ನಮ್ಮ ತಲೆ ಕೂದಲು ಎಷ್ಟು ಮೊತ್ತಕ್ಕೆ ಮಾರಾಟವಾಗುತ್ತೆ ಗೊತ್ತೇ? ಇದರಿಂದ ದೇಶಕ್ಕೆ ಎಷ್ಟು ಕೋಟಿ ಲಾಭವಿದೆ? ನಿಜಕ್ಕೂ ಆಚಾರಿ ಆಗುತ್ತೆ.
ಎಲ್ಲರಿಗೂ ತಮ್ಮ ತಮ್ಮ ಕೂದಲು ಎಂದರೆ ಬಲು ಪ್ರೀತಿ. ಅದನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಲು ಬಯಸುತ್ತಾರೆ. ಅದಕ್ಕೆ ಬೇಕು ಬೇಕಾದ ಅಲಂಕಾರಿಕ ವಸ್ತುಗಳನ್ನು ಬಳಸಿ ಎಲ್ಲರೂ ತಿರುಗಿ ನೋಡುವಂತೆ ಮಾಡಿಟ್ಟುಕೊಳ್ಳುತ್ತಾರೆ. ತಿಂಗಳಿಗೆ ಒಮ್ಮೆಯಾದರೂ ಕೂದಲು ತೆಗೆದು ಅದಕ್ಕೆ ಬೇಕು ಬೇಕಾದನ್ನು ಮಾಡಿಕೊಳ್ಳುತ್ತೇವೆ. ಹಾಗಾದರೆ ಈ ತೆಗೆದ ಕೂದಲ ವೇಸ್ಟ್ ಬಗ್ಗೆ ನಾವು ಎಂದಾದರೂ ಯೋಚನೆ ಮಾಡಿದ್ದೇವೆಯೆ ? ಇಲ್ಲ ಎಂದರೆ ತಪ್ಪಾಗಲಾರದು ಇದನ್ನು ಮಾರಾಟ ಮಾಡುತ್ತಾರೆ ಹೌದು . ಹಾಗಾದರೆ ಇದರಿಂದ ಎಷ್ಟು ಆದಾಯ ಬರುತ್ತದೆ ಎಂದು ತಿಳಿಯೋಣ.
ಭಾರತದಿಂದ ಒಟ್ಟು ರಫ್ತಿನ 39% ಕೂದಲು ರಫ್ತು ಭಾರತದಿಂದ ಆಗುತ್ತದೆ. ಹೌದು ಇದು ಎಲ್ಲಾ ವಿದೇಶಗಳಿಗೂ ಹೋಗುತ್ತದೆ. ಕೂದಲನ್ನು ಬೇರೆ ಬೇರೆ ಕೆಟಗರಿ ಆಗಿ ವಿಂಗಡನೆ ಮಾಡಿ ರಫ್ತು ಮಾಡಲಾಗುತ್ತದೆ. ಉದ್ದ ಹೆಚ್ಚಿದಷ್ಟೂ ಬೆಲೆ ಜಾಸ್ತಿ ಸಿಗುತ್ತದೆ. ಇದನ್ನು ವಿಗ್ ಮಾಡಲು ಬಳಸುತ್ತಾರೆ. ಹೌದು. ಭಾರತಕ್ಕೆ ಒಟ್ಟು 2020 ರಲ್ಲಿ 367.3 ಮಿಲಿಯನ್ ಡಾಲರ್ ಆದಾಯ ಇದರಿಂದ ಬಂದಿದೆ. ಅತೀ ಹೆಚ್ಚು ಕೂದಲು ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದಿಂದ ಬರುತ್ತದೆ. ಈ ದೇವಸ್ಥಾನ ಒಂದಕ್ಕೆ ವಾರ್ಷಿಕವಾಗು ಕೋಟ್ಯಾಂತರ ರೂಪಾಯಿ ಆದಾಯ ಇದರಿಂದ ಬರುತ್ತದೆ.
2019ರ ಡಾಟಾ ಪ್ರಕಾರ 143.9 ಟನ್ ಕೂದಲು ರಫ್ತಾಗಿದ್ದು ಇದರಿಂದ 11.17ಕೋಟಿ ಆದಾಯ ದೇವಸ್ಥಾನಕ್ಕೆ ಬಂದಿದೆ ಎಂದು ವರದಿ ಹೇಳುತ್ತದೆ. ಉದ್ದವಾದ ಕೂದಲಿನ ಬೆಲೆ ಕೆಜಿ ಗೆ 20 ರಿಂದ 25 ಸಾವಿರ ರೂಪಾಯಿ ವರೆಗೂ ಇದೆ. ಅದೇ ತುಂಡರಿಸಿದ ಸಣ್ಣ ಕೂದಲು ಕೆಜಿ ಗೆ 2000 ರೂಪಾಯಿ ವರೆಗೆ ಮಾರುಕಟ್ಟೆ ಮೌಲ್ಯ ಇದೆ. ಭಾರತ ದೇಶದಲ್ಲಿ ಪಶ್ಚಿಮ ಬಂಗಾಳ ಅತೀ ಹೆಚ್ಚು ಕೂದಲು ರಫ್ತನ್ನು ಮಾಡುತ್ತದೆ. ಅದೇನೇ ಆಗಲಿ ಕೂದಲು ತೆಗೆದು ಬಂದು ಅದರ ಗೋಜಿಗೆ ಹೋಗದೆ ಇರುವ ನಾವು ಈ ವಿಷಯದ ಬಗ್ಗೆ ತಿಳಿಯಲೇ ಬೇಕು.