Paytm ನೀಡುತ್ತಿದೆ 5 ಲಕ್ಷದವರೆಗಿನ ಸಲ ಅದು ಕೂಡ ಕಡಿಮೆ ಬಡ್ಡಿ ದರದಲ್ಲಿ. ಮನೆಯಲ್ಲಿ ಕೂತು ಪಡೆದುಕೊಳ್ಳಿ. ಹೇಗೆ ಪಡೆಯುವುದು ಇಲ್ಲಿದೆ ಮಾಹಿತಿ?
Paytm ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಮನೆಮನೆಯಲ್ಲೂ ಒಬ್ಬರ ಮೊಬೈಲ್ ಅಲ್ಲಿ ಈ ವಾಲೆಟ್ ಇದ್ದೆ ಇರುತ್ತದೆ. ಬಹುತೇಕ ಜನ ವಿದ್ಯುತ್, ಮೊಬೈಲ್ ರಿಚಾರ್ಜ್ ಗಳು ಸಾಮಾನ್ಯವಾಗಿ ಮಾಡುವುದು ಇದೆ ಪೆಟಿಎಂ ಮೂಲಕ. ಮೊನ್ನೆ ತಾನೇ ಈ ಪೆಟಿಎಂ ಶೇರ್ ಮರುಕೆಟ್ಟೇ ಗೆ ಕೂಡ ಕಾಲಿಟ್ಟಿದೆ. ಇದರ ನಡುವೆ ಪೆಟಿಎಂ ಸಂಸ್ಥೆ ಹೊಸ ಯೋಜನೆ ಒಂದನ್ನು ಜಾರಿ ಮಾಡಿದೆ ಅದೇ ೫ ಲಕ್ಷದವರೆಗಿನ ಸಾಲದ ಆಫರ್. ಇದನ್ನು ಪಡೆಯುವುದು ಹೇಗೆ ಇಲ್ಲಿದೆ ಓದಿ ಸಂಪೂರ್ಣ ಮಾಹಿತಿ.
ಪೆಟಿಎಂ ಕೆಲವು ಆಯ್ದ ಬ್ಯಾಂಕ್ ಗಳು ಹಾಗು NBFC ಗಳೊಂದಿಗೆ ಹೊಂದಾಣಿಕೆ ಹಾಗು ಪಾಲುದಾರಿಕೆ ಹೊಂದಿದ್ದು ಕಡಿಮೆ ಬಡ್ಡಿ ದರ ಹಾಗು ವಿಶೇಷ EMI ಗಳೊಂದಿಗೆ ೫ ಲಕ್ಷದವರೆಗೆ collateral ಆದರದ ಮೇಲೆ ಸಾಲ ನೀಡುತ್ತಿದೆ. ಈ ಸಾಲ ಪಡೆಯಲು ಸಣ್ಣ ವ್ಯಾಪಾರಿಗಳು ಅರ್ಹರಾಗಿರುತ್ತಾರೆ. ಪೆಟಿಎಂ ಅಪ್ಲಿಕೇಶನ್ ನಲ್ಲಿ ಮರ್ಚೆಂಟ್ ಲೆಂಡಿಂಗ್ ಪ್ರೋಗ್ರಾಮ್ ಮೂಲಕ ಈ ಸಾಲ ತೆಗೆದುಕೊಳ್ಳಬಹುದಾಗಿದೆ. ಇದು ಸಣ್ಣ ವ್ಯಾಪಾರಿಗಳು ತಮ್ಮ ವ್ಯಾಪಾರ ಅಭಿವೃದ್ಧಿ ಪಡಿಸಲು ಸಹಾಯಕವಾಗುತ್ತದೆ ಎನ್ನುವ ಉದ್ದೇಶದಿಂದ ಪೆಟಿಎಂ ಈ ಆಫರ್ ಜನರಿಗೆ ಪರಿಚಯಿಸಿದೆ.
ಈ ಸಾಲದ ಮಿತಿ ಯಾವ ಆಧಾರದ ಮೇಲಿರಲಿದೆ? ಯಾವುದೇ ಬ್ಯಾಂಕ್ ಅಥವಾ ಫೈನಾನ್ಸಿಯಲ್ ಇನ್ಸ್ಟಿಟ್ಯೂಷನ್ ಗಳು ಸಾಲ ಎಷ್ಟು ಕೊಡಬೇಕು ಹಾಗು ಯಾವ ಆಧಾರದ ಮೇಲೆ ಕೊಡಬೇಕು ಎಂದು ನಿರ್ಧರಿಸುತ್ತವೆ. ಇಲ್ಲೂ ಕೂಡ ಪೆಟಿಎಂ ಸಾಲ ನೀಡುವಾಗ ಸಣ್ಣ ವ್ಯಾಪಾರಿಗಳು ತಮ್ಮ ದೈನಂದಿನ ವಹಿವಾಟು ಎಷ್ಟಿದೆ ಎನ್ನುವುದು ನೋಡಿ ಅದರ ಮೇಲೆ ಸಾಲ ನೀಡುತ್ತವೆ. ನಿಮಗೆ ಲಭ್ಯವಿರುವ ಸಾಲದ ಆಫರ್ ನೋಡಲು ಹಾಗು ಸಾಲದ ಮೊತ್ತವನ್ನು ಹೆಚ್ಚಿಸಲು ಪೆಟಿಎಂ ಅಪ್ಲಿಕೇಶನ್ ಅಲ್ಲಿ ಬಿಸಿನೆಸ್ ಲೋನ್ ಎನ್ನುವ ಒಪ್ಶನ್ ಅಲ್ಲಿ ಬದಲಾಯಿಸಿಕೊಳ್ಳಬಹುದು.
ಸಾಲ ಪಡೆಯಲು ಈ ರೀತಿ ಮಾಡಿ- ನಿಮಗೆ ಬೇಕಾದ ಆಫರ್ ನೋಡಲು ಪೆಟಿಎಂ ಬಿಸಿನೆಸ್ ಅಪ್ಲಿಕೇಶನ್ ನಲ್ಲಿ business loan ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ಬೇಕಾದ ಸಾಲದ ಅಮೌಂಟ್ ಅನ್ನು ನಿರ್ಧಾರ ಮಾಡಬಹುದಾಗಿದೆ. ಈ ರೀತಿ ಮಾಡಿದ ನಂತರ ನಿಮಗೆ ಎಷ್ಟು ಸಾಲ ಸಿಗುತ್ತದೆ, ನಿಮಗೆ ದೈನಂದಿನ emi ಎಷ್ಟು ಕಟ್ಟಲು ಬರುತ್ತದೆ, ಎಷ್ಟು ವರ್ಷದವರೆಗೆ ಕಟ್ಟಾ ಬೇಕಾಗುತ್ತದೆ ಎನ್ನುವ ಮಾಹಿತಿ ಸಿಗುತ್ತದೆ . ನಂತರ ನಿಮ್ಮ ಡೀಟೇಲ್ಸ್ ಭರ್ತಿ ಮಾಡಿದ ನಂತರ ಚೆಕ್ ಬಾಕ್ಸ್ ಕ್ಲಿಕ್ ಮಾಡಿ get started ಅನ್ನು ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಸಾಲದ ಪ್ರೊಸೆಸಿಂಗ್ ಶುರು ಆಗುತ್ತದೆ.
ಇದೆಲ್ಲ ಆದ ನಂತರ ನಿಮಗೆ ನಿಮ್ಮ ಪಾನ್ ಕಾರ್ಡ್, ಜನುಮ ದಿನಾಂಕ ವರ್ಷ ಹಾಗೇನೇ ಈ ಮೇಲ್ ID ಭಾರ್ತಿ ಮಾಡಬೇಕಾಗುತ್ತದೆ. ಒಂದು ಬಾರಿ ನಿಮ್ಮ ಈ ಪಾನ್ ಕಾರ್ಡ್ ಪುಷ್ಟಿಕರಣ ಗೊಂಡ ನಂತರ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲನೆ ಮಾಡಲಾಗುತ್ತದೆ. ಅದೇ ರೀತಿ KYC ಕೂಡ ಪರಿಶೀಲನೆ ಮಾಡಲಾಗುತ್ತದೆ. ಲೋನ್ ಅಪ್ಲಿಕೇಶನ್ ಭರ್ತಿ ಮಾಡಿದ ನಂತರ ಈ ಲೋನ್ ಅಮೌಂಟ್ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರುತ್ತದೆ. ಅದೇ ರೀತಿ ಈ ಎಲ್ಲ ಪ್ರಕ್ರಿಯೆ ಮೊದಲು ಅವರ ನಿಯಮ ಹಾಗು ಪಾಲಿಸಿ ಬಗ್ಗೆ ಖಂಡಿತವಾಗಿಯೂ ಪೂರ್ತಿ ಓದಿ ಈ ಸಾಲವನ್ನು ಪಡೆಯುವುದು ಉತ್ತಮ.