ಏರ್ಪೋರ್ಟ್ ಅಲ್ಲಿ ಸಲ್ಮಾನ್ ಖಾನ್ ತಡೆದ CISF ಅಧಿಕಾರಿಗೆ ಸಂಕ’ಷ್ಟ. ಅಷ್ಟಕ್ಕೂ ಆ ಅಧಿಕಾರಿ ಮುರಿದ ಪ್ರೋಟೋಕಾಲ್ ಏನು?

936

ಸೋಮನಾಥ್ ಮೊಹಾಂತಿ CISF ನ ಅಧಿಕಾರಿ ಇತ್ತೀಚಿಗೆ ಬಹಳ ಸುದ್ದಿಯಲ್ಲಿದ್ದಾರೆ. ಸಾಮಾನ್ಯರಿಗೆ ಹಾಗು ಸೆಲೆಬ್ರೆಟಿ ಗಳಿಗೂ ಒಂದೇ ರೀತಿಯ ನಿಯಮ ಪಾಲಿಸುವಂತೆ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಇವರ ವಿಡಿಯೋ ಬಹಳ ವೈರಲ್ ಆಗಿತ್ತು. ಅದಲ್ಲದೆ ಇಂತಹ ದಕ್ಷ ಅಧಿಕಾರಿ ದೇಶದೆಲ್ಲೆಡೆ ಇರಬೇಕು ಎನ್ನುವ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿತ್ತು. ಇದೀಗ ಈ ಅಧಿಕಾರಿಗೆ ಸಂಕ’ಷ್ಟ ಎದುರಾಗಿದೆ. ಅಷ್ಟಕ್ಕೂ CISF ಅಧಿಕಾರಿ ಮಾಡಿದ್ದರು ಏನಂತೀರಾ ಇಲ್ಲಿದೆ ಅದರ ಮಾಹಿತಿ.

ಮೊನ್ನೆ ದೇಶದ ಅತಿ ದೊಡ್ಡ ಸೆಲೆಬ್ರಿಟಿ ಸಲ್ಮಾನ್ ಖಾನ್ ತಮ್ಮ ಮುಂದಿನ ಸಿನಿಮಾ ಟೈಗರ್ ೩ ಚಿತ್ರೀಕರಣಕ್ಕೆ ರಷ್ಯಾ ಗೆ ಹೋಗಲು ವಿಮಾನ ನಿಲಧನಕ್ಕೆ ಬಂದಿದ್ದರು. ಅದೇ ಸಂಧರ್ಭದಲ್ಲಿ ಅವರನ್ನು ಭೇಟಿಯಾಗಲು ಹಾಗೇನೇ ಅವರ ಜೊತೆ ಫೋಟೋ ತೆಗೆದುಕೊಳ್ಲಲು ಬಹಳ ಜನರು ಕೂಡ ಸೇರಿದ್ದರು. ವಿಮಾನ ನಿಲ್ದಾಣದಲ್ಲಿ ಪ್ರತಿಯೊಬ್ಬರಿಗೂ ತಪಾಸಣೆ ಇರುತ್ತದೆ. ಕೆಲವು ಕಡೆ ದೊಡ್ಡ ವ್ಯಕ್ತಿಗಳು ಹಾಗು ಸೆಲಬ್ರೆಟಿ ಗಳಿಗೆ ವಿಶೇಷ ರೀತಿಯಲ್ಲಿ ನಡೆದುಕೊಳ್ಳಲಾಗುತ್ತದೆ. ಆದರೆ ಈ CISF ಅಧಿಕಾರಿ ಎಲ್ಲರು ಸಮಾನರು ಎನ್ನುವ ದೃಷ್ಟಿಯಲ್ಲಿ ಸಲ್ಮಾನ್ ಖಾನ್ ಗು ಲೈನ್ ಅಲ್ಲಿ ಬಂದು ತಪಾಸಣೆ ನಡೆಸುಕೊಳ್ಳುವಂತೆ ಹೇಳಿದ್ದಾರೆ. ಇದು ಎಲ್ಲರ ಗಮನ ಸೆಳೆದಿದೆ.

ತನ್ನ ಕೆಲಸ ಮಾಡಿದ ಅಧಿಕಾರಿಗೆ ಸಂಕಷ್ಟ ಏಕೆ?
ಸಲ್ಮಾನ್ ಖಾನ್ ತಡೆದು ಸಾಮಾನ್ಯರ ರೀತಿ ತಪಾಸಣೆಗೆ ಒಳಪಡಿಸಿದ್ದಕ್ಕೆ ಬಹಳ ಪ್ರಶಂಸೆ ಪಡೆದಿದ್ದರು. ಆದರೆ ಇವರ ವಿಡಿಯೋ ವೈರಲ್ ಆದ ನಂತರ ಬಹಳಷ್ಟು ಮಾಧ್ಯಮದವರು ಅಧಿಕಾರಿಯ ಇಂಟರ್ವ್ಯೂ ಮಾಡಲು ಬಯಸಿದ್ದರು. ಹಾಗೇನೇ ಒಂದು ಮಾದ್ಯಮಕ್ಕೆ ಸಂದರ್ಶನ ಕೂಡ ನೀಡಿದ್ದರು. ಇದು ಸರಕಾರಿ ಸಂಸ್ಥೆಯ ನಿಯ’ಮ ದ ವಿರು’ದ್ಧವಾಗಿದೆ. ಅದೇ ಕಾರಣಕ್ಕೆ ಅಧಿಕಾರಿ ಸೋಮನಾಥ್ ಮೊಹಾಂತಿ ಅವರು ತಮ್ಮ ಮೊಬೈಲ್ ಅನ್ನು ಹಿರಿಯ ಅಧಿಕಾರಿಗಳಿಗೆ ಒಪ್ಪಿಸಬೇಕಾಗಿ ಬಂದಿದೆ.

 

Leave A Reply

Your email address will not be published.