ಹಬ್ಬಕ್ಕೆ ಬರಲಾಗಲಿಲ್ಲ ಎಂದು ಸ್ವಂತ ಉದ್ಯಮ ಪ್ರಾರಂಭಿಸಿ ಇಂದು ಪ್ರತಿದಿನ ಹಬ್ಬ ಆಚರಿಸುತ್ತ ಉತ್ತಮ ಜೀವನ ಸಾಗಿಸುತ್ತಿದ್ದಾರೆ ಇವರು. ಇವರ ಬಿಸಿನೆಸ್ ಪ್ಲಾನ್ ಏನು?
ವಿದ್ಯೆ ಎಂಬುವುದು ಜೀವನದಲ್ಲಿ ಎಲ್ಲರಿಗೂ ಮುಖ್ಯ. ಉತ್ತಮ ವಿದ್ಯಾಭ್ಯಾಸ ಪಡೆದ ನಂತರ ಒಂದು ಉತ್ತಮ ಉದ್ಯೋಗ ಪಡೆಯಬೇಕು ಎಂಬುವುದು ಎಲ್ಲರ ಆಸೆ. ಹೀಗೆ ಉದ್ಯೋಗ ಹುಡುಕಿಕೊಂಡು ಎಲ್ಲೆಲ್ಲಿಗೋ ಹೋಗುತ್ತಾರೆ ಜನರು. ಊರು ಬಿಟ್ಟು ಪರ ಊರಿಗೆ ಹೋಗುತ್ತಾರೆ. ಮನೆ ಮಠ ಹೆತ್ತವರ ಬಿಟ್ಟು ದೂರದ ಊರುಗಳಿಗೆ ಹೋಗಿ ಒಬ್ಬಂಟಿಯಾಗಿ ಇದ್ದುಕೊಂಡು ದುಡಿಯುತ್ತಾರೆ. ವರ್ಷಕ್ಕೆ ಒಮ್ಮೆ ಮನೆ ಕಡೆಗೆ ಬಂದು ಮನೆಯವರ ಜೊತೆಗೆ ಸಂತಸದ ಸಮಯ ಕಳೆಯುತ್ತಾರೆ. ಹೀಗೆ ನೋಡಿ ಈ ಒಂದು ಕಥೆ, ಉದ್ಯೋಗ ಪಡೆದು ದೂರದ ಊರಲ್ಲಿ ಇದ್ದ ಈ ಹುಡುಗ ದೀಪಾವಳಿಗೆ ಮನೆಗೆ ಬರಬೇಕು ಎಂದು ಆಲೋಚಿಸುತ್ತಿದ್ದಾಗ, ಊರಿಗೆ ಬರು ಆಗದೆ ಹೋಯಿತು.
ಆಗಲೇ ಆತನಿಗೆ ಹೊಳೆದ ಈ ಐಡಿಯಾ ಆತನನ್ನು ಇಂದು ಕೋಟ್ಯಾಧಿಪತಿ ಮಾಡಿದೆ. ಯಾರಿದು ಯಾವುದು ಆ ಉದ್ಯಮ ಬನ್ನಿ ತಿಳಿಯೋಣ. ಇವರ ಹೆಸರು ಫಣೀಂದ್ರ ಸಮ ಮೂಲತಃ ತೆಲಂಗಾಣ ಮೂಲದವರು. ಎಲ್ಲರಂತೆ ವಿಧ್ಯಾಭ್ಯಾಸ ಮುಗಿಸಿ ಊರು ಬಿಟ್ಟು ಕೆಲಸಕ್ಕೆ ಹೋಗಿದ್ದರು. ಹೀಗೆ ಹೋಗಿ ತುಂಬಾ ಸಮಯ ಕಳೆದು ಹೋಗಿತ್ತು, ಮುಂದೆ ಬರುವ ದೀಪಾವಳಿ ಸಮಯಕ್ಕೆ ಮನೆಗೆ ಬರಬೇಕು ಎಂದು ಯೋಜನೆ ಹಾಕಿದ್ದರು. ಆದ್ರೆ ದೀಪಾವಳಿ ಸಮಯದಲ್ಲಿ ಅವರಿಗೆ ಊರಿಗೆ ಬರಲು ಆಗಲಿಲ್ಲ. ಕಾರಣ ಯಾವುದೇ ಬಸ್ ಅವರಿಗೆ ಲಭ್ಯ ಆಗಲಿಲ್ಲ ಎಲ್ಲವೂ ಫುಲ್ ಆಗಿತ್ತು.
ಇದರಿಂದ ನಿರಾಶರಾಗಿ ಕುಳಿತ ಇವರು, ಯಾಕೆ ಮುಂಗಡವಾಗಿ ಟಿಕೆಟ್ ಕಾಯಿರಿಸುವ ಮತ್ತು ಇನ್ಸ್ಟಂಟ್ ಟಿಕೆಟ್ ಬುಕಿಂಗ್ ಸೌಲಭ್ಯ ಮಾಡಬಾರದು ಎಂದು ಯೋಜನೆ ಹಾಕಿದರು. ಹೀಗೆ ಅವರ ಯೋಜನೆಯ ಪ್ರಕಾರ ಜನ್ಮ ತಾಳಿದ್ದು Redbus . ಹೌದು Redbus ಆ್ಯಪ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದು 2005ರಲ್ಲೀ ಆರಂಭ ಗೊಂಡಿತ್ತು. ಇದರಲ್ಲಿ ದಿನ ಒಂದಕ್ಕೆ 5000ಕ್ಕಿಂತಲೂ ಹೆಚ್ಚು ಟಿಕೆಟ್ ಬುಕಿಂಗ್ ನಡೆಯುತ್ತದೆ. ಇಂದು ಇದು ಮಾರುಕಟ್ಟೆಯಲ್ಲಿ 6,54,16,42,500 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಆದರೆ ಈಗ ಈ ಕಂಪನಿಯನ್ನು Ibibo groups ಖರೀದಿ ಮಾಡಿದೆ. ಫಣಿಂದ್ರ ಸಮ ಅವರು ತೆಲಂಗಾಣ ಸರ್ಕಾರದ ರಾಯಭಾರಿ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೂ ಅವರು ಮಾಡಿರುವ ಸಾಧನೆ ಮಾತ್ರ ಯುವ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತದೆ.