ಭಾರತದಲ್ಲಿರುವ ಅತ್ಯಂತ ದುಬಾರಿ ರೈಲು ಯಾವುದು ಗೊತ್ತೇ? ಇದರಲ್ಲಿ ಚಲಿಸಲು ಎಷ್ಟು ಹಣ ಕೇಳಿದರೆ ಅಚ್ಚರಿ ಪಡುತ್ತೀರಾ.

787

ಭಾರತೀಯ ರೈಲ್ವೆ ಇಡೀ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಕೆಲಸಗಾರರನ್ನು ಹೊಂದಿರುವ ವ್ಯವಸ್ಥೆ. ಅತ್ಯಂತ ದೊಡ್ಡ ಉದ್ದಿಮೆ ಕೂಡ ಹೌದು. ಅದೆಷ್ಟೋ ಜನಗಳಿಗೆ ಭಾರತೀಯ ರೈಲ್ವೆ ಆಧಾರ ಸ್ಥಂಭವಾಗಿದೆ.
ದೇಶದ ಮೂಲೆ ಮೂಲೆಗಳಿಗೂ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಒಂದಿದ್ದರೆ ಅದು ಭಾರತೀಯ ರೈಲ್ವೆ ಮಾತ್ರ. ಅತ್ಯಂತ ಕಡಿಮೆ ಖರ್ಚಿನಲ್ಲಿ ದೇಶ ಸುತ್ತಲು ಮನಸಿದ್ದರೆ ಭಾರತೀಯ ರೈಲ್ವೆ ಮಾತ್ರ. ಹಾಗಾದರೆ ಭಾರತೀಯ ದುಬಾರಿ ರೈಲು ಯಾವುದು ಮತ್ತು ಅದರ ಬೆಲೆ ಎಷ್ಟು ಗೊತ್ತಾಗಬೇಕಾದರೆ ಮುಂದಕ್ಕೆ ಓದಿರಿ.

“ಮಹಾರಾಜ ಎಕ್ಸ್ ಪ್ರೆಸ್ ” ಟ್ರೈನ್ ಹೌದು ಇದು ಭಾರತದ ರೈಲ್ವೆ ಇಲಾಖೆಯೇ ನಡೆಸುವ ರೈಲಾಗಿದ್ದು. ಸದ್ಯದ ಸಮಯದಲ್ಲಿ ಭಾರತದಲ್ಲಿ ಲಭ್ಯ ಇರುವ ಅತ್ಯಂತ ದುಬಾರಿ ರೈಲು ಇದಾಗಿದೆ. ಅಕ್ಟೋಬರ್ ನಿಂದ ಏಪ್ರಿಲ್ ತಿಂಗಳುಗಳ ಸಮಯದಲ್ಲಿ ಸಂಚರಿಸುತ್ತದೆ. ಇದು ಒಟ್ಟು 12 ಸ್ಥಳಗಳನ್ನು ಸುತ್ತುತ್ತದೆ. ಹೆಚ್ಚಿನ ಎಲ್ಲಾ ಸ್ಥಳಗಳು ರಾಜಸ್ಥಾನದಲ್ಲಿ ಬರುತ್ತದೆ. 23 ಭೋಗಿಗಳು ಇರುವ ಈ ರೈಲು ಅತ್ಯಂತ ಐಶಾರಾಮಿ ಅನುಭವ ನೀಡುತ್ತದೆ. ಇದರಲ್ಲಿ ಯಾವುದೇ 5 ಸ್ಟಾರ್ ಹೋಟೆಲ್ ಗಿಂತ ಕಡಿಮೆ ಆಗದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದ್ದು. ಎಲ್ಲದರ ನಿರ್ವಹಣಾ ಜವಾಬ್ದಾರಿ IRCTC ಮೇಲೆ ಇದೆ.

ಹಾಗಾದರೆ ಈ ಲಕ್ಷುರಿ ಟ್ರೈನ್ ದರ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡುವುದು ಸಹಜ. ಬನ್ನಿ ಹಾಗಾದರೆ ಇದರ ದರ ಎಷ್ಟೆಂದು ತಿಳಿಯೋಣ. ಈ ರೈಲಿನಲ್ಲಿ ಪ್ರಯಾಣಿಸಲು 3 ಲಕ್ಷದಿಂದ 16 ಲಕ್ಷದವರೆಗೆ ಟಿಕೆಟುಗಳು ಲಭ್ಯವಿದೆ. ಹೌದು ಇದು ಕೇಳಲು ವಿಚಿತ್ರ ಎನಿಸಿದರೂ ಇದು ಸತ್ಯ ಸಂಗತಿ. ಈ ರೈಲು ಒಂದು ದಿನಕ್ಕೆ ಸಂಚರಿಸುವುದಲ್ಲ ಬದಲಾಗಿ ಅದು ಪ್ಯಾಕೇಜ್ ಟೂರ್ ಮಾದರಿಯಲ್ಲಿ ಚಲಿಸುತ್ತದೆ. ಇಷ್ಟೊಂದು ಹಣ ಕೊಟ್ಟರೂ ಅದಕ್ಕೆ ಮೋಸ ಇಲ್ಲ. ಅದಕ್ಕೆ ಬದಲಾಗಿ ಎಲ್ಲಾ ರೀತಿಯ ಐಶಾರಾಮಿ ಸೌಲಭ್ಯ ನೀವು ಇಲ್ಲಿ ಪಡೆಯಬಹುದು.

Leave A Reply

Your email address will not be published.