ಸೊಳ್ಳೆ ಸಮಸ್ಯೆ ಇದ್ದರೆ ಕೆಮಿಕಲ್ ಬದಲು ಈ ಸಸಿಗಳನ್ನು ಬೆಳೆಸಿ. ಸಮಸ್ಯೆ ದೂರವಾಗುತ್ತೆ, ಅರೋಗ್ಯಕ್ಕೂ ಒಳ್ಳೆಯದು.

696

ಮನೆಯಲ್ಲಿ ಸೊಳ್ಳೆ ಸಮಸ್ಯೆ ಪರಿಹರಿಸುವ ಸಲುವಾಗಿ ಏನೆಲ್ಲಾ ಮಾಡಲ್ಲ ಹೇಳಿ, ಸೊಳ್ಳೆ ಪರದೆಗಳಿಂದ ಹಿಡಿದು ಕೆಮಿಕಲ್ ಮದ್ದನ್ನು ಕೂಡಾ ಬಳಸುತ್ತೇವೆ. ಆದರೆ ಇಂದು ಅನೇಕ ಜನರು ಪ್ರಕೃತಿ ಸ್ನೇಹಿ ಗಿಡಗಳನ್ನು ಬೆಳೆದು ಸೊಳ್ಳೆ ಸಮಸ್ಯೆ ನಿವಾರಿಸುತ್ತಿದ್ದಾರೆ. ಈ ಗಿಡಗಳನ್ನು ಮನೆಯಲ್ಲಿ ನೆಟ್ಟರೆ ಸೊಳ್ಳೆ ಸಮಸ್ಯೆ ಇರಲ್ಲ ಎನ್ನುವುದು ಬಹುತೇಕರ ವಾದ. ಹಾಗಾದರೆ ಯಾವುದು ಆ ಗಿಡಗಳು?

ಬೆಂಗಳೂರಿನ ಸ್ವಾತಿ ದ್ವಿವೇದಿ ಎನ್ನುವವರು ಕೆಲ ಗಿಡಗಳಿಂದ ಈ ಸೊಳ್ಳೆಗಳು ದೂರ ಇರುತ್ತವೆ. ನಿಮ್ಮ ಕಿಟಕಿ, ಮನೆ ಬಾಗಿಲಿನ ಕಡೆ ಈ ಗಿಡಗಳನ್ನು ಬೆಳೆಸಿದರೆ ಈ ಸೊಳ್ಳೆಗಳು ಬರಲ್ಲ ಎನ್ನುವುದು ಅವರ ಅಭಿಪ್ರಾಯ. ಇದು ಬಹಳ ಜನ ಪ್ರಯೋಗ ಮಾಡಿ ಕೂಡ ನೋಡಿದ್ದಾರೆ ಅದೇ ರೀತಿ ಅದರ ಉಪಯೋಗ ಪಡೆದಿದ್ದಾರೆ. ಇದು ಮರ ಬಳ್ಳಿ ರೀತಿ ಯಾವುದು ಹೋಗುವುದಿಲ್ಲ ಬದಲಾಗಿ ಇದು ಗಿಡವಾಗಿಯೇ ಇರುತ್ತದೆ. ಆದ್ದರಿಂದ ಮನೆಯ ಒಳಗಡೆ ಅಥವಾ ಹೊರಗಡೆ ಸಣ್ಣ ಜಾಗವಿದ್ದರೂ ಕೂಡ ಈ ಸಸಿಗಳನ್ನು ಬೆಳೆಸಬಹುದು.

ಗೊಂಡೆ ಹೂವು- ಅಥವಾ ಮಾರಿಗೋಲ್ಡ್ ಅಂತ ಏನು ನಾವು ಕರೆಯುತ್ತೇವೆ ಇದನ್ನು ನೀವು ಮನೆಯಲ್ಲಿ ಬೆಳೆಯುವುದು ಸುಲಭ. ಇವುಗಳನ್ನು ಪಾಟ್ ಗಳಲ್ಲಿ, ನೇತಾಡುವ ಪ್ಲಾಂಟರ್ ಗಳಲ್ಲಿ ಹಾಗು ಪ್ಲಾಸ್ಟಿಕ್ ಗಳಲ್ಲೂ ಕೂಡ ಬೆಳೆಯಬಹುದು. ಇದು ಎಲ್ಲ ಋತುಗಳಲ್ಲಿಯೂ ನೆಡಬಹುದು. ಆದರೆ ಇದಕ್ಕೆ ಉತ್ತಮ ಸಮಯ ನವೆಂಬರ್ ಇಂದ ಜನವರಿ ವರೆಗೆ. ಇನ್ನೊಂದು ಒಳ್ಳೇದು ಏನೆಂದರೆ ಬೆಳೆಸಿದ ಸಸಿ ಇಂದ ಇನೊಂದು ಗಿಡ ಬೆಳೆಸಬಹದು. ಆದರೆ ಸೂರ್ಯನ ಬೆಳಕು ಇರುವಲ್ಲಿ ಈ ಗಿಡ ನೆಡಲು ಮರೆಯದಿರಿ. ಇದು ಸೊಳ್ಳೆಗಳನ್ನು ಓಡಿಸುವುದರ ಜೊತೆಗೆ ಇತರ ಹಾನಿಕಾರಕ ಕೀಟಗಳನ್ನು ಕೂಡ ಓಡಿಸುತ್ತವೆ.

ತುಳಸಿ ಗಿಡ- ಔಷದಿಯ ಗುಣವುಳ್ಳ ಈ ತುಳಸಿ ಗಿಡ ಕೆಮ್ಮು, ನೆಗಡಿ ಜ್ವರ ಮತ್ತು ಇನ್ನು ಅನೇಕ ರೋಗಗಳಿಗೆ ಉಪಯುಕ್ತವಾಗಿದೆ. ಅದೇ ರೀತಿ ಸೊಳ್ಳೆಗಳಿಂದ ರಕ್ಷಿಸಲು ಕೂಡ ಇದು ಸಹಾಯಕಾರಿಯಾಗಿದೆ. ತುಳಸಿ ಗಿಡ ವರ್ಷವಿಡೀ ಬಾಳುತ್ತದಾದರೂ ಕೂಡ ಮಳೆಗಾಲದಲ್ಲಿ ಇದನ್ನು ಬೆಳೆಸುವುದು ಉತ್ತಮ. ಇದು ಕೂಡ ಸೂರ್ಯನ ಬೆಳಕು ಬರುವ ಜಗದಲ್ಲಿ ಬೆಳೆಸಿದರೆ ಉತ್ತಮ. ಇದರ ಬೀಜ ಅಥವಾ ಸಸಿಯ ಕತ್ತರಿಸಿದ ಜಾಗವನ್ನು ನೆಡುವುದರ ಮೂಲಕ ತುಳಸಿ ಗಿಡ ಬೆಳೆಸಬಹುದು.

ಇದಲ್ಲದೆ ನಿಂಬೆ ಗಿಡ ಕೂಡ ಬೆಳೆಸುವುದರ ಮೂಲಕ ಈ ಸೊಳ್ಳೆ ಸಮಸ್ಯೆ ಬಗೆಹರಿಸಬಹುದು. ಅಲ್ಲದೆ ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಗಳು ಕೂಡ ಇದೆ. ಇದನ್ನು ಮನೆಯಲ್ಲಿ ಸುಲಭವಾಗಿ ಬೆಳೆಸಬಹದು. ಆಮೇಲೆ ಈ ರೊಸ್ಕರಿ ಗಿಡ ಕೂಡ ಸೊಳ್ಳೆ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇದನ್ನು ಅಡುಗೆ ಮನೆಯಲ್ಲಿ ಅಥವಾ ತುಂಬಾ ಶಾಖ ಇರುವ ಕಡೆ ಇಡಬೇಡಿ. ನಿಮ್ಮ ಲಿವಿಂಗ್ ರೂಮ್ ಅಥವಾ ಬೆಡ್ ರೂಮ್ ನಲ್ಲಿ ತಂಪಾದ ವಾತಾವರಣದಲ್ಲಿ ಬೆಳೆಸಿದರೆ ಸೂಕ್ತ. ಇದನ್ನು ನಿಮ್ಮ ಗೆಳೆಯರೊಡನೆ ಹಂಚಿಕೊಳ್ಳಿ.

Leave A Reply

Your email address will not be published.