ಒಂದು ಪುಟ್ಟ ಹಳ್ಳಿ ಹುಡುಗಿಗೆ ISRO ದಲ್ಲಿ ಜೂನಿಯರ್ ವಿಜ್ಞಾನಿ ಪದವಿ. ಇಂದಿನ ಯುವಕ ಯುವತಿಯರಿಗೆ ಸ್ಫೂರ್ತಿ.

479

ಭಾರತ ಮಾತೆಯ ಮಗಳು ಏನಾದರು ಸಾಧಿಸಬೇಕೆಂದು ನಿರ್ಧಾರ ಕೈಗೊಂಡರೆ ಅದನ್ನು ಮಾಡಿಯೇ ತೀರುತ್ತಾರೆ. ಭಾರತೀಯ ಸ್ತ್ರೀಯರು ದೇಶದಲ್ಲಿ ಅಲ್ಲದೆ ವಿದೇಶದಲ್ಲೂ ಹೆಚ್ಚಿನ ಗೌರವ ಸಂಪಾಧನೆ ಮಾಡಿದ್ದಾರೆ. ಪ್ರಪಂಚದಾದ್ಯಂತ ಅನೇಕ ಗೌರವಯುತ ಸ್ಥಾನದಲ್ಲಿದ್ದರೆ. ಇಂದಿನ ದಿನಗಳಲ್ಲಿ ಕೇಂದ್ರ ಸರಕಾರದಿಂದ ಭೇಟಿ ಬಚಾವೋ ಭೇಟಿ ಪದವೋ ಕಾರ್ಯಕ್ರಮಗಳಿಂದ ಇನ್ನಷ್ಟು ಹೆಚ್ಚಿನ ಸಂಖ್ಯೆಗಳಲ್ಲಿ ಸಾಧಿಸುವತ್ತ ದಾಪುಗಾಲಿಡುತ್ತಿದ್ದರೆ. ಪ್ರಧಾನ ಮಂತ್ರಿ ಮೋದಿಯವರ ಉದ್ದೇಶ ಕೂಡ ಉತ್ತಮ ಗುರಿಯತ್ತ ಸಾಗುತ್ತಿದೆ.

ಇದೀಗ ಹೆಣ್ಣುಮಕ್ಕಳು ಮೆಟ್ರೋ ಸಿಟಿ ಅಲ್ಲದೆ ಪ್ರತಿಯೊಂದು ಚಿಕ್ಕ ಪುಟ್ಟ ಹಳ್ಳಿಗಳಿಂದಲೂ ಸಾಧಿಸುವ ಛಲದಿಂದ ಉತ್ತಮ ಸ್ಥಾನಗಳಿಗೆ ದಾಪುಗಾಲಿಡುತ್ತಿದ್ದರೆ. ಹಿಂದಿನ ಸರಕಾರಗಳು ಭಾರತದ ಪೂರ್ವ ರಾಜ್ಯಗಳನ್ನು ನಿರ್ಲಕ್ಶಿದಂತೆ ಮೋದಿ ಸರಕಾರ ಮಾಡಲಿಲ್ಲ ಇದೀಗ ಅಲ್ಲಿನ ಜನರಲ್ಲಿ ಬದಲಾವಣೆ ಕಾಣುತ್ತಿದೆ. ಅದರ ಪ್ರತಿಫಲ ಉದಾಹರಣೆ ಇಂದಿನ ಈ ಅಸ್ಸಾಂ ನ ಹೆಣ್ಣುಮಗಳ ಸಾಧನೆ. ಇದು ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ. ಹಳ್ಳಿಯಲ್ಲೂ ಪ್ರತಿಭೆಗಳು ಇದೆ ಎನ್ನುವುದಕ್ಕೆ ಇದೆ ಸಾಕ್ಷಿ.

ಅಸ್ಸಾಂ ನ ಸಣ್ಣ ಹಳ್ಳಿಯಾದ ನಾಗಾವ್ನ್ ಎನ್ನುವಲ್ಲಿ ಇರುವ ನಾಜನೀನ್ ಯಾಸ್ಮಿನ್ ಅವರಿಗೆ ಭಾರತೀಯ ಅಂತರಿಕ್ಷ ಸಂಸ್ಥೆ ISRO ದಲ್ಲಿ ಜೂನಿಯರ್ ಸೈಂಟಿಸ್ಟ್ ಅಂದರೆ ಜೂನಿಯರ್ ವಿಜ್ಞಾನಿ ಪದವಿ ದೊರೆತಿದೆ. ಯಾಸ್ಮಿನ್ ಅವರು ತೇಜಪುರ್ ವಿಶ್ವವಿದ್ಯಾಲಯ ದಲ್ಲಿ ಎಂಟೆಕ್ ಡಿಗ್ರಿ ಪಡೆದಿದ್ದಾರೆ. ಇವರು ಯಾವತ್ತೂ ವಿಜ್ಞಾನಿಯಾಗಬೇಕೆನ್ನುವ ಕನಸನ್ನು ಹೊಂದಿದ್ದರು. ತನ್ನ ಸ್ನೇಹಿತರ ಸಹಾಯದಿಂದ ಹಾಗು ತಾನು ವಿಜ್ಞಾನಿ ಆಗಬೇಕೆನ್ನುವ ಉದ್ದೇಶದಿಂದ ಬಹಳ ಕಷ್ಟಪಟ್ಟು ಓದ ತೊಡಗಿದರು. ಇದಕ್ಕೆ ಇಂಟರ್ನೆಟ್ ಸಹಾಯ ಕೂಡ ಬಳಸುತ್ತಿದ್ದರು.

ಇವರು ಗುವಾಹಟಿ ವಿಶ್ವವಿದ್ಯಾಲಯದಿಂದ NITS ಮಿರ್ಜಾ ಕಾಲೇಜು ಅಲ್ಲಿ ಎಲೆಕ್ಟ್ರಾನಿಕ್ಸ್ ಪದವಿ ಕೂಡ ಪಡೆದಿದ್ದಾರೆ. ಇದಾದ ನಂತ್ರ ೨೦೧೬ ರಲ್ಲಿ ತೇಜಪುರ್ ವಿಶ್ವವಿದ್ಯಾಲಯದಲ್ಲಿ ಎಂಟೆಕ್ ಕೂಡ ಪಡೆದಿದ್ದಾರೆ. ಇದರಲ್ಲಿ ಅವರು ಮೊದಲ ರಾಂಕ್ ಅಲ್ಲಿ ಉತ್ತೀರ್ಣ ಗೊಂಡಿದ್ದಾರೆ. ೨೦೧೯ ರಲ್ಲಿ ISRO ಸೇರಲು ಪರೀಕ್ಷೆ ಬರೆದಿದ್ದರು. ಅದರಲ್ಲಿ ಉಟ್ಟಿರಣಗೊಂಡರು. ೧೧ ಆಗಸ್ಟ್ ೨೦೨೧ ರಲ್ಲಿ ಶಿಲೊಂಗ್ ನ ನಾರ್ತ್ ಈಸ್ಟ್ ಸ್ಪೇಸ್ ಅಪ್ಲಿಕೇಶನ್ ಸೆಂಟರ್ ಅಲ್ಲಿ ಇಂಟರ್ವ್ಯೂ ಗೆ ಕರೆಯಲಾಯಿತು. ಡಿಸೆಂಬರ್ ಅಲ್ಲಿ ಅವರು ಆಂಧ್ರ ದ ಶ್ರೀ ಹರಿಕೋಟದಲ್ಲಿ ISRO ಹೆಡ್ಕ್ವಾರ್ಟರ್ಸ್ ಅಲ್ಲಿ ವಿಜ್ಞಾನಿ ರೂಪದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.

Leave A Reply

Your email address will not be published.