ಲಕ್ಷಾಂತರ ಸಂಬಳದ ಕೆಲಸ ಬಿಟ್ಟು ಆರಂಭಿಸಿದ ಕೃಷಿ ಉದ್ಯಮದಿಂದ ದುಪ್ಪಟ್ಟು ಆದಾಯ ಗಳಿಸುತ್ತಿದ್ದಾರೆ. ಅವರು ಆಯ್ಕೆ ಮಾಡಿದ ಕೃಷಿ ವಿಧಾನ ಯಾವುದು ಗೊತ್ತೇ?
ಹಳ್ಳಿಗಳು ದೇಶದ ಬೆನ್ನೆಲುಬು ಎಂಬ ಮಾತಿದೆ, ಯಾಕೆಂದರೆ ಹಳ್ಳಿಗಳಿಂದಲೆ ಉಣ್ಣಲು ತಿನ್ನಲು ಸರಕು ಸಾಮಗ್ರಿ ನಗರಗಳಿಗೆ ಬರುತ್ತದೆ. ನಗರೀಕರಣ ಎಂಬ ಕುಂಟು ನೆಪ ಒಡ್ಡಿ ಅದೆಷ್ಟೋ ಜನರು ತಮ್ಮ ತಮ್ಮ ಹಳ್ಳಿ ಕೃಷಿಗಳನ್ನು ಬಿಟ್ಟು ದೂರದ ಊರಿಗೆ ಬಂದು ದುಡಿಯುತ್ತಾರೆ. ಆದರೆ ಹೆಚ್ಚಿನವರು ಕೊನೆಗೂ ತಾವು ಹುಟ್ಟಿ ಬೆಳೆದು ಬಂದ ಹಿನ್ನಲೆ ಅರಿತು ಮತ್ತೆ ಕೃಷಿಗೆ ಮರಳಿದ್ದಾರೆ. ಎರಡು ವರ್ಷದ ಹಿಂದೆ ಬಂದ ಕೋವೀಡ್ ಮಹಾಮಾರಿ ಅದೆಷ್ಟೋ ಜನರಿಗೆ ಬುದ್ದಿ ಕೂಡ ಕಲಿಸಿತು . ಕೃಷಿಯ ಮಹತ್ವ ಸಾರಿತು. ಅದರಂತೆಯೇ ಇಲ್ಲೊಬ್ಬ ವ್ಯಕ್ತಿ ದೊಡ್ಡ ಕಾರ್ಪೊರೇಟ್ ಕಂಪನಿಯ ಕೆಲಸ ಬಿಟ್ಟು ಮತ್ತೆ ಕೃಷಿಗೆ ಮರಳಿದ ಘಟನೆ ಇದು ಬನ್ನಿ ತಿಳಿಯೋಣ.
ಇವರ ಹೆಸರು ರವಿ ಪಾಲ್, ಉತ್ತರ ಪ್ರದೇಶದ ಮೂಲದವರು. MBA ಪದವಿ ಪಡೆದಿರುವ ಇವರು L&T ಕೋಟಕ್ ಮಹೀಂದ್ರಾ ದಂತಹ ಕಂಪನಿಗಳಲ್ಲಿ ಉದ್ಯೋಗ ಮಾಡಿದ್ದರು . ಆದರೆ ಮನಸಿನೊಳಗೆ ಮಾತ್ರ ಅವರಿಗೆ ಇದರಲ್ಲಿ ಮನಸು ಇರಲಿಲ್ಲ. ಯಾಕೋ ಕೃಷಿ ಕಡೆಗೆ ಒಲವು ಹೆಚ್ಚಿತ್ತು, ಹೀಗೆ ಮನದಲ್ಲೇ ಇದ್ದ ಈ ವಿಚಾರ ಕೊನೆಗೂ ಹೊರಗೆ ಬಂದಿತು. ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಇದು ಸಣ್ಣ ನಿರ್ಧಾರ ಆಗಿರಲಿಲ್ಲ ಎಲ್ಲವನ್ನೂ ಎದುರಿಸಬೇಕಿತ್ತು ಅವರು. ಹಳ್ಳಿಯಲ್ಲಿ ಜನಗಳ ಪ್ರಶ್ನೆ ಮನೆಯವರ ಒತ್ತಡ ಎಲ್ಲವನ್ನೂ ಎದುರಿಸಿ ತಾನು ಕೃಷಿಯನ್ನೇ ಮಾಡಬೇಕು ಎಂದು ಹಠ ಹಿಡಿದರು.
ಆ ಸಮಯದಲ್ಲಿ ಹಳ್ಳಿಯಲ್ಲಿ ಬೆಳೆದ ಬೆಳೆಗಳನ್ನು nilgai (ನೀಲಿ ಜಿಂಕೆ) ತಿಂದು ಹಾಕುತ್ತಿತ್ತು. ಇದಕ್ಕೆ ಅವರು ಯೋಚನೆ ಮಾಡಿ ಮಾಡಿ ಗೊಂಡೆ ಹೂವಿನ ಕೃಷಿ ಮಾಡಲು ನಿರ್ಧಾರ ಮಾಡಿದರು . ಇದನ್ನು ಆ ಪ್ರಾಣಿ ತಿನ್ನುವುದಿಲ್ಲ, ಅವರ ಮೊದಲ ಪ್ರಯತ್ನವೇ ಅವರ ಕೈ ಹಿಡಿಯಿತು . ಅವರು ಹೇಳುವ ಪ್ರಕಾರ ಆ ಬೆಳೆ ಬೆಳೆಯಲು ನನಗೆ 3 ರಿಂದ 4 ಸಾವಿರ ಖರ್ಚು ಬಿದ್ದಿತ್ತು ಆದರೆ ನಾನು ಮಾರುವಾಗ ನನಗೆ 30 ರಿಂದ 40 ಸಾವಿರ ವರೆಗೆ ಆದಾಯ ಸಿಕ್ಕಿತ್ತು. ಇದನ್ನೇ ಮುಂದುವರೆಸಿದೆ. ಇದೀಗ ಹಲವಾರು ಹಳ್ಳಿಗಳಲ್ಲಿ ಮಾಡುತ್ತಿದ್ದೇನೆ. ಅದರೊಂದಿಗೆ ಇತರ ರೈತರಿಗೂ ಇದರ ತರಭೇತಿ ನೀಡುತ್ತಿದ್ದು ಇದು ಎಲ್ಲರಿಗೂ ಅನುಕೂಲ ಮತ್ತು ಲಾಭಕರ ವಾಗಿದೆ ಎನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ನಾನು ಮುಂಚೆ ಪಡೆಯುತ್ತಿದ್ದ ಸಂಬಳದ ದುಪ್ಪಟ್ಟು ಹಣ ಲಾಭ ರೂಪದಲ್ಲಿ ಬರುತ್ತಿದೆ ಎನ್ನುತ್ತಾರೆ . ಅದೇನೇ ಆಗಲಿ ಮಾದರಿ ರೈತರಾದ ಮೂಡಿ ಬಂದಿರುವುದು ಎಲ್ಲರಿಗೂ ಸಂತಸದ ವಿಚಾರ.