ಬ್ಯಾಟರಿ ಚಾರ್ಜ್ ಮಾಡುವುದು ಬೇಡ ಪೆಟ್ರೋಲ್ ಹಾಕುವುದು ಬೇಡ? ಬಂದಿದೆ ಹೊಸ E-Scooter? ಏನಿದರ ವಿಶೇಷತೆ?
ದಿನದಿಂದ ದಿನಕ್ಕೆ ಬದಲಾವಣೆಗಳು ನಡೆಯುತ್ತಲೇ ಇದೆ. ಒಂದಲ್ಲ ಒಂದು ಹೊಸತನ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಆಟೋ ಮೊಬೈಲ್ ಕ್ಷೇತ್ರವಂತೂ ತುಂಬಾ ಬದಲಾವಣೆ ಆಗುತ್ತಿದೆ. ಇದೀಗ ದ್ವಿಚಕ್ರ ವಾಹನ ಖರೀದಿ ಮಾಡುವವರಿಗೆ ತುಂಬಾ ಸಂತಸದ ವಿಷಯ , ಹೌದು ಏನಪ್ಪಾ ಎಂದರೆ ಇದೀಗ ನೀವು ಪೆಟ್ರೋಲಿಗೆ ಸಾವಿರಗಟ್ಟಲೆ ಖರ್ಚು ಮಾಡಬೇಕಾಗಿಲ್ಲ. ಬ್ಯಾಟರಿ ಚಾರ್ಜ್ ಮಾಡುವ ಅವಶ್ಯಕತೆ ಇಲ್ಲ. ಪೆಟ್ರೋಲ್ ಹಾಕದೆ , ಬ್ಯಾಟರಿ ಚಾರ್ಜ್ ಮಾಡದೆ ವಾಹನ ಓಡಿಸಿ ಹೌದು ಇದೀಗ ಮಾರುಕಟ್ಟೆಗೆ ಬಂದಿದೆ ಹೊಸ ದ್ವಿಚಕ್ರ ವಾಹನ ಏನಿದರ ವಿಶೇಷತೆ? ಬನ್ನಿ ತಿಳಿಯೋಣ.
ಬೌನ್ಸ್ ಎಂಬ ಸ್ಟಾರ್ಟ್ ಅಪ್ ಕಂಪನಿಯೊಂದು ಇದೀಗ ಹೊಸ ದ್ವಿಚಕ್ರ ವಾಹನ ಪರಿಚಯಿಸಿದ್ದು ಬೌನ್ಸ್ ಇನ್ಫಿನಿಟಿ E1 ಎಂದು ಹೆಸರಿಸಲಾಗಿದೆ. ಬೆಂಗಳೂರಿನಲ್ಲಿ ಈ ವಾಹನ ಇದೀಗ ಮಾರುಕಟ್ಟೆಗೆ ಬಂದಿದ್ದು 45099 ರೂಪಾಯಿಗೆ ಖರೀದಿಸಬಹುದು. ಮೊದಲಿಗೆ ಕೇವಲ 499 ರೂಪಾಯಿ ಕೊಟ್ಟು ನಿಮ್ಮ ವಾಹನ ಬುಕ್ ಮಾಡಿಕೊಳ್ಳಬಹುದು. ಇದರಲ್ಲಿ ಕಂಪನಿಯ ಸ್ವಾಪಿಂಗ್ ಸೆಂಟರ್ಗಳಿದ್ದು ಚಾರ್ಜ್ ಮುಗಿದ ಬ್ಯಾಟರಿ ಬದಲಿಸಿಕೊಂಡು ಸಂಪೂರ್ಣ ಚಾರ್ಜ್ ಆಗಿರುವ ಬ್ಯಾಟರಿ ಪಡೆಯಬಹುದು.
ಬೆಂಗಳೂರಿನಂತಹ ಪ್ರಮುಖ ಭಾರತೀಯ ನಗರಗಳಲ್ಲಿ ತನ್ನ ಬ್ಯಾಟರಿ ಸ್ವಾಪಿಂಗ್ ನೆಟ್ವರ್ಕ್ಗಗೆ ಸಂಪರ್ಕಗೊಂಡಿರುವ 200 ನಿಲ್ದಾಣಗಳನ್ನು ಹೊಂದಿದೆ ಎಂದು ಸ್ಟಾರ್ಟಪ್ ಕಂಪನಿ ಸಹ ಸಂಸ್ಥಾಪಕ ವಿವೇಕಾನಂದ ಹುಲ್ಕೆರೆ ಹೇಳಿಕೊಂಡಿದ್ದಾರೆ. ಅಲ್ಲದೆ, ಅವರು ಇಲ್ಲಯವರೆಗೆ 5ಲಕ್ಷಕೂ ಹೆಚ್ಚು ಬ್ಯಾಟರಿ ಸ್ವಾಪ್ಗಳನ್ನು ಮಾಡುವ ಮೂಲಕ 20ಮಿಲಿಯನ್ ಕಿಲೋಮೀಟರ್ ಹೆಚ್ಚು ಪ್ರಯಾಣವನ್ನು ಪೂರ್ಣಗೊಳಿಸಿದೆ ಎಂದು ಹೇಳಿದೆ. ಇತ್ತೀಚಿಗೆ ನಾವು ಇಸ್ರೋ ಕೂಡ ಸೋಲಾರ್ ಪ್ಯಾನೆಲ್ ಇಂದ ತಯಾರಿಸಲಾದ ಕಾರು ಮಾರುಕಟ್ಟೆಗೆ ಬರುವ ಬಗ್ಗೆಯೂ ಕೇಳಿದ್ದೇವೆ. ಇದೀಗ ಇಂತಹ ಹೊಸ ಆವಿಷ್ಕಾರ ಬರುತ್ತಿರುವುದರಿಂದ ಮಧ್ಯಮ ವರ್ಗಗಳ ಕುಟುಂಬಗಳಿಗೆ ಪೆಟ್ರೋಲ್ ಡೀಸೆಲ್ ಹೊರೆ ಕಡಿಮೆ ಆಗುವುದರಲ್ಲಿ ಸಂಶಯವಿಲ್ಲ.