ರಾಹುಲ್ ದ್ರಾವಿಡ್ ಪ್ರಧಾನ ಕೋಚ್ ಆಗುತ್ತಿದ್ದಂತೆಯೇ ವಿವಿಎಸ್ ಲಕ್ಮಣ್‌ರವರಿಗೂ ಒಲಿದು ಬಂತು ಮಹತ್ವದ ಹುದ್ದೆ. ಭಾರತ ತಂಡದ ಹೊಸ ಅಧ್ಯಾಯ ಶುರು.

946

ಭಾರತ ಕ್ರಿಕೆಟ್ ತಂಡ ಐಸಿಸಿಯಲ್ಲಿ ಗ್ರೂಪ್ ಹಂತದಲ್ಲಿ ಹೊರಬಿದ್ದದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬಹಳ ಬೇಸರದ ಸಂಗತಿ ಆಗಿತ್ತು. ಇದಲ್ಲದೇ ಈ ಸರಣಿ ವಿರಾಟ್ ಕೊಹ್ಲಿ ಯ‌ ಕೊನೆಯ ಟಿ-೨೦ ನಾಯಕತ್ವದ ಪಂದ್ಯವಾಗಿದ್ದು ಬಹಳ ನಿರೀಕ್ಷೆ ಕೂಡಾ ಇತ್ತು. ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರವಿ ಶಾಸ್ತ್ರಿ ಯವರದ್ದೂ ಕೂಡಾ ಕೊನೆಯ ಸರಣಿ ಆಗಿತ್ತು ಈ ಟಿ-೨೦ ವಿಶ್ವಕಪ್ ಸರಣಿ.

ಮುಂದಿನ ಭಾರತ ತಂಡದ ಪ್ರಧಾನ ತರಬೇತುಗಾರರಾಗಿ ಭಾರತ‌ ಕ್ರಿಕೆಟ್ ತಂಡದ ಮಾಜಿ ಆಟಗಾರ ‘ದಿ ವಾಲ್’ ಅಂತಾನೆ ಕರೆಸಿಕೊಳ್ಳುವ ರಾಹುಲ್ ದ್ರಾವಿಡ್ ನೇಮಕ ಗೊಂಡಿದ್ದಾರೆ. ಇದರ ಜೊತೆಗೆ ಭಾರತ‌ ಟಿ-೨೦ ತಂಡಕ್ಕೆ ಕೂಡಾ ಹೊಸ ನಾಯಕ ಬರುತ್ತಿದ್ದಾರೆ. ರಾಹುಲ್ ದ್ರಾವಿಡ್ ಅವರ ಬಗ್ಗೆ ಹೇಳಬೇಕೆಂದರೆ ಇದಕ್ಕಿಂತ ಮೊದಲು ಅಂಡರ್ -೧೯ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದವರು. ಈಗಿನ ತಂಡದ ರಿಷಬ್ ಪಂತ್, ಸಂಜು ಸಾಮ್ಸನ್, ಪೃಥ್ವಿ ಷಾ ಇವರ ಗರಡಿಯಲ್ಲಿ ಪಳಗಿದ ಆಟಗಾರರಾಗಿದ್ದಾರೆ.

ಈಗ ವಿಷಯವೇನೆಂದರೆ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರಿಗೆ ಹೊಸ ಜವಬ್ದಾರಿ ಬಂದೊದಗಿದೆ. ರಾಹುಲ್ ದ್ರಾವಿಡ್ ಅವರು ಭಾರತ ತಂಡದ ತರಬೇತುದಾರನಾಗುವ ಮೊದಲು ರಾಷ್ಟ್ರೀಯ ಕ್ರಿಕೆಟ್ ಅಕಾಡಮೆಯ ಮುಖ್ಯಸ್ಥರಾಗಿದ್ದರು. ಈಗ ಆ ಖಾಲಿಯಾಗಿದೆ. ಇದಕ್ಕೆ ಹಿಸದಾಗಿ ವಿವಿಎಸ್ ಲಕ್ಷ್ಮಣ್ ಅವರು ಆಯ್ಕೆಯಾಗಿದ್ದಾರೆ. ಲಕ್ಷ್ಮಣ್ ಅವರು ಇದಕ್ಕಿಂತ ಮೊದಲು ಐಪಿಎಲ್ ತಂಡವಾದ ಸನ್ ರೈಸರ್ಸ್ ಹೈದರಬಾದ ತಂಡದ ಪ್ರಧಾನ ತರಬೇತುದಾರರಾಗಿದ್ದವರು. ಇದೀಗ NCA ಮುಖ್ಯಸ್ಥರಾಗಲು ಒಪ್ಪಿಕೊಂಡಿದ್ದಾರೆ. ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ದ್ರಾವಿಡ್ ಭಾರತ ತಂಡದ ಪ್ರಧಾನ ತರವೇತುದಾರರಾಗಿ ಹಾಗು ವಿವಿಎಸ್ ಲಕ್ಷ್ಮಣ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವುದು ಭಾರತ ಕ್ರಿಕೆಟ್ ತಂಡದ ಹೊಸ ಅಧ್ಯಾಯ ಶುರುವಾದಂತಿದೆ.

Leave A Reply

Your email address will not be published.