“ಮಾಡಿದುಣ್ಣೋ ಮಹರಾಯ” ಚೀನಾದಲ್ಲಿ ಹೆಚ್ಚಾಗುತ್ತಿದೆ ಕೊರೋನಾ ಸೋಂಕು. ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮವೇನು ಗೊತ್ತೇ?

696

ಚೀನಾ ವಿಶ್ವದಾದ್ಯಂತ ಅತಿ ಹೆಚ್ಚು ದೂಷಿಸಲ್ಪಡುವ ದೇಶ. ಜಗತ್ತಿಗೆ ಒಂದಿಲ್ಲೊಂದು ಸಮಸ್ಯೆ ತಂದು ಖುಷಿ ಪಡುವ ದೇಶವೆಂದರೂ ತಪ್ಪಾಗಲಾರದು. ಕಳೆದೆರಡು ವರ್ಷಗಳಿಂದ ಜಗತ್ತು ಅಪಾರ ನಷ್ಟ ಅನುಭವಿಸುತ್ತಿದೆ. ಇದಕ್ಕೆ ಮುಖ್ಯ ಕಾರಣನೇ ಚೀನಾ ಎಂದರೂ ತಪ್ಪಾಗಲಾರದು. ತನ್ನ ಸಾಲದ ಬಲೆಗೆ ಬೀಳಿಸಿ ಹೊರ ದೇಶಗಳ ಆಸ್ತಿ ಕಬಳಿಸುವ ಕೆಟ್ಟ ಅಭ್ಯಾಸದ ಜೊತೆಗೆ ಕೊರೋನಾ ಎಂಬ ಸೋಂಕನ್ನು ದೇಶಗಳಿಗೆ ಹರಡಿ ತಾನು ಅದರಲ್ಲಿ ಲಾಭ ಮಾಡಿಕೊಳ್ಳುವ ಹುನ್ನಾರ ರೂಪಿಸಿತ್ತು.

ಮಾಡಿದ್ದುಣ್ಣೋ ಮಹಾರಾಯ ಅನ್ನುವ ಗಾದೆಗೆ ಈ ಚೀನಾದ ಉದಾಹರಣೆ ಬಹಳ ಹೊಂದುತ್ತದೆ. ಕೊರೋನಾ ಹಂಚಿ ತನ್ನ ದೇಶದಲ್ಲಿ ಯಾವುದೇ ಸೋಂಕು, ನಷ್ಟವಿಲ್ಲದೇ ಎರಡು ವರ್ಷ ಕಳೆದ ಚೀನಾ ಬೇರೆ ದೇಶಗಳಿಗೆ ಹೋಲಿಸಿದರೆ ಅದರ ಜಿಡಿಪಿ ಕೂಡಾ ಸುದಾರಿತ ಮಟ್ಟದಲ್ಲಿತ್ತು. ಆದರೆ ಇವಾಗ ಅಲ್ಲಿ ಕೊರೋನಾ ಸೋಂಕು ಜನರ ಮೇಲೆ ಗಂಭಿರವಾಗಿ ಪರಿಣಮಿಸಿದೆ. ಕಳೆದ ವಾರಗಳಲ್ಲಿ ನಾವು ಕೇಳಿದಂತೆ ಚೀನಾದ ಪ್ರಮುಖ ನಾಲ್ಕು ನಗರಗಳು ಸಂಪೂರ್ಣ ಲಾಕ್ಡೌನ್ ಗೆ ಒಳಗಾಗಿತ್ತು. ಇದಲ್ಲದೇ ಒಂದೂ ಕೊರೋನಾ ಪ್ರಕರಣಗಳಿಲ್ಲದ ಚೀನಾದಲ್ಲಿ ಒಮ್ಮೆಗೆ ನೂರಾರು ಪ್ರಕರಣಗಳು ದಾಖಲಾಗುತ್ತಿದೆ.

ಇದರಿಂದ ಎಚ್ಚೆತ್ತ ಚೀನಾ ಈಗಾಗಲೇ ಪ್ರಕರಣ ಜಾಸ್ತಿ ಕಾಣಿಸಿಕೊಂಡ ನಾಲ್ಕು ಪ್ರಮುಖ ನಗರಗಳನ್ನು ಮುಚ್ಚುದೆ. ಅದಲ್ಲದೇ ಈಗ ಮಾಲ್ಗಳನ್ನು ಮುಚ್ಚಲು ಆದೇಶ ನೀಡಿದೆ. ಇಷ್ಟೇ ಅಲ್ಲದೇ ತನ್ನ ದೇಶದಲ್ಲಿ ತಯಾರಾದ ಲಸಿಕೆಗಳು ಪ್ರಯೋಜನಕಾರಿಯಾಗಿಲ್ಲ ಎಂದು ಹಲವಾರು ದೇಶಗಳು ಚೀನಾ ಲಸಿಕೆಗೆ ಪರ್ಯಾಯ ಲಸಿಕೆಗಳಿಗೆ ಬೇಡಿಕೆ ಇಡುತ್ತಿದೆ. ಇದಕ್ಕೆ ಉದಾಹರಣೆ ಇಂಡೋನೇಷ್ಯಾ ಹಾಗು ಸೌದಿ ಅರಬ್ ದೇಶಗಳು. ಚೀನಾ ತಂದಿಟ್ಟು ಆಟ ಆಡಲು ಪ್ರಯತ್ನಿಸಿತ್ತು ಆದರೇ ದೇವರ ನಿಶ್ಚಯವೇ ಬೇರೆ ಇತ್ತು.

ಅದೇ ರೀತಿಯಾಗಿ ನೆರೆಯ ದೇಶ ಪಾಕಿಸ್ತಾನದ ಜೊತೆಗೆ ಸೇರಿ ಭಾರತದ ಆರ್ಥಿಕತೆ ನಷ್ಟಕ್ಕೆ ದೂಡಲು ಎಲ್ಲಾ ಪ್ರಯತ್ನಗಳನ್ನು ನಡೆಸಿತ್ತು. ಆದರೆ ಅದೇ ಕೋರೋನ ವನ್ನು ಶಕ್ತಿ ಯನ್ನಾಗಿಸಿ make in India ge ಒತ್ತು ಕೊಡಲಾಯಿತು. Vocal for local ಎಂಬ ಶೀರ್ಷಿಕೆ ಅಡಿಯಲ್ಲಿ ದೇಶೀಯ ವ್ಯಾಪಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಯಿತು. ಇದಷ್ಟೇ ಅಲ್ಲದೇ ಮೋದಿ ಅವರ ರಾಜ ತಾಂತ್ರಿಕತೆ ಇಂದಾಗಿ ಚೀನಾದ ಕೈಗೊಂಬೆಯಾಗಿ ಆಡುತ್ತಿದ್ದ ಕೆಲ ದೈತ್ಯ ಕಂಪನಿಗಳು ಭಾರತಕ್ಕೆ ತನ್ನ ಉತ್ಪಾದನಾ ಘಟಕವನ್ನು ಸ್ಥಳಾಂತರ ಮಾಡಿತು. ಇದರ ಪರಿಣಾಮ ಎಂಬಂತೆ ಅದೆಷ್ಟೋ ಲಕ್ಷ ಕೋಟಿ ನಷ್ಟ ಅನುಭವಿಸಿತು ಚೈನಾ.

ಅದೇ ರೀತಿಯಾಗಿ ದೇಶೀಯ ವಸ್ತುಗಳಿಗೆ ಬೇಡಿಕೆ ಹೆಚ್ಚಾದ ಕಾರಣ ಚೈನಾ ವಸ್ತುಗಳ ಬೇಡಿಕೆ ಕಡಿಮೆ ಆಯಿತು ಅದರ ನೈಜ ದರ್ಶನ ದೀಪಾವಳಿ ಯ ವ್ಯಾಪಾರ ವಹಿವಾಟಿನಲ್ಲಿ ಕಂಡು ಬಂತು ದೇಶೀಯ ವ್ಯಾಪಾರ ಸಂಘಟನೆ ಹೇಳುವ ಪ್ರಕಾರ ಚೈನಾ ಕಂಪನಿಗಳಿಗೆ ಅದೆಷ್ಟೋ ಲಕ್ಷ ಕೋಟಿ ರೂಪಾಯಿ ವಹಿವಾಟು ನಷ್ಟ ಆಯಿತು. ಎಲ್ಲಾ ರೀತಿಯಲ್ಲೂ ದೇಶೀಯ ವಸ್ತುಗಳ ಬಳಕೆಯಿಂದ ನಮ್ಮ ದೇಶದ ಆರ್ಥಿಕತೆ ಸುಧಾರಣಾ ಹಂತಕ್ಕೆ ಬಂದು ತಲುಪಿದೆ. ಯಾರನ್ನೋ ಸಿಕ್ಕಿಸುವ ಭರದಲ್ಲಿ ಹೆಣೆದ ಬಲೆ ತನ್ನನ್ನೇ ಸುತ್ತಿ ಹಾಕಿಕೊಂಡ ಪರಿಯಾಗಿದೆ ಚೀನಾದ ಸ್ಥಿತಿ.

Leave A Reply

Your email address will not be published.