ಪ್ರತೀ ಪಂದ್ಯಕ್ಕೆ 4 ಲಕ್ಷದಂತೆ ದಂಡ ಕಟ್ಟಿ ಈ ಕಂಪನಿ ಸಂಪಾದಿಸಿತ್ತು 800 ಕೋಟಿ ರೂಪಾಯಿ? ಯಾವುದು ಆ ಕಂಪನಿ?
ಎಲ್ಲಾ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಜಾಹೀರಾತು ನೀಡುತ್ತದೆ. ಮತ್ತು ಇದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಕೂಡ ಮಾಡುತ್ತದೆ. ಆದರೆ ನಾವು ಇಂದು ತಿಳಿಯಲು ಹೊರಟ ಈ ಕಂಪನಿ ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡಲೆಂದು ಯಾವುದೇ ಜಾಹೀರಾತಿಗೆ ಖರ್ಚು ಮಾಡಿಲ್ಲ ಬದಲಾಗಿ ದಂಡ ಕಟ್ಟುತ್ತಿತ್ತು. ಹೌದು ವಿಚಿತ್ರ ಎನಿಸಿದರೂ ಇದು ಸತ್ಯ ಸಂಗತಿ ಏನಿದು ರೋಚಕ ಕಥೆ ಬನ್ನಿ ತಿಳಿಯೋಣ.
Nike ಕಂಪನಿ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ, ಮಾರುಕಟ್ಟೆಯಲ್ಲಿ ಬ್ರಾಂಡೆಡ್ ಶೂಗಳನ್ನು ಇದು ತಂದಿದೆ. ಈ ಬ್ರಾಂಡ್ ನ ಉತ್ಪನ್ನ ಖರೀದಿಸಲು ಜನ ಕಾಯುತ್ತಾ ಇರುತ್ತಾರೆ. ಹಾಗೆಯೇ ಈ ಘಟನೆ ನಡೆದಿದ್ದು 1985 ರಲ್ಲಿ ಆ ಸಮಯಕ್ಕೆ ಈ ಕಂಪನಿ ಹೊಸದಾದ ಒಂದು ಶೂ ಲಾಂಚ್ ಮಾಡಿತ್ತು. ಅದನ್ನು.ಮಾರುಕಟ್ಟೆ ಮಾಡಲು ಆಗಿನ ಕಾಲದ ಫೇಮಸ್ ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಮೈಕೆಲ್ ಜೋರ್ಡಾನ್ ಅವರನ್ನು ಇದು ನೇಮಕ ಮಾಡಿತ್ತು. ಆದರಂತೆ ಈ ಹೊಸ ಶೂ ಧರಿಸಿ ಪ್ರತಿ ಪಂದ್ಯ ಆಡುವ ಹಾಗೆ ಬೇಡಿಕೆ ಇಟ್ಟಿತ್ತು. ಇದರಿಂದಾಗಿ ಕಂಪನಿ ಸರಿ ಸುಮಾರು 80 ಕೋಟಿ ಆದಾಯದ ನಿರೀಕ್ಷೆಯಲ್ಲಿತ್ತು.
ಆದರೆ NBA ಮಾತ್ರ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ, ತಂಡದ ಜೆರ್ಸಿ ಮತ್ತು ಶೂ ಹೊಂದಾಣಿಕೆ ಆಗುವುದಿಲ್ಲ ಅದರಿಂದ ಇದನ್ನು ಒಪ್ಪಿಗೆ ನೀಡಲು ಆಗುವುದಿಲ್ಲ ಎಂದಿತು. ಆದರೆ ಷರತ್ತು ಎಂಬಂತೆ ಹಾಗೆ ಒಂದು ವೇಳೆ ಧರಿಸುವುದೇ ಆದರೆ ಪ್ರತಿ ಪಂದ್ಯಕ್ಕೆ 4 ಲಕ್ಷದಂತೆ ದಂಡ ತೆರಬೇಕು ಎಂದಿತ್ತು. Nike ಕಂಪನಿ ಇದಕ್ಕೆ ಒಪ್ಪಿಗೆ ಸೂಚಿಸಿತು. Nike ಕಂಪನಿಯ ಯೋಜನೆಯಂತೆ ಇದು ನಡೆಯಿತು, ಆದರೆ ಇದರ ಫಲವಾಗಿ ಕಂಪನಿ ಆ ವರ್ಷ 800 ಕೋಟಿ ಅಷ್ಟು ವಹಿವಾಟು ನಡೆಸಿತ್ತು. Nike ಕಂಪನಿ ಈ ಮಟ್ಟಕ್ಕೆ ಬೆಳೆಯ ಬೇಕು ಎಂದರೆ ಕಾರಣ ಅದಕ್ಕೆ ಮೈಕೆಲ್ ಜೋರ್ಡಾನ್ ಎಂದೇ ಹೇಳುತ್ತಾರೆ.