ಕೊಹ್ಲಿಗೆ ದೊಡ್ಡ ಸಲಹೆ ಕೊಟ್ಟ ಕ್ರಿಕೆಟ್ ಲೆಜೆಂಡ್. ಕಪಿಲ್ ದೇವ್ ಸಲಹೆ ಸ್ವೀಕರಿಸುವರೇ ವಿರಾಟ್ ಕೊಹ್ಲಿ?

1,167

ವಿರಾಟ್ ಕೊಹ್ಲಿ ಎಂದರೆ ಗೊತ್ತಿರದ ವ್ಯಕ್ತಿ ಈ ಜಗತ್ತಿನಲ್ಲೇ ಇಲ್ಲ. ಯಾಕೆಂದರೆ ಅವರು ಮಾಡಿರುವ ಸಾಧನೆ ಅಂತಹುದು. ದೇಶವೇ ಕಂಡು ಕೇಳರಿಯದ ಸಾಧನೆಗಳನ್ನು ಮಾಡಿ ಕ್ರಿಕೆಟ್ ಆಟದಲ್ಲಿ ತಮ್ಮದೇ ಆದ ಮೈಲಿಗಲ್ಲನ್ನು ನೆಟ್ಟಿದ್ದಾರೆ. ಆದರೆ ಈಗ ಅವರ ಸಮಯ ಸರಿ ಅಲ್ಲ ಅಂದರೆ ಕೂಡ ತಪ್ಪಾಗಲಿಕ್ಕಿಲ್ಲ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಹಲವಾರು ವಿವಾದಗಳಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.

ತಮ್ಮ ಘನತೆಯನ್ನು ಮೀರಿ ನಡೆದುಕೊಳ್ಳುವ ಪರಿಯನ್ನು ಕಂಡರೆ ಯಾಕೋ ಅವರು ತಮ್ಮ ಮಿತಿಯನ್ನು ಮಿರುತ್ತಿದ್ದಾರೆ ಅಂತ ಭಾವನೆ ಬರುತ್ತದೆ. ಹೌದು ದೇಶ ಎಂದು ಬಂದಾಗ ನಮ್ಮೊಳಗಿನ ವೈಮನಸ್ಸು ಏನೇ ಇದ್ದರೂ ದೇಶ ಒಂದೇ ಎಂದು ಆಡಬೇಕು. ದೇಶಕ್ಕೊಸ್ಕರ ಆಡುವ ಅದೆಷ್ಟೋ ಯುವ ಪ್ರತಿಭೆಗಳ ಕನಸು ಇನ್ನೂ ನನಸಾಗಿಲ್ಲ. ಅಂತಹದರಲ್ಲಿ ಸಿಕ್ಕಿರುವ ಅವಕಾಶ ಸದುಪಯೋಗ  ಮಾಡದೆ ಬರಿ ತಮ್ಮದೇ ಆದ ನೆಲೆಯಿಂದ ನೋಡುವುದು ಅದು ಸರಿಯಲ್ಲ ಎಂಬುದು ಎಲ್ಲಾ ಕ್ರೀಡಾಭಿಮಾನಿಗಳ ನಿಲುವು.

ಇದೀಗ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರು ವಿರಾಟ್ ಕೊಹ್ಲಿ ಅವರಿಗೆ ಕಿವಿ ಮಾತೊಂದು ಹೇಳಿದ್ದು. “ನೀವು ನಿಮ್ಮ ಅಹಂಕಾರವನ್ನು ಬಿಟ್ಟು ದೇಶದ ಬಗ್ಗೆ ಯೋಚಿಸಿ ಕ್ರಿಕೆಟ್ ಆಡಿ”. ಕೊಹ್ಲಿ ನಾಯಕತ್ವದಲ್ಲಿ ಯಾವುದೇ ಐಸಿಸಿ ಟ್ರೋಫಿ ಬಂದಿಲ್ಲ ಎಂದು ಎಲ್ಲರೂ ಹೇಳಿಕೊಳ್ಳುತ್ತಿದ್ದರು. ಅದಕ್ಕೆ ಪುಷ್ಟಿ ಎಂಬಂತೆ ಅವರ ನಾಯಕತ್ವ ಸ್ಥಾನವನ್ನು ಕೂಡ ಬದಲಿಸಿದೆ. ಇದೆಲ್ಲ ಶುರು ಆಗಿದ್ದು ಅಲ್ಲಿಂದಲೇ. ಯಾವಾಗ ಅವರ ನಾಯಕತ್ವ ಕಳೆದುಕೊಂಡರೋ ಆವತ್ತಿನಿಂದ ಪ್ರತಿಯೊಂದು ವಿಷಯದಲ್ಲೂ ಒಂದಿಲ್ಲ ಒಂದು ವಿವಾದ ಮೈಗೆಳೆದುಕೊಳ್ಳುತ್ತಿದ್ದಾರೆ.

ಇದೀಗ ದಕ್ಷಿಣ ಆಫ್ರಿಕಾ ಟೂರ್ನಿ ಇದ್ದು ಅದರಲ್ಲೂ ಆಡಲು ನಿರಾಕರಿಸಿದ್ದು ಬಿಸಿಸಿಐ ಕೆಂಗಣಿಗೆ ಗುರಿ ಆಗಿದ್ದಾರೆ. ಅದು ಏನೇ ಆಗಲಿ ಕೊಹ್ಲಿ ಅವರ ನಡತೆ ಅವರು ಅಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅದೇನೇ ಆಗಲಿ ದೇಶದ ವಿಚಾರ ಬಂದಾಗ ನಿಸ್ವಾರ್ಥವಾಗಿ ಆಡಿ ಗೆಲ್ಲುವುದು ಮುಖ್ಯ ಹೊರತು ತನಗೆ ನಾಯಕ ಪಟ್ಟ ಸಿಗಬೇಕು ಎಂದು ಬೇಡಿಕೆ ಇಡುವುದು ಮೂರ್ಕತನ. ಬದಲಾವಣೆ ಬೇಕೆ ಬೇಕು ಆಗಲೇ ಏನಾದರೂ ಹೊಸದು ಸಾಧ್ಯ.

Leave A Reply

Your email address will not be published.