ. ಇನ್ನು ರಸ್ತೆಗಳಲ್ಲಿ ಕಸ ಬಿಸಾಡುವುದು ಬಿಡಿ ಸಿಗಾರೆಟ್ ಗಳನ್ನೂ ಸೇದಿ ಬಿಸಾಡುವುದು ನೋಡಲು ಸಿಗುವುದೇ ಇಲ್ಲ. ಅಷ್ಟು ಸ್ವಚ್ಛತೆಗೆ ಮಹತ್ವ ಕೊಡುತ್ತಾರೆ ಸಿಕ್ಕಿಂ ಜನತೆ. ವರದಿಗಳ ಪ್ರಕಾರ ಸಿಕ್ಕಿಂ ನ ೪ ಜಿಲ್ಲೆಗಳು ದೇಶದ ಟಾಪ್ ೧೦ ಅತ್ಯಂತ ಸ್ವಚ್ಛ ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
೩. ರೇಬಿಸ್ ನಿಂದ ಮುಕ್ತಿ:- ದೇಶದಲ್ಲಿ ರೇಬಿಸ್ ಇಂದ ಪ್ರತಿ ವರ್ಷ ೨೦೦೦೦ ಜನ ಸಾ’ಯು’ತ್ತಿದ್ದಾರೆ, ಇದು ೨೦೧೧ ರ ಡೇಟಾ ಈಗ ಇದರ ಸಂಖ್ಯೆ ಬಹಳ ಜಾಸ್ತಿ ಇರಬಹುದು. ಆದರೆ ಸಿಕ್ಕಿಂ ಕಳೆದ ೧೦ ವರ್ಷಗಳಲ್ಲಿ ಒಂದು ಉತ್ತಮ ಕಾರ್ಯಕ್ರಮ ಜಾರಿ ಮಾಡಿದೆ ಇದನ್ನು sikkim anti rabies and animal health ಈ ಕಾರ್ಯಕ್ರಮ ದ ಯಶಸ್ಸಿನ ಬಗ್ಗೆ ಹಲವಾರು ವರದಿಗಳು ಕೂಡ ಪ್ರಕಟವಾಗಿದೆ. ಇದರಿಂದ ಸಿಕ್ಕಿಂ ಅಲ್ಲಿ ರೇಬಿಸ್ ಇಂದ ಸಾ’ಯು’ವ ಸಂಖ್ಯೆ ಬಹಳ ಕಡಿಮೆ ಆಗಿದೆ. ಇದು ದೇಶದ ಇತರ ರಾಜ್ಯಗಳಿಗೆ ಒಂದು ಪಾಠ ಕೂಡ ಆಗಿದೆ. ಇದನ್ನು ಇಡೀ ದೇಶದಲ್ಲಿ ಅಳವಡಿಸಿದರೆ ರೇಬಿಸ್ ಇಂದ ದೇಶ ಮು’ಕ್ತಿ ಕಾಣಲು ಸಾಧ್ಯವಾಗಬಹುದು.
೪. ಹ್ಯಾಪಿನೆಸ್:- ಹರ್ಯಾಣದ ಒಂದು ಸಂಸ್ಥೆ ನಡೆಸಿದ ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಒಟ್ಟು ೧೬೯೫೦ ಜನರನ್ನು ಸಂದರ್ಶನ ಮಾಡಲಾಗಿತ್ತು. ಇದರ ಉದ್ದೇಶ ದೇಶದಲ್ಲಿ ಯಾವ ರಾಜ್ಯ ಅತಿ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ ಎಂದು. ಈ ಟಾಪ್ ೫ ರಾಜ್ಯಗಳಲ್ಲಿ ಸಿಕ್ಕಿಂ ಸ್ಥಾನ ಪಡೆದಿದೆ. ೫. ಆರ್ಗಾನಿಕ್ ಸ್ಟೇಟ್:- ಆರ್ಗಾನಿಕ್ ಅಂದರೆ ಸಾವಯವ ಕೃಷಿ ಪ್ರಧಾನ ರಾಜ್ಯ. ಇಡೀ ದೇಶದಲ್ಲಿ ಮೊದಲ ಹಾಗು ಬಹುಶ ಒಂದೇ ರಾಜ್ಯ ೧೦೦% ಸಾವಯವ ಕೃಷಿ ಪ್ರಧಾನವಾಗಿದೆ. ೨೦೧೬ ರಲ್ಲೇ ಈ ರಾಜ್ಯ ಇದನ್ನು ಘೋಷಿಸಿತ್ತು. ಇದನ್ನು ಸಾಧಿಸಲು ಸಿಕ್ಕಿಂ ೨೦೦೩ ರಿಂದ ಪ್ರಯತ್ನ ಪಡುತ್ತಿತು. ೨೦೧೦ ರಲ್ಲಿ ಆರ್ಗಾನಿಕ್ ಮಿಷನ್ ಎನ್ನುವ ಕಾರ್ಯಕ್ರಮದೊಂದಿಗೆ ಪ್ರಾರಂಭ ಮಾಡಿತು ೨೦೧೬ ರಲ್ಲಿ ಈ ಮಿಷನ್ ಗುರಿ ತಲುಪಿತು.