ನಾಲ್ಕು ಬಾರಿ ಪೊಲೀಸರಿಂದ ಅರೆಸ್ಟ್ ಆಗಿದ್ದ ಈ ವ್ಯಕ್ತಿ ಈಗ ಹಾಲಿವುಡ್ ನಲ್ಲಿ ಅತೀ ಹೆಚ್ಚು ಸಂಪಾದನೆ ಮಾಡುವ ವ್ಯಕ್ತಿ ಯಾರಿವರು?

362

ಜೀವನವೇ ಹಾಗೆ ನೋಡಿ ಏಳು ಬೀಳುಗಳು, ಮೇಲೆ ಕೆಳಗೆ ಇದ್ದೆ ಇರುತ್ತದೆ. ಆದರೆ ಕಠಿಣ ಪರಿಶ್ರಮ ಮಾತ್ರ ಎಂದಿಗೂ ಬಿಡಬಾರದು ಆಗ ಅದು ನಮ್ಮ ಕೈ ಹಿಡಿಯುತ್ತದೆ. ಅಡ್ಡ ದಾರಿಯಲ್ಲಿ ಹೋಗಿ ಹಣ ಸಂಪಾದನೆ ಮಾಡುತ್ತೇನೆ ಎಂದರೆ ಜೀವನದಲ್ಲಿ ಮೇಲೆ ಬರಲು ಎಂದೂ ಸಾಧ್ಯವಿಲ್ಲ . ಅಂತಹ ಒಂದು ನೈಜ ಉದಾಹರಣೆ ನಮ್ಮ ಕಣ್ಮುಂದೆ ಇದೆ. ಯಾರಿವರು ಬನ್ನಿ ತಿಳಿಯೋಣ.

ಜೀವನದಲ್ಲಿ ಸಾಕಷ್ಟು ನೊಂದು ತನ್ನ ಹೊಟ್ಟೆ ಪಾಡಿಗಾಗಿ ಕದಿಯಲು ಹೋಗಿ , ಎರಡು ಬಾರಿ ಪೊಲೀಸರ ಅತಿಥಿ ಆದವರು ಇವರು. ಹಾಗೆಯೇ ಹಣದ ವಿಚಾರದಲ್ಲಿ ವಂಚನೆ ಮಾಡಿ ಪೊಲೀಸ್ ಒಮ್ಮೆ ಬಂಧಿಸಿದ್ದರು ಇವರನ್ನು. ಹೌದು ಸಮಾಜಕ್ಕೆ ವಿರುದ್ದವಾಗಿ, ಕಷ್ಟ ಪಡದೆ ಬೇರೆ ಮಾರ್ಗ ಹಿಡಿದುದರ ಪರಿಣಾಮ ಇದು. ಹಾಗೆಯೇ ಮುಂದಕ್ಕೆ ಇದರಿಂದ ಏನು ಲಾಭ ಇಲ್ಲ ಎಂದು ತಿಳಿದು ಫುಟ್ಬಾಲ್ ಆಟವನ್ನು ಆಡಲು ಆರಂಭಿಸಿದರು ಆದರೂ ಹೇಳಿಕೊಳ್ಳುವ ಯಶಸ್ಸು ಸಿಗಲಿಲ್ಲ . ಆದರೂ ಏನಾದರೂ ಮಾಡಬೇಕು ಎಂಬ ಛಲದಿಂದ ರೆಸ್ಲಿಂಗ್ ಲೋಕಕ್ಕೆ ಬಂದರು. ಅತ್ಯಂತ ಫೇಮಸ್ ಶೋ WWF ಗೆ ಬಂದು ತಮ್ಮ ವೃತ್ತಿ ಜೀವನ ಆರಂಭಿಸಿದರು. ಇಲ್ಲಿ ಸ್ವಲ್ಪ ಸಮಯ ತೆಗೆದು ಕೊಂಡರು ಆದರೆ ನಿರಾಶೆ ಅಂತೂ ಆಗಲಿಲ್ಲ. ಹೌದು ಇದೆ ಹಾದಿಯಲ್ಲಿ ಮುಂದೆ ಸಾಗಿ ಕಷ್ಟ ಪಟ್ಟು ಹಾಲಿವುಡ್ ಗೆ ಎಂಟ್ರಿ ಕೊಟ್ಟರು. ನಂತರ ನಡೆದಿದ್ದು ಕನಸೇ ಸರಿ.

ಈಗ ಅವರು ಯಾರೆಂದು ನಿಮಗೆ ಗೊತ್ತಾಗಿರಬಹುದು. ಹೌದು ಅವರು ಮತ್ಯಾರು ಅಲ್ಲ ಡ್ವೈನ್ ಜಾನ್ಸನ್ (THE ROCK) . ಅವರ ನಿಜ ಹೆಸರು ಹೇಳಿದರೆ ಬಹುಶಃ ಯಾರಿಗೂ ಗೊತ್ತಾಗಲಿಕ್ಕಿಲ್ಲ, ಆದರೆ THE ROCK ಎಂದರೆ ಎಲ್ಲರಿಗೂ ಗೊತ್ತಾಗಬಹುದು. ನೋಡಿ ಜೀವನದಲ್ಲಿಯೂ ಹೀಗೆ ಅದ್ದ ದಾರಿ ಹಿಡಿದರೆ ಏನು ಸಿಗುವುದಿಲ್ಲ , ಬದಲಾಗಿ ಇದ್ದುದನ್ನು ಕಳೆದು ಕೊಳ್ಳಬೇಕಾಗುತ್ತೆ. ಬದಲಾಗಿ ಶ್ರಮ ಪಟ್ಟರೆ ನಿಮಗೆ ಸಿಗುವುದು ಖಂಡಿತಾ ಸಿಕ್ಕೆ ಸಿಗುತ್ತದೆ.

Leave A Reply

Your email address will not be published.