ವಿಶ್ವದ ಅತ್ಯಂತ ಹೈ ಸೆಕ್ಯೂರಿಟಿ ಫೋನ್ ಅನ್ನು 15 ಸೆಕೆಂಡ್ ನಲ್ಲಿ ಹ್ಯಾಕ್ ಮಾಡಿದ ಭೂಪ ಯಾರವನು ? ಯಾವುದು ಆ ಫೋನ್?

560

ಮೊಬೈಲ್ ಬಳಕೆ ಈಗ ಸರ್ವೇ ಸಾಮಾನ್ಯವಾಗಿದೆ . ಎಲ್ಲರ ಕೈಯಲ್ಲೂ ಒಂದು ಅಥವಾ ಎರಡು ಮೊಬೈಲ್ ಇದ್ದೆ ಇದೆ. ಈಗಿನ ಈ ಕಾಲ ಘಟ್ಟದಲ್ಲಿ ಫೋನ್ ಬೇಕೆ ಬೇಕು. ಅದೊಂಥರಾ ಚಟ ಆಗಿ ಹೋಗಿದೆ. ಏನು ಕೆಲಸ ಇಲ್ಲವಾದರೂ ಕೈಯಲ್ಲಿ ಮೊಬೈಲ್ ಬೇಕೆ ಬೇಕು. ಹಾಗೆ ಕೆಲವು ಹೈ ಬ್ಯುಸಿನೆಸ್ ಮನ್ ಗಳು ತಮ್ಮ ಎಲ್ಲಾ ದಾಖಲೆಗಳನ್ನು ಭದ್ರವಾಗಿ ಇಟ್ಟುಕೊಳ್ಳಲು ಬಯಸುತ್ತಾರೆ. ಯಾರು ತಮ್ಮ ವೈಕ್ತಿಕ ವಿಷಯಗಳನ್ನು ಕದೀಯಬಾರದು ಎಂದು ಅದೆಷ್ಟೋ ಲಕ್ಷಗಟ್ಟಲೆ ಕೊಟ್ಟು ಮೊಬೈಲ್ ಕೊಳ್ಳುತ್ತಾರೆ. ಈ ಸಾಲಿನಲ್ಲಿ ನಿಲ್ಲುವ ಮೊಬೈಲ್ ಗಳಲ್ಲಿ ಆ್ಯಪಲ್ ಸಂಸ್ಥೆಯ ಐಫೋನ್ ಕೂಡ ಒಂದು. ಹೌದು ಇದು ವಿಶ್ವದ ಹೈ ಸೆಕ್ಯೂರಿಟಿ ಫೋನ್ ಲಿಸ್ಟ್ ನಲ್ಲಿ ಮೊದಲನೆಯ ಸ್ಥಾನ ಪಡೆದಿದೆ.

ಆದರೆ ಇದು ಎಷ್ಟು ಸೇಫ್ ? ಹಾಗಾದರೆ ಯಾರು ಇದನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲವೇ ಎಂಬ ಯೋಚನೆ ನಿಮ್ಮ ಮನಸಿನಲ್ಲಿದ್ದರೆ ಅದಕ್ಕೆ ಉತ್ತರ ಹೌದು ಸಾಧ್ಯ ಇದೆ. ಯಾಕೆಂದರೆ ಇದನ್ನು ಈಗಾಗಲೇ ಹ್ಯಾಕ್ ಮಾಡಿ ತೋರಿಸಿದ್ದಾರೆ . ಹಾಗಾದರೆ ಯಾರು ಆ ವ್ಯಕ್ತಿ ಬನ್ನಿ ತಿಳಿಯೋಣ.

ಆ್ಯಪಲ್ ಐಫೋನ್ 13 ಪ್ರೊ ಮಾರುಕಟ್ಟೆಗೆ ಬಂದಾಗ ಅದನ್ನು ಹ್ಯಾಕ್ ಮಾಡುವ ಚಾಲೆಂಜ್ ನೀಡಲಾಗಿತ್ತು. ಅದಕ್ಕಾಗಿ ಬೇರೆ ಬೇರೆ ದೇಶದಿಂದ ಘಟಾನುಘಟಿ ಹ್ಯಾಕರ್ ಗಳು ಬಂದಿದ್ದರು. ಅವರಲ್ಲಿ ಇವರು ಒಬ್ಬರು ಅವರ ಹೆಸರು Zhou Yahui ಇವರು ಮೂಲತಃ ಚೈನಾದವರೆ Kunlun Lab na CEO ಆಗಿರುವ ಇವರು ಬರಿ 15 ಸೆಕೆಂಡ್ ನಲ್ಲಿ ಐಫೋನ್ 13 ಪ್ರೊ ವನ್ನೂ ಹ್ಯಾಕ್ ಮಾಡಿದ್ದಾರೆ. ಅದೇನೇ ಇರಲಿ ತಂತ್ರಜ್ಞಾನ ಬೆಳೆದು ಹೊದಾಗೆಲ್ಲ ಅದಕ್ಕೆ ಅನುಗುಣವಾಗಿ ಇಂತಹ ಹ್ಯಾಕರ್ ಗಳು ಕೂಡ ಕೆಲಸ ಮಾಡುತ್ತಾ ಇರುತ್ತಾರೆ. ನಮ್ಮ ಜಾಗ್ರತೆಯಲ್ಲಿ ನಾವು ಇದ್ದಾಗ ಮಾತ್ರ ಇಂತಹ ಮೋಡಗಳಿಂದ ನಮ್ಮನ್ನು ನಾವು ನಷ್ಟ ಆಗದಂತೆ ನೋಡಿಕೊಳ್ಳಬಹುದು.

Leave A Reply

Your email address will not be published.