10 ನೇ ತರಗತಿ ಪಾಸ್ ಆದವರು 63,000 ವರೆಗಿನ ಸಂಬಳದ ಭಾರತೀಯ ನೌಕಾ ಸೇನೆಯಲ್ಲಿ ಕೆಲಸಕ್ಕೆ ಅರ್ಜಿ ಹಾಕಬಹುದು. ಅರ್ಜಿ ಹಾಕುವುದು ಹೇಗೆ ಗೊತ್ತೇ?

1,079

ಸರಕಾರಿ ಕೆಲಸ ಅಥವಾ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಅಂದುಕೊಂಡಿರುವವರಿಗೆ ಇಲ್ಲಿದೆ ಉತ್ತಮ ಅವಕಾಶ ಭಾರತೀಯ ನೌಕಾಪಡೆಯಲ್ಲಿ ಟ್ರೇಡ್ಸ್ ಮ್ಯಾನ್ ಸ್ಕಿಲ್ಡ್ ಪದಕ್ಕೆ ಅರ್ಜಿ ಅಹ್ವಾನ ಮಾಡುತ್ತಿದ್ದಾರೆ. ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮಾರ್ಚ್ ೩೧, ೨೦೨೨ ಆಗಿದೆ. ಈ ಕೆಲಸದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ joinindiannavy.gov.in ಗೆ ಹೋಗಿ ಅರ್ಜಿ ಅಧಿಕೃತ ಮಾಹಿತಿ ನೋಡಬಹುದು ಹಾಗೇನೇ ಈ ಅಧಿಕೃತ ವೆಬ್ಸೈಟ್ ಅಲ್ಲಿ ಅರ್ಜಿ ಕೂಡ ಹಾಕಬಹುದು.

ಈ ಟ್ರೇಡ್ಸ್ ಮ್ಯಾನ್ ಸ್ಕಿಲ್ಡ್ ಹುದ್ದೆಯಲ್ಲಿ ಒಟ್ಟು ೧೫೩೧ ಹುದ್ದೆ ಖಾಲಿ ಇದೆ. ಈ ಹುದ್ದೆ ಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ೧೬ ಫೆಬ್ರವರಿ ೨೦೨೨ ಹಾಗು ಕೊನೆಯ ದಿನಾಂಕ ೩೧ ಮಾರ್ಚ್ ೨೦೨೨. ಅರ್ಜಿ ಹಾಕುವವರಿಗೆ ಉತ್ತಮ ಇಂಗ್ಲಿಷ್ ಜ್ಞಾನವಿರಬೇಕು, ಮಾನ್ಯ ಪಡೆದ ಶಾಲೆ ಇಂದ ೧೦ ನೇ ತರಗತಿ ಉತ್ತೀರ್ಣಗೊಂಡಿರಬೇಕು. ಅದೇ ರೀತಿ ಸಂಬಂದಿತ ಟ್ರೇಡ್ ಅಲ್ಲಿ ಅಪ್ರೆಂಟಿಸ್ ತರಬೇತಿಯನ್ನು ಪೂರ್ಣಗೊಳಿಸಿದ ಅಥವಾ ಮೆಕ್ಯಾನಿಕ್ ಸೇವೆ ಸಲ್ಲಿಸಿದ ಅಥವಾ ಎರಡು ವರ್ಷಗಳಲ್ಲಿ ಸೇನೆ, ವಾಯುಪಡೆ ಹಾಗು ನೌಕಾಪಡೆಯಲ್ಲಿ ಸೂಕ್ತ ತಾಂತ್ರಿಕ ಶಾಖೆಯಲ್ಲಿ ಸೇವೆ ಸಲ್ಲಿಸಿದ ಅನುಭವ ಇದ್ದ ಅಭ್ಯರ್ಥಿಗಳಿ ಈ ಪೋಸ್ಟ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಟ್ರೇಡ್ಸ್ ಮ್ಯಾನ್ ಸ್ಕಿಲ್ಡ್ ಕೆಲಸಕ್ಕೆ ಅಭರ್ತಿಗಳ ವಯಸ್ಸು ೧೮ ರಿಂದ ೨೫ ವರ್ಷಗಳ ಒಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳಿಗೆ ವೇತನ ಶ್ರೇಣಿಯ ಹಂತ ೨ (19,900-63,200) ಅಡಿಯಲ್ಲಿ ವೇತನ ಪಾವತಿಸಲಾಗುವುದು. ಅರ್ಜಿ ಸಲ್ಲಿಸಲು ಆಸಕ್ತರಿರುವವರು ಅಧಿಕೃತ ವೆಬ್ಸೈಟ್ ಗೆ ಹೋಗಿ ನೋಟಿಫಿಕೇಶನ್ ಓದಿ ನಂತರ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ. ಇದನ್ನು ನಿಮ್ಮ ಸ್ನೇಹಿತರೊಂದಿಗೂ ಶೇರ್ ಮಾಡಿಕೊಳ್ಳಿ. https://www.joinindiannavy.gov.in/# ಇಲ್ಲಿಂದ ನೀವು ನೋಟಿಫಿಕೇಶನ್ ಹಾಗು ಪೋಸ್ಟ್ ಗೆ ಅಪ್ಲೈ ಕೂಡ ಮಾಡಬಹುದಾಗಿದೆ.

Leave A Reply

Your email address will not be published.