ಕೆಲಸ ಸಿಗದೇ ಇದ್ದ ಕಾರಣಕ್ಕೆ ಮನೆ ಮಾಳಿಗೆಯಲ್ಲೇ ಕಮಲದ ಗಿಡನೆಟ್ಟು ಮಾರಿ ತಿಂಗಳಿಗೆ ಸಂಪಾದಿಸುತ್ತಿದ್ದಾರೆ ೩೦ ಸಾವಿರ ರೂಪಾಯಿಗಳು. ಇದರ ಪೂರ್ತಿ ಮಾಹಿತಿ ಓದಿ?
ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಹವ್ಯಾಸ ಹೊಂದಿರುತ್ತಾನೆ, ಆದರೆ ಆ ಹವ್ಯಾಸ ವೃತ್ತಿಯಾಗಿ ಬದಲಾದರೆ ಅದನ್ನು ಏನು ಹೇಳಬೇಕು? ಇಲ್ಲೊಬ್ಬರು ಕತಾರ್ ಅಲ್ಲಿ ಅರೋಗ್ಯ ಸಿಬ್ಬಂದಿಯಾಗಿ ಕೆಲಸ ಮಾಡುತಿದ್ದ ವ್ಯಕ್ತಿ ನಂತರ ಭಾರತಕ್ಕೆ ಮರಳಿ ಇಲ್ಲಿಯೇ ಕೆಲಸ ಹುಡುಕುತ್ತಿದ್ದರು. ಆದರೆ ಅವರಿಗೆ ಇಲ್ಲಿ ಯಾವುದೇ ಕೆಲಸ ಸಿಗಲಿಲ್ಲ. ಆದರೂ ಚಿಕ್ಕಂದಿನಿಂದ ತೋಟಗಾರಿಕೆ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದ ಎಲ್ಡೋಸ್ ಪಿ ರಾಜು ತೋಟದ ಕೆಲಸಕ್ಕೆ ಕೈ ಹಾಕಿದರು. ಹಾಗೇನೇ ತಮ್ಮ ಹವ್ಯಾಸವನ್ನೇ ವೃತ್ತಿಯಾಗಿ ಬದಲಾಯಿಸಿ ತಾವರೆ ಗಿಡ ನೆಟ್ಟು ಒಳ್ಳೆಯ ಅದನ್ನು ಮಾರಿ ಒಳ್ಳೆಯ ಉದ್ಯಮ ಪ್ರಾರಂಭಿಸಿದರು.
ಎಲ್ಡೋಸ್ ಪಿ ರಾಜು ಕೇರಳ ಮೂಲದವರಾಗಿದ್ದು ೩೪ ವರ್ಷದ ಇವರು ತಮ್ಮ ಮನೆಯ ಟೆರೇಸ್ ಮೇಲೆ ತಾವರೆ ಗಿಡ ಬೆಳೆದು ಗಿಡ ಮತ್ತು ಅದರ ಕಮಲದ ಹೂವುಗಳನ್ನು ಮತ್ತು ತಾವೇ ತಯಾರು ಮಾಡಿದ ವೈದ್ಯಕೀಯ ಟ್ಯೂಬ್ ಗಳನ್ನೂ ಆನ್ಲೈನ್ ಮೂಲಕ ಮಾರಿ ಒಳ್ಳೆಯ ಹಣ ಸಂಪಾದನೆ ಮಾಡಿದ್ದಾರೆ. ಕಮಲಾ ಈ ರಾಜು ಅವರ ನೆಚ್ಚಿನ ಹೂವಂತೆ. ಅದಕ್ಕಾಗಿ ಅದರ ಗಡ್ಡೆಗಳನ್ನು ತಂದು ತಮ್ಮ ಮನೆಯ ಟೆರೇಸ್ ಮೇಲೆ ಬೆಳೆಯಲು ಪ್ರಾರಂಭಿಸಿದರು. ಈ ಗಿಡಗಳು ಬೆಳೆದು ಅದರಲ್ಲಿ ಕಮಲದ ಹೂವು ಬಿಟ್ಟಾಗ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದರು. ಈ ಪೋಸ್ಟ್ ನೋಡಿ ಜನ ಇದನ್ನು ವಿಚಾರಿಸಲು ಪ್ರಾರಂಭಿಸಿದರು. ಹೀಗೆ ಒಂದು ಪೋಸ್ಟ್ ಮೂಲಕ ರಾಜು ಅವರು ಕಮಲದ ಪುಷ್ಪದ ಆರ್ಡರ್ ಪಡೆಯಲು ಪ್ರಾರಂಭಿಸಿದರು.
ರಾಜು ಅವರು ತೋಟಗಾರಿಕೆ ಬಗ್ಗೆ ಹೆಚ್ಚಿನ ಒಲವು ಹಾಗೇನೇ ಚಿಕ್ಕಂದಿನಲ್ಲಿ ತೋಟದಲ್ಲಿ ಕೆಲಸ ಮಾಡಿದ ನೆನಪು ಇದೆ ಹವ್ಯಾಸದಿಂದ ಈ ತಾವರೆ ಉದ್ಯಮ ಪ್ರಾರಂಭಿಸಿದರು. ಇದಕ್ಕಾಗಿ ಇವರು ಯಾವುದೇ ವಿಶೇಷ ತರಬೇತಿ ಪಡೆದಿಲ್ಲ, ಯೌಟ್ಯೂಬ್ ಅಲ್ಲಿ ಇದರ ಬಗೆಗಿನ ವಿಡಿಯೋ ನೋಡುವುದರ ಮೂಲಕ ಕಮಲದ ಕೃಷಿ ಬಗ್ಗೆ ಕಲಿತಿದ್ದಾರೆ ಎಂದು ರಾಜು ಹೇಳಿದ್ದಾರೆ. ಇವರ ಈ ಕಮಲದ ಗಿಡ ಮತ್ತು ಹೂವಿಗಾಗಿ ಬೇಡಿಕೆ ಬರುವುದು ಹೆಚ್ಚಾಗಿ ಉತ್ತರ ಭಾರತದ ಕಡೆಯಿಂದ. ಹೆಚ್ಚಿನ ಗ್ರಾಹಕರು ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಪುಣೆಯವರು. ಅಲ್ಲದೆ ಕೇರಳದ ಅನೇಕ ಕಡೆಯಿಂದಲೂ ಅವರ ಮನೆಗೆ ನೇರವಾಗಿ ಬಂದು ಹೂವು ಸಸಿಗಳನ್ನು ಖರೀದಿ ಮಾಡುತ್ತಾರೆ ಎಂದು ರಾಜು ಹೇಳಿದ್ದಾರೆ.
ರಾಜು ಪ್ರಕಾರ ಈ ತಾವರೆ ಗಡ್ಡೆಗಳಿಗಿಂತ ಅದರ ಗಿಡಕ್ಕೆ ಹೆಚ್ಚಿನ ಬೇಡಿಕೆ ಇದೆಯಂತೆ. ಅದಕ್ಕಾಗಿ ಮಡಕೆ ಇಂದ ಮಣ್ಣು ಮತ್ತು ನೀರು ತೆಗೆದ ನಂತರ ಸಸಿಯನ್ನು ಸರಿಯಾಗಿ ಪ್ಯಾಕ್ ಮಾಡಿ ಗ್ರಾಹಕರಿಗೆ ಕಳಿಸುತ್ತಾರಂತೆ. ಅವರ ಪ್ರಕಾರ ಕಮಲದ ಗಿಡಗಳು ೧೨ ದಿವಸ ಬದುಕುತ್ತವೆ ಅಂತೆ, ಇದರ ಗದ್ದೆಗಳು ಅದಕ್ಕಿಂತ ಜಾಸ್ತಿ ದಿನ ಬದುಕುತ್ತವೆ ಅನ್ನುತ್ತಾರೆ ರಾಜು. ಸಸ್ಯವನ್ನು ಪಡೆದ ನಂತರ ಇದಕ್ಕೆ ವಿಶೇಷವಾಗಿ ಏನು ಪೋಷಣೆ ಮಾಡಬೇಕೆಂದಿಲ್ಲ. ಈ ಸಸಿಯನ್ನು ಮತ್ತೊಮ್ಮೆ ಕುಂಡದಲ್ಲಿ ನೆಟ್ಟರೆ ಸಾಕಾಗುತ್ತದೆ.
ರಾಜು ಅವರು ತಮ್ಮ ಗ್ರಾಹಕರಿಗೆ ಯಾವ ರೀತಿ ಈ ಸಸಿಯನ್ನು ಬೆಳೆಯಬೇಕು ಎನ್ನುವ ಮಾಹಿತಿ ನೀಡುತ್ತಾರಂತೆ. ಅಲ್ಲದೆ ಈ ತೋಟಗಾರಿಕೆ ಇಂದ ಅವರಿಗೆ ಮಾನಸಿಕ ಒತ್ತಡ ನಿವಾರಣೆ ಆಗಿದೆ ಅಂತೆ. ಇದರಿಂದ ಅವರಿಗೆ ಮನಸ್ಸಿಗೆ ನೆಮ್ಮದಿ ದೊರಕಿದೆ ಅಂತೆ. ಹಣ ಬರುತ್ತದೆ ಆದರೆ ಆತ್ಮ ತೃಪ್ತಿ ಮುಖ್ಯ ಎನ್ನುವುದು ಅವರ ಭಾವನೆ. ಪ್ರಸ್ತುತವಾಗಿ ರಾಜು ಅವರು ೨೦ ಬಗೆಯ ಕಮಲಗಳನ್ನು ಬೆಳೆಯುತ್ತಿದ್ದಾರೆ. ಈ ಕಮಲದ ತೋಟದ ಮೂಲಕ ತಿಂಗಳಿಗೆ ಸುಮಾರು ೩೦ ಸಾವಿರದ ವರೆಗೂ ದುಡಿಯುತ್ತಾರೆ ಎಂದು ರಾಜು ಹೇಳಿಕೊಂಡಿದ್ದಾರೆ. ಈ ತಾವರೆ ಗಿಡಗಳ ಬೆಲೆ ಒಂದಕ್ಕೆ ೮೫೦ ರಿಂದ ೩೫೦೦ ರೂಪಾಯಿಗಳ ವರೆಗೂ ಇದೆ ಅಂತೆ.
ರಾಜು ಅವರಿಗೆ ಈ ಕ್ಷೇತ್ರ ಹೊಸದಾದ್ರು ಯಾವುದೇ ಕೆಲಸ ಸಿಗದೇ ಇದ್ದಾಗ ತಮ್ಮ ಹವ್ಯಾಸವನ್ನೇ ವೃತ್ತಿಯಾಗಿ ಬದಲಾಯಿಸಿಕೊಂಡರು. ಅವರ ಕೌಶಲ್ಯ ಅವರನ್ನು ಈ ಕ್ಷೇತ್ರದಲ್ಲಿ ಬೆಳೆಯುವಂತೆ ಮಾಡಿದೆ. ನಿವು ರಾಜು ಅವರನ್ನು ಸಂಪರ್ಕಿಸಲು ಬಯಸಿದರೆ ಅವರ ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ ಖಾತೆಗೆ ಸಂದೇಶ ಕಲಿಸುವ ಮೂಲಕ ಸಂಪರ್ಕಿಸಬಹುದು.