ನೀರಿನ ಟ್ಯಾಂಕ್ ವರ್ಷಗಟ್ಟಲೆ ಕ್ಲೀನ್ ಮಾಡದೇ ಇದ್ದರೆ ಆರೋಗ್ಯಕ್ಕೆ ಹಾನಿಕಾರಕ. ಇದನ್ನು ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ಹೇಗೆ ಸ್ವಚ್ಛ ಮಾಡುವುದು? ಇಲ್ಲಿದೆ ಮಾಹಿತಿ.
ಒಂದು ಸಂಶೋಧನೆ ಪ್ರಕಾರ ಪ್ರತಿ ವರ್ಷ ಸುಮಾರು ೩.೪ ಮಿಲಿಯನ್ ಜನರು ನೀರಿನಿಂದ ಹರಡುವ ರೋಗಗಳಿಂದ ಸಾಯಿತ್ತರೆ. ಅದೇ ಕಾರಣಕ್ಕೆ ನಾವು ಶುದ್ಧ ನೀರನ್ನು ಕುಡಿಯುವುದು ಅತ್ಯಂತ ಮುಖ್ಯವಾಗಿದೆ. ಈ ಸತ್ತವರಲ್ಲಿ ಹೆಚ್ಚಿನವರು ಸಣ್ಣ ಪ್ರಾಯದವರೇ ಎಂದರೆ ನೀವು ಆಶ್ಚರ್ಯ ಪಡುತ್ತೀರ. ದೊಡ್ಡವರು ಮನೆಯಲ್ಲಿ ನೀರನ್ನು ಶುದ್ಧ ಮಾಡುವ ಯಂತ್ರ ಬಳಸಿದರೆ, ಪಾಪದವರ ಮನೆಯ ಮಕ್ಕಳು ಇದರಿಂದ ಸಮಸ್ಯೆಗಳಿಗೆ ಒಳಗಾಗುತ್ತಾರೆ. ನಮ್ಮ ಮನೆಯ ಮೇಲೆ ಇರುವ ಚಾವಣಿಯ ಟ್ಯಾಂಕ್ ಸ್ವಚ್ಛ ವಾಗಿಡುತ್ತೇವೆಯೇ ಇಲ್ಲವೋ? ಇಲ್ಲದಿದ್ದರೆ ಇಂದೇ ಸ್ವಚ್ಛ ಮಾಡಿಕೊಳ್ಳಿ.
ಈ ಟ್ಯಾಂಕ್ ಅಲ್ಲಿರುವ ನೀರನ್ನು ಜನರು ಪ್ರತಿ ದಿನ ಬಳಸುತ್ತಾರೆ. ಆದರೆ ಅದನ್ನು ಸ್ವಚ್ಛ ಗೊಳಿಸುವುದು ಕೂಡ ಅಗತ್ಯ. ಆದರೆ ಜನರು ಅದನ್ನು ಸ್ವಚ್ಛಗೊಳಿಸಲು ಮರೆತು ಬಿಡುತ್ತಾರೆ. ಕಾರಣ ಉದಾಸೀನ ಇರಬಹುದು ಅಥವಾ ಟ್ಯಾಂಕ್ ಸೈಜ್ ದೊಡ್ಡದಿರಬಹುದು ಹಾಗೆ ಒಳಗೆ ಹೋಗಿ ಸ್ವಚ್ಛ ಮಾಡುವುದು ಕಷ್ಟ ಸಾಧ್ಯ. ಆದರೆ ಅದನ್ನು ಕಾಲ ಕಾಲಕ್ಕೆ ಸ್ವಚ್ಛ ಗೊಳಿಸದೆ ಇದ್ದರೆ ಅದರಲ್ಲಿ ಬ್ಯಾಕ್ಟ್ರಿರಿಯಾ ಹಾಗು ವೈರಸ್ ಬರಬಹುದು. ಈ ಟ್ಯಾಂಕ್ ಸ್ವಚ್ಛ ಗೊಳಿಸಲು ಮಕ್ಕಳ ಸಹಾಯ ಪಡೆಯಬಹುದು. ನೀರು ಖಾಲಿ ಮಾಡಿದ ನಂತರ ಅಡಿಯಲ್ಲಿ ಒಂದಿದ ಮಣ್ಣನ್ನು ಬಟ್ಟೆ ಸಹಾಯದಿಂದ ಸ್ವಚ್ಛ ಗೊಳಿಸಬಹುದು.
ಮಕ್ಕಳು ಸ್ವಚ್ಛ ಗೊಳಿಸಲ್ಲ ಅಂದರೆ ಅದಕ್ಕಿಂತ ಉತ್ತಮ ಪರ್ಯಾಯ ಹೈಡ್ರೋಜನ್ ಪರಾಕ್ಸಾಯ್ಡ್. ಇದರಿಂದ ಎರಡು ಲಾಭ ಇದೆ. ಒಂದು ಇಡೀ ಟ್ಯಾಂಕ್ ಸ್ವಚ್ಛ ಗೊಳಿಸುವುದಲ್ಲದೆ, ಪೈಪ್ ಗಳನ್ನೂ ಕೂಡ ಸ್ವಚ್ಛ ಗೊಳಿಸುತ್ತದೆ. ಈ ಪೌಡರ್ ಬಳಸಲು ಮೊದಲು ನಿಮ್ಮ ಟ್ಯಾಂಕ್ ಅಲ್ಲಿ ೨೦೦ ಲೀಟರ್ ಅಷ್ಟು ನೀರು ಇಡೀ. ಉಳಿದದ್ದು ತೆಗೆದು ಬಿಡಿ. ಅದಕ್ಕೆ ಒಂದು ಲೀಟರ್ ಹೈಡ್ರೋಜನ್ ಪರಾಕ್ಸಾಯ್ಡ್ ಸೇರಿಸಿ ಮತ್ತು ಸುಮಾರು ೧೫ ನಿಮಿಷಗಳ ವರೆಗೆ ಬಿಡಿ. ನಂತರ ಎಲ್ಲ ನಲ್ಲಿಗಳ ನೀರನ್ನು ಬಿಡಿ. ಈ ಪೌಡರ್ ಎಲ್ಲ ನಲ್ಲಿ ಮೂಲಕ ಬಂದು ಇಡೀ ಪೈಪ್ ಅಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ಕೂಡ ಸ್ವಚ್ಛ ಗೊಳಿಸುತ್ತದೆ. ಇದಲ್ಲದೆ ಬ್ಲೀಚಿಂಗ್ ಪೌಡರ್ ಕೂಡ ಬಳಸಬಹುದು. ೧೦೦೦ ಲೀಟರ್ ಟ್ಯಾಂಕ್ ಗೆ ೫೦ಗ್ರಾಮ್ ಬ್ಲೀಚಿಂಗ್ ಪೌಡರ್ ಬಳಸಲಿ ಕೂಡ ಸ್ವಚ್ಛ ಮಾಡಬಹುದು.