ದೀಪಾವಳಿಯಂದು ಅಮೆರಿಕಾ ಅಧ್ಯಕ್ಷರು ಹಚ್ಚಿದ ದೀಪ ನಮ್ಮ ಕರ್ನಾಟಕದ ಜಿಲ್ಲೆ ಒಂದರಿಂದ ಕಳಿಸಲ್ಪಟ್ಟಿತ್ತು ಯಾವುದು ಆ ಜಿಲ್ಲೆ ?? ಮುಂದೆ ಓದಿರಿ..

393

ದೀಪಾವಳಿ ಎಂದರೆ ಅದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಇಡೀ ದೇಶಕ್ಕೆ ದೇಶವೇ ಆಚರಿಸುವ ಹಬ್ಬ ಇಂದು ವಿಶ್ವದಾದ್ಯಂತ ಆಚರಿಸುತ್ತಿದ್ದಾರೆ. ದೀಪಾವಳಿ ಇಂದು ಕೇವಲ ಧರ್ಮ ಒಂದಕ್ಕೆ ಸೀಮಿತವಾಗಿಲ್ಲ. ಜಾತಿ ಮತ ಧರ್ಮ ಎಂಬ ಎಲ್ಲೆಯ ಮೀರಿ ಅದು ಸಹೋದರತೆಯ ಸಂಬಂಧ ಬೆಳೆಸಿದೆ. ಈ ಬಾರಿಯ ದೀಪಾವಳಿ ಹಬ್ಬವನ್ನು ಅಮೆರಿಕಾದ ಶ್ವೇತ ಭವನದಲ್ಲಿ ಆಚರಿಸಲಾಗಿತ್ತು. ಅಮೆರಿಕಾ ಅಧ್ಯಕ್ಷ ಜೋ ಬೈಡನ್ ದೀಪ ಹಚ್ಚಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.

ಶ್ವೇತ ಭವನದಲ್ಲಿ ಹಚ್ಚಿದ ದೀಪ ಕುಂದಾಪುರದಿಂದ ತರಲಾಗಿತ್ತು- ಹೌದು ಈ ವಿಚಾರ ಸತ್ಯ. ಅಂದು ಬೈಡನ್ ಅವರು ಬೆಳಗಿದ ದೀಪ ಕುಂದಾಪುರದಿಂದ ತರಿಸಲಾಗಿತ್ತು. ಕುಂದಾಪುರದ ಅಡಿಗ ಮನೆತನದ ಚಂದ್ರಶೇಖರ ಅಡಿಗ ಅವರ ಪುತ್ರಿ ಡಾ. ರಮೇಶ್ ಅಡಿಗ ಅವರು ಬಹುಕಾಲದಿಂದ ಅಮೆರಿಕಾದಲ್ಲಿ ನೆಲೆಸಿದ್ದಾರೆ . ಅವರ ಮಗಳು ಮಾಲಾ ಅವರು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರ ಕಾನೂನು ಕಾರ್ಯದರ್ಶಿ ಆಗಿ ಕೆಲಸ ಮಾಡುತ್ತಿದ್ದು. ಅವರು ಅಮೆರಿಕಾದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ಕೊಡುಗೆಯಾಗಿ ಈ ದೀಪವನ್ನು ನೀಡಿದ್ದರು. ಬೆಳಕಿನ ಹಬ್ಬ ದೀಪಾವಳಿ ಕತ್ತಲಿನಿಂದ ಜ್ಞಾನದ ಬೆಳಕಿನತ್ತ ಕೊಂಡೊಯ್ಯುವ ಹಬ್ಬವಾಗಲಿ ಎಂದು ಅವರು ಹಾರೈಸಿದರು.

Leave A Reply

Your email address will not be published.