ನ್ಯೂಜಿಲೆಂಡ್ ವಿರುದ್ಧ ಡ್ರಾ ನಂತರ ಟೆಸ್ಟ್ ಚಾಂಪಿಯನ್ ಶಿಪ್ ಅಲ್ಲಿ ಭಾರತದ ಸ್ಥಾನ ಬದಲಾವಣೆ. ಇಲ್ಲಿದೆ ಪರಿಷ್ಕೃತ ಪಟ್ಟಿ.
ಕಾನ್ಪುರದಲ್ಲಿ ನಡೆದ ಭಾರತ ಹಾಗು ನ್ಯೂಜಿಲೆಂಡ್ ಟೆಸ್ಟ್ ಪಂದ್ಯದಲ್ಲಿ ಯಾವುದೇ ಫಲಿತಾಂಶ ಸಿಗದೇ ಡ್ರಾ ನಲ್ಲಿ ಮುಕ್ತಾಯವಾಗಿದೆ. ಕೊನೆಯ ಕ್ಷಣದಲ್ಲಿ ನ್ಯೂಜಿಲೆಂಡ್ ಆಟಗಾರರು ಪಂದ್ಯವನ್ನು ಡ್ರಾ ನಲ್ಲಿ ಕೊನೆಗೊಳಿಸಲು ಸಫಲರಾದರು. ಭಾರತ ಕೊನೆಯ ದಿನ ಅತಿಥೇಯ ನ್ಯೂಜಿಲೆಂಡ್ ಗೆ ೨೩೪ ರನ್‌ಗಳಿಸಿ ೨೮೪ ರನ್ನುಗಳ ಗುರಿ ನೀಡಿತು. ನ್ಯೂಜಿಲೆಂಡ್ ಕೊನೆಕ್ಷಣಕ್ಕೆ ೯ ವಿಕೆಟ್ ಕಳೆದುಕೊಂಡು ಕೇವಲ ೧೬೫ ರನ್ ಗಳಿಸಿ ಡ್ರಾ ಮಾಡುವಲ್ಲಿ ಯಶಸ್ವಿಯಾಯಿತು.
ಭಾರತೀಯ ತಂಡ ಗೆಲ್ಲುವ ಹಂತಕ್ಕೆ ಬಂದು ಕೊನೆಯ ಕ್ಷಣಕ್ಕೆ ಡ್ರಾ ಆಗುವ ಮೂಲಕ ನಿರಾಶೆಗೊಂಡಿತು. ಭಾರತೀಯ ಆಟಗಾರರು ೯ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೂ ಕೊನೆಯ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಭಾರತ ಮೊದಲ ಇನ್ನಿಂಗ್ಸ್ ಅಲ್ಲಿ ೩೪೫ ರನ್ ಮಾಡಿ ಎರಡನೇ ಇನ್ನಿಂಗ್ಸ್ ಅಲ್ಲಿ ೭ ವಿಕೆಟ್ ಗೆ ೨೩೪ ರನ್ ಮಾಡಿ ಡಿಕ್ಲೇರ್ ಮಾಡಿಕೊಂಡಿತು. ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ ೨೯೬ ರನ್ ಮಾಡಿ ಎರಡನೇ ಇನ್ನಿಂಗ್ಸ್ ನಲ್ಲಿ ೯ ವಿಕೆಟ್ ಗೆ ೧೬೫ ರನ್ ಗಳಿಸಿತು.

ಭಾರತ ಈ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಪಂದ್ಯ ಡ್ರಾನಲ್ಲಿ ಮುಕ್ತಾಯದಿಂದ ಭಾರತ ತಂಡಕ್ಕೆ ನಷ್ಟವಾಗಿದೆ. ಈ ಪಂದ್ಯಕ್ಕೂ ಮುನ್ನ ಭಾರತದ ಗೆಲುವಿನ ಪ್ರತಿಶತ ೫೪% ಇತ್ತು. ನ್ಯೂಜಿಲೆಂಡ್ ಡ್ರಾ ನಂತರ ಭಾರತದ ಗೆಲುವಿನ ಪ್ರತಿಶತ ೫೦% ಗೆ ಇಳಿದಿದೆ. ಅದೇ ರೀತಿ ೩೦ ಅಂಕ ಪಡೆದಿರುವ ಭಾರತಕ್ಕೆ ೪ ಅಂಕಗಳು ಕಡಿಮೆ ಕೂಡಾ ಆಗಿದೆ. ನ್ಯೂಜಿಲೆಂಡ್ ವಿಷಯಕ್ಕೆ ಬರುವುದಾದರೆ ಮೊದಲ ಪಂದ್ಯವಾಡುತ್ತಿರುವ ನ್ಯೂಜಿಲೆಂಡ್ ಪಂದ್ಯ ಡ್ರಾ ಮಾಡುವ ಮೂಲಕ ಗೆಲುವಿನ ಪ್ರತಿಶತ ೩೩% ಹಾಗು ೪ ಅಂಕಗಳನ್ನು ಪಡೆದುಕೊಂಡಿದೆ.