ತಾನು ಮಾಡುತ್ತಿದ್ದ ಉದ್ಯೋಗವನ್ನು ಬಿಟ್ಟು ತಾಯಿಯ ಮಹದಾಸೆ ಈಡೇರಿಸಲು ಈ ಮಗ ಮಾಡಿದ ಕೆಲಸ ಏನು ಗೊತ್ತೇ?

1,519

ತಾಯಿ ಎಂದರೆ ಹಾಗೆ ಅದು ಬರೀ ಪದ ಅಲ್ಲ ಅದು ಒಂದು ಭಾವನಾತ್ಮಕ ಸಂಬಂಧ. ಅದಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯ ಇಲ್ಲ. ಜೀವನದಲ್ಲಿ ಒಂದೇ ಒಂದು ಪುಣ್ಯದ ಕೆಲಸ ಇದ್ದರೆ ಅದು ಹೆತ್ತ ತಾಯಿಯನ್ನು ಕೊನೆ ವರೆಗೂ ನೋವಿಸದೆ ನೋಡಿಕೊಳ್ಳುವುದು. ನಮಗಾಗಿ ಸವೆಸಿದ ಆ ಜೀವಕ್ಕೆ ಕೊನೆ ಘಳಿಗೆಯ ಸಂತಸ ನೀಡುವುದು ಎಲ್ಲರ ಕರ್ತವ್ಯ. ಇಲ್ಲೊಬ್ಬ ಮಗ ಅದನ್ನೇ ಮಾಡಿರುವುದು, ಈತನನ್ನು ಕಲಿಯುಗದ ಶ್ರವಣ ಕುಮಾರ ಎಂದರೂ ತಪ್ಪಾಗಲಾರದು.

ಕರ್ನಾಟಕ ಮೂಲದ ಮೈಸೂರಿನ ಕೃಷ್ಣ ಎಂಬವರು ತಮ್ಮ ಉದ್ಯೋಗವನ್ನು ಬಿಟ್ಟು ತಾಯಿಯ ಆಸೆಯನ್ನು ಪೂರೈಸಲು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಮಾಡಿದ ಯಾತ್ರೆಯ ಕಥೆ ಇದು. ಹೌದು ತಮ್ಮ ತಂದೆ ಅವರಿಗೆ ಉಡುಗೊರೆಯಾಗಿ ಚೇತಕ್ ಸ್ಕೂಟರ್ ಒಂದನ್ನು ಕೊಟ್ಟಿದ್ದರು. ಆದರೆ ಕಾಲಾಂತರದಲ್ಲಿ ಅವರು ತಮ್ಮ ತಂದೆಯನ್ನು ಕಳಕೊಂಡರು. ಆದರೆ ತನ್ನ ತಾಯಿಯ ಮಹದಾಸೆ ನಿಗುವ ಸಲುವಾಗಿ ಇವರು ತಮ್ಮ ಚೇತಕ್ ಸ್ಕೂಟರ್ ನಲ್ಲಿ ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಎಲ್ಲಾ ತೀರ್ಥ ಕ್ಷೇತ್ರಗಳಿಗೂ ತಾಯಿಯನ್ನು ಕರೆದು ಕೊಂಡು ಹೋದರು. ಇವರು ಸಂಚರಿಸಿದ್ದು ಬರೋಬ್ಬರಿ 56000 ಕಿಲೋ ಮೀಟರ್, 18 ರಾಜ್ಯಗಳು ಮತ್ತು 564 ದಿನಗಳ ಪ್ರವಾಸ. ಹೌದು ತಮ್ಮ ತಂದೆಯ ರೂಪದಲ್ಲಿ ಈ ನನ್ನ ಚೇತಕ್ ಇದೆ. ಹಾಗಾಗಿ ನಾವು ಮೂವರು ಸೇರಿ ಇಂದು ತೀರ್ಥ ಯಾತ್ರೆ ಸಂಪನ್ನ ಗೊಳಿಸಿದ್ದೇವೆ ಎನ್ನುತ್ತಾರೆ ಇವರು.

ಇಡೀ ತೀರ್ಥ ಯಾತ್ರೆ ಸಮಯದಲ್ಲಿ ಯಾವುದೇ ಹೋಟೆಲ್ ನಲ್ಲಿ ತಂಗಲಿಲ್ಲ ಬದಲಾಗಿ ಮಠ ದೇವಸ್ಥಾನಗಳಲ್ಲಿ ತಂಗಿ ಉಪಹಾರ ಊಟ ಮಾಡಿದೆವು. ನನ್ನ ತಾಯಿಗೆ 70 ವರ್ಷ ವಯಸ್ಸಾಗಿದೆ ಆದರೂ ಅವರಿಗೆ ಈ ಸಮಯದಲ್ಲಿ ಯಾವುದೇ ಒಂದು ಆರೋಗ್ಯ ಸಮಸ್ಯೆ ಕಾಣಲಿಲ್ಲ. ಎಲ್ಲವೂ ಎನಿಸಿಕೊಂಡ ಹಾಗೆ ಆಗಿದೆ. ನನ್ನ ತಾಯಿಯ ಮಹದಾಸೆ ಪೂರೈಸಿದ ನೆಮ್ಮದಿ ನನಗಿದೆ ಎಂದು ಹೇಳುತ್ತಾರೆ ಕೃಷ್ಣ ಅವರು.

ಅದೇನೇ ಆಗಲಿ ಈ ಕಲಿಯುಗದ ಕೃಷ್ಣ ಎಲ್ಲಾ ಮಕ್ಕಳಿಗೂ ಮಾದರಿ ಆಗಬೇಕು. ಹೆತ್ತವರನ್ನು ಬೀದಿಗೆ ಬಿಟ್ಟು ಆಶ್ರಮದಲ್ಲಿ ಹಾಕಿ ತಾವು ಸುಖವಾಗಿರುವ ಮಕ್ಕಳು ಇದನ್ನೊಮ್ಮೆ ಓದಿ ತಮ್ಮ ಮನ ಪರಿವರ್ತನೆ ಮಾಡಿಕೊಳ್ಳಬೇಕು. ಹೆತ್ತವರ ಕೊನೆ ಕಾಲದ ಆಸೆಯನ್ನು ಪೂರೈಸಿ ಅವರ ಕೊನೆಗಳಿಗೆ ಅವಿಸ್ಮರಣೀಯ ಆಗಿರುವಂತೆ ಮಾಡಬೇಕು.

Leave A Reply

Your email address will not be published.