300 ರೂಪಾಯಿ ಇಟ್ಟುಕೊಂಡು ಅಂದು ಮನೆ ಬಿಟ್ಟ ಹುಡುಗಿ ಇಂದು 7.5ಕೋಟಿ ರೂಪಾಯಿ ಬೆಲೆಬಾಳುವ ಕಂಪನಿಯ ಒಡತಿ?

420

ಜೀವನದಲ್ಲಿ ಎಲ್ಲವೂ ಆಗುವುದು ಒಳ್ಳೆಯದಕ್ಕೆ ಎಂಬ ಮಾತಿದೆ. ಆರಂಭದಲ್ಲಿ ಕಷ್ಟ ಎಂದು ಅನುಭವ ಆದರೂ ಕೊನೆಗೆ ಸಫಲತೆ ಸಿಗುವಾಗ ಅದರ ಮಹತ್ವ ಏನೆಂದು ಗೊತ್ತಾಗುತ್ತದೆ. ಹೀಗೆ ಇಲ್ಲೊಬ್ಬ ಹುಡುಗಿ ಮನೆಯಲ್ಲಿನ ಪರಿಸ್ಥಿತಿ ಒತ್ತಡ ಮಾನಸಿಕ ಖಿನ್ನತೆಯಿಂದ ಹೊರ ಬರಲು ಬರಿ 15ವರ್ಷ ವಯಸ್ಸಿನಲ್ಲಿ ಮನೆ ಬಿಟ್ಟು ಬಂದಿದ್ದಳು. ಆದರೆ ಈಕೆ ಮಾಡಿದ್ದು ಮಾತ್ರ ದೊಡ್ಡ ಸಾಧನೆ ಏನು ಬನ್ನಿ ತಿಳಿಯೋಣ. ಚೀನುಕಲಾ ಎಂಬ ಹೆಸರಿನ ಇವರು ಮೂಲತಃ ಮುಂಬೈ ಅವರು.

ಸಣ್ಣ ವಯಸ್ಸಿನಲ್ಲಿ ಮನೆ ಬಿಟ್ಟು ಇವರು ಬಂದಿದ್ದರು. ಕಿಸೆಯಲ್ಲಿ ಇದ್ದದ್ದು 300ರೂಪಾಯಿ. ಬಾಡಿಗೆ ಮನೆ ಹುಡುಕಿದಳು 20ರೂಪಾಯಿ ಬಾಡಿಗೆ ಆ ಸಮಯದಲ್ಲಿ. ಮನೆ ಹುಡುಕಿ ಕೆಲಸ ಹುಡುಕುತ್ತಾ ಕೊನೆಗೆ ಸೇಲ್ಸ್ ಗರ್ಲ್ ಕೆಲಸ ಸಿಕ್ಕಿತು. ಮನೆ ಮನೆಗೆ ಹೋಗಿ ಚಾಕು ಮನೆ ವಸ್ತುಗಳ ಮಾರಾಟ ಮಾಡುವುದು. ಅಷ್ಟೊಂದು ಸುಲಭದ ಕೆಲಸ ಆಗಿರಲಿಲ್ಲ ಈ ಹುಡುಗಿಗೆ ಆದರೂ ಛಲ ಬಿಡದೆ ಕೆಲಸ ಮಾಡಿ ದಿನಕ್ಕೆ 20ರಿಂದ 60ರೂಪಾಯಿ ವರೆಗೆ ದುಡಿಯುತ್ತಿದ್ದಳು. ಒಂದೇ ವರ್ಷದಲ್ಲಿ ಪ್ರಮೋಶನ್ ಆಗಿ ಸುವರ್ವೈಸರ್ ಆದಳು.ಅವರ ಕೈ ಕೆಳಗೆ ಮತ್ತೆ 3 ಜನ ಕೆಲಸ ಮಾಡಲು ಶುರು ಮಾಡಿದರು. ಈಗ ಆದಾಯ ಮತ್ತಷ್ಟು ಉತ್ತಮ ಆಯಿತು.

ಹೀಗೆ ಸಾಗಿದ ಜೀವನ ಕೊನೆಗೆ ಮದುವೆ ಕೂಡ ಆಯಿತು ಆಕೆ ಬೆಂಗಳೂರು ನಗರಕ್ಕೆ ಶಿಫ್ಟ್ ಆದಳು. ಹೀಗೆ ಒಮ್ಮೆ Gladras ಮಿಸ್ಸೆಸ್ ಇಂಡಿಯಾ ದಲ್ಲಿ ಭಾಗವಹಿಸುವಂತೆ ಸ್ನೇಹಿತರು ಒತ್ತಾಯಿಸಿದಾಗ ಆಕೆ ಹಿಂಜರಿದಳು ಕಾರಣ ಹೆಚ್ಚಿನ ವಿಧ್ಯಾಭ್ಯಾಸ ಇಲ್ಲ. ಆದರೂ ಗಂಡನ ಪ್ರೇರಣೆಯಿಂದ ಹೋಗಿ ಫೈನಲ್ ವರೆಗೆ ತಲುಪಿದಳು. ಅಲ್ಲಿಂದ ಅವಕಾಶಗಳು ಬರಲು ಆರಂಭವಾಯಿತು. ಕೊನೆಗೂ ಆಕೆ ಫ್ಯಾಶನ್ ಜಗತ್ತಿಗೆ ಎಂಟ್ರಿ ಕೊಟ್ಟಳು. ಹೀಗೆ ಸಿಕ್ಕ ಅವಕಾಶದಲ್ಲಿ ಫ್ಯಾಷನ್ ಜ್ಯುವೆಲರಿ ಬ್ಯುಸಿನೆಸ್ ಸ್ಟಾರ್ಟ್ ಮಾಡಿದರು. ಹೀಗೆ ಇದು ಇಂದು ಅತ್ಯಂತ ಪ್ರಸಿದ್ದ ಆಗಿದ್ದು. ಹಲವಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಇವರ ವಾರ್ಷಿಕ ಲಾಭ ಅಂದಾಜು 7.5ಕೋಟಿ ರೂಪಾಯಿ ಅಷ್ಟಿದೆ ಎಂದು ಅವರು ಹೇಳುತ್ತಾರೆ.

Leave A Reply

Your email address will not be published.