ಕೋವಿಡ್ ನಿಂದಾಗಿ ತಮ್ಮ ತಂದೆಯನ್ನು ಕಳೆದಕೊಂಡರು, ಇಂದು ಐಪಿಎಲ್ ತಂಡ ಇವರನ್ನು ಕೋಟಿ ಕೊಟ್ಟು ಖರೀದಿಸಿದೆ. ಯಾರೀ ಯುವ ಪ್ರತಿಭೆ?
ಜೀವನವೇ ಹಾಗೆ ನೋಡಿ ನಾವು ಅಂದುಕೊಂಡ ಹಾಗೆ ಏನು ನಡೆಯುವುದಿಲ್ಲ. ನಾವು ಯಾವುದು ಅಂದುಕೊಳ್ಳುತ್ತೇವೋ ಅದರ ಸರಿ ವಿರುದ್ದವಾಗಿ ನಡೆಯುತ್ತದೆ. ಅದೇನೇ ಇರಲಿ ಜೀವನ ಒಂದನ್ನು ಕಿತ್ತುಕೊಂಡರೆ ಮತ್ತೊಂದನ್ನು ಕೊಡುತ್ತದೆ ಎಂದು ಹೇಳುವ ಪರಿ ಇದೆ ಹಾಗೆಯೇ ಇದೊಂದು ನೈಜ ಕಥೆ ಬನ್ನಿ ತಿಳಿಯೋಣ. ಭಾರತದ ಅನೇಕ ಯುವ ಪ್ರತಿಭೆಗಳಿಗೆ ತಮ್ಮ ಕೌಶಲ್ಯ ತೋರಿಸಲು ಉತ್ತಮ ವೇದಿಕೆಯಾದ ಐಪಿಎಲ್ ಈ ಆಟಗಾರನಿಗೆ ಕೋಟಿ ಹಣ ನೀಡಿ ಖರೀದಿಸಿದೆ.
ಇವರು ಭಾರತದ ಅಂಡರ್ 19 ಪ್ಲೇಯರ್ ರಾಜವರ್ಧನ್ ಹಂಗಾರೇಕರ್. ಈ ಬಾರಿ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇಂತಹ ಯುವ ಪ್ರತಿಭೆಗಳಿಗೆ ಮನೆ ಹಾಕಿ ಮುಂದಿನ ತಂಡವನ್ನು ಗಟ್ಟಿ ಮಾಡುವಲ್ಲಿ ಐಪಿಎಲ್ ಕೂಡ ಒಂದು ಉತ್ತಮ ವೇದಿಕೆ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಇದೆ ಐಪಿಎಲ್ ಅದೆಷ್ಟೋ ಅಂತರಾಷ್ಟ್ರಿಯ ಮಟ್ಟದ ಕ್ರೀಡಾ ಪಟುಗಳ ಹುಟ್ಟು ಹಾಕಿದೆ. ಇವರು ಬೌಲಿಂಗ್ ವಿಭಾಗದಲ್ಲೂ ಭಾರತವನ್ನು ಸಧೃಡ ಗೊಳಿಸಿದ್ದರು.
ಆದರೆ ದುರಾದೃಷ್ಟ ಎಂಬಂತೆ ಕಳೆದ ಬಾರಿಯ ಕೋವಿಡ್ ಅಲೆಯಲ್ಲಿ ತನ್ನ ತಂದೆಯನ್ನು ಕಳೆದಕೊಂಡರು. ಆದರೆ ಇಂದು ತಮ್ಮ ಸಾಧನೆಯಿಂದಾಗಿ ಅವರು ಐಪಿಎಲ್ ತಂಡಕ್ಕೆ ಆಯ್ಕೆ ಆಗಿದ್ದಾರೆ. ಆದರೆ ಇಂದಿನ ಆಯ್ಕೆ ಇಂದಾಗಿ ಅವರು ಆನಂದ ಬಾಷ್ಪ ಹಾರಿಸುತ್ತಾ ಇಂದು ನನ್ನ ತಂದೆ ಇರುತ್ತಿದ್ದರೆ ತುಂಬಾ ಖುಷಿ ಪಡುತ್ತಿದ್ದರು, ಯಾಕಂದರೆ ಅವರ ಫೇವರಿಟ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ನನ್ನನು ಆಯ್ಕೆ ಮಾಡಿಕೊಂಡಿರುವುದಕ್ಕೆ ನನಗೆ ಬಹಳ ಸಂತೋಷ ಆಗಿದೆ ಎನ್ನುತ್ತಾರೆ . ಚೆನ್ನೈ ತಂಡ ಇವರನ್ನು 1.5ಕೋಟಿ ಹಣ ಕೊಟ್ಟು ಖರೀದಿ ಮಾಡಿದ್ದಾರೆ. ಕೊನೆಗೂ ಪಟ್ಟ ಕಷ್ಟಕ್ಕೆ ಪ್ರತಿಫಲ ಎಂಬಂತೆ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಈ ಬಾರಿಯ ಐಪಿಎಲ್ ಅವರಿಗೆ ಯಶಸ್ಸು ತರಲಿ ಎಂದು ಹಾರೈಸೋಣ.