ಕೈ ಹಿಡಿಯಿತು ಕಷ್ಟದ ಸಮಯದಲ್ಲಿ ಈ ಇಬ್ಬರು ಗೆಳೆಯರು ಪ್ರಾರಂಭಿಸಿದ ಉದ್ಯಮ. ಶುರು ಮಾಡಿದ ಮೂರೂ ತಿಂಗಳಲ್ಲೇ ಲಕ್ಷ ಲಕ್ಷ ಸಂಪಾಧನೆ?

667

ಇತ್ತೀಚಿನ ದಿನಗಳಲ್ಲಿ ಜನರು ಮತ್ತೊಬ್ಬರ ಆಳಾಗಿ ದುಡಿಯುವ ಬದಲು ತಮ್ಮದೇ ಆದ ವಹಿವಾಟು ನಡೆಸಲು ಇಷ್ಟ ಪಡುತ್ತಾರೆ. ಅದೇನೇ ಆಗಲಿ ನಮ್ಮದೇ ಒಂದು ಸ್ವ ಉದ್ಯಮ ಇದ್ದಾರೆ ನಾವು ನೆಮ್ಮದಿ ಇತರರಿಗೆ ಕೆಲಸ ಕೊಟ್ಟೇವಲ್ಲ ಎಂಬ ನೆಮ್ಮದಿ ಕೂಡ ಇರುತ್ತದೆ. ಇಂತಹುದೇ ಒಂದು ರೋಚಕ ಕಥೆ ಇದು. ಎಲ್ಲವನ್ನೂ ಎದುರಿಸ್ಕೊಂಡು, ಮನೆಯವರ ಸಹಾಯ ಕೂಡ ಇಲ್ಲದೆ ತಮ್ಮದೇ ಸ್ವಂತ ಪರಿಶ್ರಮದಿಂದ ಆರಂಭಿಸಿದ ಈ ವ್ಯವಹಾರ ಇಂದು ಅವರ ಕೈ ಹಿಡಿದಿದೆ ಅದೆಷ್ಟೋ ಜನರಿಗೆ ಉದ್ಯೋಗ ಕೂಡ ನೀಡಿದೆ. ಬನ್ನಿ ತಿಳಿಯೋಣ ಇದರ ಬಗ್ಗೆ.

ಕಾರ್ತಿಕ್ ಮತ್ತು ಶಿವಂ ಇವರ ಹೆಸರು, ಬಹಳ ಹಳೆಯ ಸ್ನೇಹಿತರು ಇವರು ಭೋಪಾಲ್ ಮೂಲದಲ್ಲಿ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕಂಡು ಹಿಡಿದ ಆ್ಯಪ್ RENTOZO .ಇದರಲ್ಲಿ ನೀವು ಯಾವುದೇ ವಸ್ತುಗಳನ್ನು ಕೂಡ ಬಾಡಿಗೆಗೆ ಪಡೆಯಬಹುದು. ಕಾರು ಬೈಕ್ ಡ್ರೆಸ್ ಮನೆ ಪ್ಲಂಬರ್ ಕಾರ್ಪೆಂಟರ್ ಈ ರೀತಿಯಾಗಿ ಎಲ್ಲಾ ಸೇವೆಗಳು ಕೂಡ ಇದರಲ್ಲಿ ಲಭ್ಯವಿದೆ. C to C ಮಾದರಿಯಲ್ಲಿ ನಡೆಯುವ ವಹಿವಾಟಿನಲ್ಲಿ ಗ್ರಾಹಕರು ಅತ್ಯಂತ ಸಂತುಷ್ಟರಾಗಿದ್ದರೆ. ಇದರಿಂದ ಅದೆಷ್ಟೋ ಜನರ ಕೆಲಸ ಸುಲಭವಾಗಿದೆ. ಉತ್ತಮ ರೆಸ್ಪಾನ್ಸ್ ಬರುತ್ತಿದ್ದು ಉತ್ತಮ ಹಣ ಸಂಪಾದನೆ ಮಾಡುತ್ತಿದ್ದಾರೆ ಈ ಗೆಳೆಯರು.

ಸಹೋದರಿಯ ಮದುವೆಯ ಸಂದರಭದಲ್ಲಿ ಬಂದಿತ್ತು ಈ ಹೊಸ ಐಡಿಯಾ. ಮದುವೆ ಸಮಯದಲ್ಲಿ ಎಲ್ಲಾ ವಸ್ತುಗಳು ಜೋಡಣೆ ಅವರು ಇವರು ಎಂದು ಅಲೆದಾಡುವ ಸಂದರ್ಭದಲ್ಲಿ ಇದೆಲ್ಲವನ್ನೂ ಒಂದೇ ಸೂರಿನಡಿಯಲ್ಲಿ ಯಾತಕ್ಕಾಗಿ ನಾವು ಕೊಡಬಾರದು ಎಂಬ ಆಲೋಚನೆ ಮಾಡಿದ್ದರು. ಇದೆ ಆಲೋಚನೆಯ ರೂಪಕ ಈ RENTOZO ಆ್ಯಪ್. ಹೌದು ಕಷ್ಟ ಪಟ್ಟಾಗ ಮಾತ್ರ ಏನಾದರೂ ಮಾಡಬಹುದು ಎಂಬುವುದಕ್ಕೆ ಉದಾಹರಣೆ ಇದು.

ಆರಂಭದಲ್ಲಿ ತುಂಬಾ ಕಷ್ಟ ಪಡಬೇಕಾಗಿ ಬಂತು ಮನೆಯವರು ಕೂಡ ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದರು. ಬ್ಯುಸಿನೆಸ್ ನಮ್ಮಂತವರಿಗೆ ಹೇಳಿದ್ದಲ್ಲ ಇದನ್ನೆಲ್ಲ ಬಿಟ್ಟು ಬೇರೆ ಕೆಲಸ ಮಾಡಿ ಅಂದಿದ್ದರು. ಆದರೆ ಹಿಡಿದ ಚಲ ಬಿಡದೆ ಮಾಡಿದ ಶ್ರಮದ ಪ್ರತಿಫಲ ಇಂದು ಎಲ್ಲರ ಕಣ್ಣೆದುರಿಗೆ ಇದೆ. ಇವರ ಈ ವಹಿವಾಟು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಮತ್ತಷ್ಟು ಯಶಸ್ಸು ಸಿಗಲಿ. ಇನ್ನಷ್ಟು ಜನರಿಗೆ ಉದ್ಯೋಗ ಕೊಡುವ ಉದ್ಯೋಗ ದಾತರಾಗಲಿ ಎಂದು ಹಾರೈಸೋಣ.

Leave A Reply

Your email address will not be published.