147 ವರ್ಷಗಳಲ್ಲಿ ಮೊದಲ ಬಾರಿಗೆ ಸಚಿನ್ ದಾಖಲೆ ಸರಿದೂಗಿಸಲು ಕೇವಲ 58 ರನ್ ದೂರ ಇರುವ ರನ್ ಮಶೀನ್ ವಿರಾಟ್ ಕೊಹ್ಲಿ! ಏನಿದು ದಾಖಲೆ (1st Time In 147 Years)

106

ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತೀಯ ಕ್ರಿಕೆಟ್ ತಂಡವು ಕಣಕ್ಕೆ ಇಳಿಯಲಿದೆ, ಆದರೆ ಈ ಸಮಯದಲ್ಲಿ ಎಲ್ಲರ ಚಿತ್ತ ವಿರಾಟ್ ಕೊಹ್ಲಿ ಅತ್ತ ಇರಲಿದೆ. ಕೊಹ್ಲಿ ಈಗಾಗಲೇ T20I ಪಂದ್ಯಗಳಿಂದ ನಿವೃತ್ತರಾಗಿದ್ದು ಕೇವಲ ಅವರನ್ನು ಇನ್ನೂ odi ಮತ್ತು ಟೆಸ್ಟ್ ಪಂದ್ಯಗಳಲ್ಲಿ ಅಭಿಮಾನಿಗಳು ಕಾಣಬಹುದು. ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ನಡುವೆ ಬಹಳಷ್ಟು ಹೋಲಿಕೆಗಳು ಹೆಚ್ಚಾಗಿ ಜನರು ಅಭಿಮಾನಿಗಳು ಮಾಡುತ್ತಾ ಇರುತ್ತಾರೆ, ಕೊಹ್ಲಿ 80 ಅಂತಾರಾಷ್ಟ್ರೀಯ ಶತಕಗಳನ್ನು ಹೊಂದಿದ್ದಾರೆ ಮತ್ತು ಶತಕಗಳ ಸಂಖ್ಯೆಯಲ್ಲಿ ತೆಂಡೂಲ್ಕರ್ (100) ಶತಕ ಬಾರಿಸಿದ್ದರೇ.

ಬಾಂಗ್ಲಾದೇಶ ಟೆಸ್ಟ್ ಸರಣಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ಬರೆಯಲು ಕೊಹ್ಲಿ ಸಜ್ಜಾಗಿದ್ದಾರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27,000 ರನ್ ಪೂರೈಸಲು ವಿರಾಟ್ ಕೊಹ್ಲಿಗೆ 58 ರನ್ ಅಗತ್ಯವಿದೆ. ಈ ಹಿಂದೆ ಈ ಮೈಲಿಗಲ್ಲು ತಲುಪಿದ್ದು ಸಚಿನ್ ಒಬ್ಬರೇ ಸಚಿನ್ 27,000 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ ತಲುಪಿದ ಆಟಗಾರರಾಗಿದ್ದಾರೆ – 623 ಇನ್ನಿಂಗ್ಸ್ (226 ಟೆಸ್ಟ್ ಇನ್ನಿಂಗ್ಸ್, 396 ODI ಇನ್ನಿಂಗ್ಸ್, 1 T20I ಇನ್ನಿಂಗ್ಸ್). ಕೊಹ್ಲಿ ಇದುವರೆಗೆ 591 ಇನ್ನಿಂಗ್ಸ್‌ಗಳಲ್ಲಿ 26942 ರನ್ ಗಳಿಸಿದ್ದಾರೆ. ಕೊಹ್ಲಿ ತನ್ನ ಮುಂದಿನ ಎಂಟು ಇನ್ನಿಂಗ್ಸ್‌ಗಳಲ್ಲಿ 58 ರನ್ ಗಳಿಸಲು ಸಾಧ್ಯವಾದರೆ ಈ ದಾಖಲೆ ಕೊಹ್ಲಿ ಪಾಲಾಗುತ್ತದೆ. ಅವರು 147 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ 600 ಕ್ಕಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 27,000 ರನ್‌ಗಳನ್ನು ತಲುಪಿದ ಮೊದಲ ಕ್ರಿಕೆಟಿಗರಾಗುತ್ತಾರೆ.

ಇಲ್ಲಿಯವರೆಗೆ, ಸಚಿನ್ ಹೊರತುಪಡಿಸಿ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.ಆದರೆ ಇವರೆಲ್ಲ ಸಚಿನ್ ಗಿಂತ ಹೆಚ್ಚಿನ ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದವರಾಗಿದ್ದಾರೆ. ಎಲ್ಲರೂ ಈ ಅಧ್ಬುತ ಕ್ಷಣಕ್ಕೆ ಕಾಯುತ್ತಾ ಇದ್ದಾರೆ. ಮೊದಲ ಟೆಸ್ಟ್ ನಲ್ಲಿಯೇ ಕೊಹ್ಲಿ ಈ ಸಾಧನೆ ಮಾಡಲಿ ಎಂದು ಎಲ್ಲರೂ ಆಶಿಸೋಣ.

Leave A Reply

Your email address will not be published.