ಬಿಗ್ ಬಾಷ್ ಲೀಗ್ ಅಲ್ಲಿ RCB ಮಾಜಿ ಅಲ್ಲ್ರೌಂಡರ್ ಅದ್ಬುತ ಆಟ. ಏಕಾಂಗಿ ಆಟ ಹೊರತಾಗಿಯೂ ಸೋತ ತಂಡ.
ಐಪಿಎಲ್ ಅಂದರೆ RCB ಎನ್ನುವಷ್ಟರ ಮಟ್ಟಿಗೆ ಇದೆ RCB ಬಗೆಗಿನ ಕ್ರೇಜ್ ಹಾಗು ಅದರ ಅಭಿಮಾನಿ ಬಳಗ. ಅತ್ಯುತ್ತಮ ತಂಡ ಹೊಂದಿದ್ದರು ಒಂದೇ ಒಂದು ಬಾರಿ ಪ್ರಶಸ್ತಿ ಗೆಲ್ಲದೇ ಇರೋದೇ ರಾಯಲ್ challengers ಬೆಂಗಳೂರು ತಂಡದ ಸಾಧನೆ. ಅತಿ ಕಡಿಮೆ ರನ್ ಗಳಿಸಿದ ಹಾಗು ಅತಿ ಹೆಚ್ಚು ರನ್ ಗಳಿಸಿದ ಧಾಖಲೆ ಇರುವುದು ಇದೆ RCB ತಂಡದ ಹೆಸರಿನಲ್ಲಿ. ಎಲ್ಲ ಘಟಾನುಘಟಿ ಆಟಗಾರರಿದ್ದು ಕೂಡ ಪ್ರಶಸ್ತಿ ಗೆಲ್ಲದೇ ಇರುವುದು RCB ಅಭಿಮಾನಿಗಳಿಗೆ ಬೇಸರ. ಈಗ ಇದೆ ತಂಡದ ಮಾಜಿ ಆಟಗಾರ ನ ಅದ್ಬುತ ಪ್ರದರ್ಶನ ನೀಡಿ ಮನ ಗೆದ್ದಿದ್ದಾರೆ.
RCB ತಂಡದ ಮಾಜಿ ಆಟಗಾರ ಡೇನಿಯಲ್ ಕ್ರಿಶ್ಚಿಯನ್ ಬಿಗ್ ಬಾಷ್ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ನೀಡಿ ಎಲ್ಲರನ್ನು ಬೆರಗುಗೊಳಿಸಿದರು. ಪೆರ್ತ್ ಸ್ಕೋರ್ಚೆರ್ಸ್ ಹಾಗು ಸಿಡ್ನಿ ಸಿಕ್ಸೆರ್ಸ್ ನಡುವೆ ನಡೆದ ಪಂದ್ಯದಲ್ಲಿ ಪೆರ್ತ್ ಸ್ಕೋರ್ಚೆರ್ಸ್ ನ ಅಲ್ಪ ಮೊತ್ತಕ್ಕೆ ಕಟ್ಟುಹಾಕುವಲ್ಲಿ ಸಫಲವಾಯಿತು ಸಿಡ್ನಿ ಸಿಕ್ಸೆರ್ಸ್. ಆದರೆ ಅಲ್ಪ ಮೊತ್ತವನ್ನು ಬೆನ್ನಟ್ಟುವಲ್ಲಿ ಸಿಡ್ನಿ ಸಿಕ್ಸೆರ್ಸ್ ಎಡವಿದರು. ಆದರೂ ಮಾಜಿ RCB ಅಲ್ಲ್ರೌಂಡರ್ ಅದ್ಬುತ ಬ್ಯಾಟಿಂಗ್ ಪ್ರದರ್ಶನ ಎಲ್ಲರ ಮನ ಗೆದ್ದಿದೆ.
ಒಂದರ ಮೇಲೊಂದರಂತೆ ವಿಕೆಟ್ ಬೀಳುತ್ತಿರುವಾಗ ಮಾಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದಡೇನಿಯಲ್ ಕ್ರಿಶ್ಚಿಯನ್ ಒಂದು ಕಡೆ ಏಕಾಂಗಿಯಾಗಿ ತಮ್ಮ ತಾಳ್ಮೆಯ ಆಟವನ್ನು ಆಡುತ್ತಿದ್ದರು. ಒಟ್ಟು ೬೧ ಎಸೆತ ಎದುರಿಸಿದ ಡೇನಿಯಲ್ ಕ್ರಿಶ್ಚಿಯನ್ ೫ ಫೋರ್ ಹಾಗು ೪ ಸಿಕ್ಸರ್ ನೆರವಿನಿಂದ ಒಟ್ಟು ೭೩ ರನ್ ಗಳಿಸಿ ತಂಡಕ್ಕೆ ನೆರವಾದರು.ಇವರಿಗೆ ಯಾವುದೇ ಆಟಗಾರರ ನೆರವು ಸಿಗಲಿಲ್ಲ ಕೊನೆಗೂ ಪೆರ್ತ್ ಸ್ಕೋರ್ಚೆರ್ಸ್ ವಿರುದ್ಧ ೧೦ ರನ್ ಗಳ ಸೋಲನ್ನು ಅನುಭವಿಸಿದರು.