ಕಿಯಾ ಕ್ಯಾರೆನ್ಸ್ ಹೊಸ ಕಾರ್ ಭಾರತದಲ್ಲಿ ಬುಕಿಂಗ್ ಶುರು. ಒಂದೇ ದಿನ ಬುಕ್ ಆದ ಕಾರುಗಳ ಸಂಖ್ಯೆ ಎಷ್ಟು ಗೊತ್ತೇ?
ಭಾರತದಲ್ಲಿ ಅಲ್ಲದೆ ವಿಶ್ವದಾದ್ಯಂತ ನ ಕಿಯಾ ಜಾದೂ ಮಾಡಿತ್ತು. ಕಾರುಗಳ ಮಾರಾಟ ಇಂದ ಬೇಸತ್ತಿದ್ದ ಕಾರು ಇಂಡಸ್ಟ್ರಿ ಒಮ್ಮೆಲೇ ಎದ್ದು ನಿಂತದ್ದು ಕಿಯಾ ಕಾರು ಬಿಡುಗಡೆ ಆದಾಗ. ಭಾರತದಲ್ಲಿ ಅತಿ ಹೆಚ್ಚು ಕ್ರೇಜ್ ಹುಟ್ಟುಹಾಕಿದ ಕಾರ್ ಎಂದರೆ ತಪ್ಪಾಗಲಾರದು. ಇದೀಗ ಅದರ ಇನ್ನೊಂದು ಹೊಸ ಮಾಡೆಲ್ ಮಾರುಕಟ್ಟೆಗೆ ಬಿಡುಗಡೆ ಆಗಿದೆ. ಅಂದರೆ ಭಾರತದಲ್ಲಿ ಅದರ ಮುಂಗಡ ನೋಂದಾವಣಿ ಶುರು ಆಗಿದೆ. ಭಾರತದಲ್ಲಿ ಮೊದಲ ದಿನವೇ ದಾಖಲೆಯ ೭೭೩೮ ಕ್ಕೂ ಹೆಚ್ಚು ಬುಕಿಂಗ್/ ನೋಂದಣಿ ಆಗಿದೆ ಎಂದು ಸುದ್ದಿಯಲ್ಲಿದೆ.
ದಕ್ಷಿಣ ಕೊರಿಯಾದ ಕಂಪನಿ ಜನವರಿ ೧೪ ರಂದು ಮುಂಗಡ ಬುಕಿಂಗ್ ಗೆ ಅವಕಾಶ ಕಲ್ಪಿಸಿತ್ತು. ಈ ಕಾರನ್ನು ಕಿಯಾ ಅಧಿಕೃತ ವೆಬ್ಸೈಟ್ ಅಥವಾ ಕಿಯಾ ಡೀಲೇರ್ಶಿಪ್ ಮುಕಾಂತರ ಮುಂಗಡವಾಗಿ ೨೫ ಸಾವಿರ ರೂಪಾಯಿ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ಕಳೆದ ವರ್ಷ ಡಿಸೆಂಬರ್ ಅಲ್ಲಿ ಕಿಯಾ ತನ್ನ ಹೊಸ ಮಾಡೆಲ್ ಅನ್ನು ಜಗತ್ತಿಗೆ ಪರಿಚಯಿಸಿತ್ತು. ಕ್ಯಾರೆನ್ಸ್ ಭಾರತದಲ್ಲಿ ಬಿಡುಗಡೆ ಮಾಡಲಾದ ನಾಲ್ಕನೇ ಕಾರಾಗಿದೆ. ಈ ಕಿಯಾ ಹೊಸ ಮಾಡೆಲ್ ಮಾರುತಿ ಸುಝುಕಿಯ XL6 ಮಹಿಂದ್ರಾ ಮರಝೋ, ಟೊಯೋಟಾ ಇನ್ನೋವಾ ಕ್ರಿಸ್ಟಾ ಹುಂಡೈ ಆಲ್ಕಜಾರ್ ಗಳೊಂದಿಗೆ ಸ್ಪರ್ದಿಸಲಿದೆ.
ಕಿಯಾ ಕ್ಯಾರೆನ್ಸ್ ಇಂಪೀರಿಯಲ್ ಬ್ಲೂ, ಸ್ಪಾರ್ಕ್ಲಿಂಗ್ ಸಿಲ್ವರ್, ಇಂಟೆನ್ಸ್ ರೆಡ್, ಅರೋರಾ ಬ್ಲಾಕ್ ಪೇರಾಲ್, ಗ್ರಾವಿಟಿ ಗ್ರೆಯ್, ಗ್ಲಾಸಿಯರ್ ವೈಟ್ ಪರ್ಲ್ ಹಾಗೇನೇ ಕ್ಲಿಯರ್ ವೈಟ್ ಸೇರಿದಂತೆ ಒಟ್ಟು ೮ ಬಣ್ಣಗಳ ಜೊತೆಗೆ ಮಾರುಕಟ್ಟೆಗೆ ಬರಲಿದೆ. ಇದು ಈಗಾಗಲೇ ಇರುವ ಕಿಯಾ ದ ಇತರ ಮಾಡೆಲ್ ಗಳಿಗಿಂತ ವಿಭಿನ್ನವಾಗಿ ಮೂಡಿ ಬರಲಿದೆ. ಇದು HVAC ನಿಯಂತ್ರಣಕ್ಕಾಗಿ ಟಾಗಲ್ ಸ್ವಿಚ್ ನೊಂದಿಗೆ ಹೊಸ ಟಚ್ ಆಧಾರಿತ ಪನ್ನೆಲ್ ಮತ್ತು ಆಂಬಿಯೆಂಟ್ ಲೈಟ್ ಅಂಡೇರ್ಲಿನ್ನಿಂಗ್ ಅನ್ನು ಸಹ ಪಡೆಯಲಿದೆ. ಸೆಂಟರ್ ಕನ್ಸೋಲ್ ಚಿಕ್ಕದಾಗಿರುತ್ತದೆ. ಸೀಟ್ ವೆಂಟಿಲೇಷನ್, ಡ್ರೈವ್ ಮೋಡ್ ಇತ್ಯಾದಿಗಳಿಗೆ ಹೆಚ್ಚುವರಿ ನಿಯಂತ್ರಣಗಳನ್ನು ಹೊಂದಿದೆ. ಕ್ಯಾರೆನ್ಸ್ ಕಾರ್ ೬ ಸೀಟ್ ಹಾಗೇನೇ ೭ ಸೀಟೆರ್ configeration ಅಲ್ಲಿ ದೊರಕುತ್ತದೆ.