ಈ ದೇಶದ ೧೨ ರಿಂದ ೨೦ ವರ್ಷದೊಳಗಿನ ಎಲ್ಲ ಮಕ್ಕಳಿಗೆ Scholorship ನೀಡುತ್ತಿದೆ ಸರಕಾರ. ಯಾವುದು ಆ ದೇಶ?
ಶಾಲೆ ಆಟ ಪಾಠ ಎಂಬುವುದು ಜೀವನದ ಮಹತ್ತರ ಘಟ್ಟ. ಶಿಲೆ ಎಂಬ ಜೀವನವನ್ನು ಕೆತ್ತಿ ರೂಪುರೇಷೆ ಕೊಡುವುದೇ ಈ ಶಾಲೆ. ಇದರಿಂದಲೇ ಜೀವನದ ಆರಂಭ ಆಗುತ್ತದೆ. ಹಾಗಾದರೆ ಶಾಲಾ ಮಕ್ಕಳಿಗೆ ನಮ್ಮ ದೇಶದಲ್ಲಿ ಯಾವ ರೀತಿಯ ಸೌಲಭ್ಯಗಳು ಸಿಗುತ್ತದೆ ಎಂದು ಗೊತ್ತಿದೆ. ಇಲ್ಲಿ ಎಲ್ಲವೂ ಜಾತಿ ಆಧಾರಿತ. ಯಾವುದೋ ಕಾಲದಲ್ಲಿ ಮಾಡಿದ ನಿಯಮಗಳು ಇಂದಿಗೂ ತಿದ್ದುಪಡಿ ಆಗದೆ ಕೇವಲ ಕೆಲ ವರ್ಗಗಳಿಗೆ ಮಾತ್ರ ಸಿಗುತ್ತದೆ. ಅತೀ ಬಡತನ ದಲ್ಲಿರುವ ಅದೆಷ್ಟೋ ಜನರು ವಿದ್ಯೆ ಗೆ ಪರದಾಡುತ್ತಿದ್ದಾರೆ ಅಂತವರಿಗು ಇದರ ಪ್ರಯೋಜನ ಸರ್ಕಾರ ನೀಡಬೇಕು ಎಂಬುವುದು ಎಲ್ಲರ ಒಕ್ಕೊರಲ ಬೇಡಿಕೆ. ಹಾಗಾದರೆ ಇಲ್ಲೊಂದು ದೇಶ ಇದೆ ಇದು ಎಲ್ಲರಿಗೂ ಸ್ಕಾಲರ್ ಶಿಪ್ ನೀಡುತ್ತದೆ. ಇಲ್ಲಿ ಯಾವುದೇ ಭೇದ ಭಾವ ಇಲ್ಲ. ಎಲ್ಲರಿಗೂ ಸಮಾನ ನೀತಿಯನ್ನು ಅನುಸರಿಸುತ್ತದೆ. ಬನ್ನಿ ತಿಳಿಯೋಣ ಈ ದೇಶದ ಬಗ್ಗೆ.
ಆ ದೇಶ ಮತ್ಯಾವುದೋ ಅಲ್ಲ ಅದು ಸ್ವೀಡನ್. ಹೌದು ಈ ದೇಶದ ಹೆಸರು ಎಲ್ಲರೂ ಕೇಳಿರಬಹುದು. ಇಲ್ಲಿ ಹೈ ಸ್ಕೂಲ್ ಓದುವ ಎಲ್ಲಾ ಮಕ್ಕಳಿಗೂ ಸರ್ಕಾರದ ವತಿಯಿಂದ ಪ್ರತಿ ತಿಂಗಳು ಸ್ಕಾಲರ್ ಶಿಪ್ ಸಿಗುತ್ತದೆ. 12 ನೆ ವಯಸ್ಸಿಗೆ ಸಿಗಲು ಆರಂಭವಾದ ಈ ಸ್ಕಾಲರ್ ಶಿಪ್ 20ನೆಯ ವಯಸ್ಸಿನ ವರೆಗೆ ಸರ್ಕಾರ ನೀಡುತ್ತದೆ. ಅಂದರೆ ಹೈ ಸ್ಕೂಲ್ ಶಿಕ್ಷಣ ಮುಗಿಯುವ ವರೆಗೆ ಸರ್ಕಾರ ಪ್ರತಿ ತಿಂಗಳು ವಿಧ್ಯಾಭ್ಯಾಸದ ಖರ್ಚಿಗೆ ಎಂದು ಹಣ ನೀಡುತ್ತದೆ.
ಹಾಗಾದರೆ ಎಷ್ಟು ಹಣ ನೀಡುತ್ತದೆ ಎಂಬ ಕುತೂಹಲ ನಿಮಗೆಲ್ಲ ಇರಬಹುದು. ಇದು ನಮ್ಮ ದೇಶಕ್ಕೆ ಹೋಲಿಕೆ ಮಾಡಿದರೆ ಅದೆಷ್ಟೋ ಜನರ ಸಂಬಳಕ್ಕಿಂತಲು ಹೆಚ್ಚು . ಹೌದು ಸ್ವೀಡನ್ ದೇಶದ ಸರ್ಕಾರ ಎಲ್ಲಾ ಮಕ್ಕಳಿಗೂ ಪ್ರತಿ ತಿಂಗಳು 35,000 ಸ್ಕಾಲರ್ ಶಿಪ್ ಹಣ ನೀಡುತ್ತದೆ. ಅಚ್ಚರಿ ಎನಿಸಿದರೂ ಸತ್ಯ ಸಂಗತಿ ಇದು. ಇಂತಹ ವ್ಯವಸ್ಥೆ ಎಲ್ಲಾ ದೇಶದಲ್ಲೂ ಆಗಬೇಕು. ಆದರೆ ಇಲ್ಲಿ ಎಲ್ಲರಿಗೂ ಆಗಬೇಕು ಎಂದು ಹೇಳುವುದಿಲ್ಲ ವಿದ್ಯಾಭ್ಯಾಸಕ್ಕಾಗಿ ಹಣದ ಅಡಚಣೆ ಎದುರಿಸುವ ಎಲ್ಲಾ ಮಕ್ಕಳಿಗೂ ಈ ಸೌಲಭ್ಯ ಸಿಗಬೇಕು.