ದಿ ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ನಟರು ಪಡೆದ ಸಂಭಾವನೆ ಎಷ್ಟು ಗೊತ್ತೇ? ಅನುಪಮ್ ಖೇರ್ ೧ ಕೋಟಿ ತಗೊಂಡಿದ್ದರೆ, ಮಿಥುನ್ ಚಕ್ರವರ್ತಿ ಪಡೆದ ಸಂಭಾವನೆ ಎಷ್ಟು?
ಈತ್ತಿಚೆಗೆ ಬಿಡುಗಡೆ ಯಾಗಿ ಬಹಳ ಸದ್ದು ಮಾಡುತ್ತಿರುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಹಾಗು ಕಶ್ಮೀರ ಪಂಡಿತರು ತಮ್ಮ ಮನೆ ಮತ ಬಿಟ್ಟು ಬಂದಂತಹ ಸನ್ನಿವೇಶದ ಆದರದ ಮೇಲೆ ನಿರ್ಮಿತ ದಿ ಕಾಶ್ಮೀರ ಫೈಲ್ಸ್ ಈಗಾಗಲೇ ಬಾಕ್ಸ್ ಆಫೀಸ್ ದೂಳು ಎಬ್ಬಿಸಿದೆ. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ದರ್ಶನ ಕುಮಾರ್ ಈ ಚಿತ್ರದಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. ಸ್ವತಃ ಪ್ರಧಾನಿ ಮೋದಿ ಅವರೇ ಈ ಚಿತ್ರಕ್ಕೆ ಶುಭಾಶಯ ಕೋರಿದ್ದಾರೆ. ಅಲ್ಲದೆ ಬಿಜೆಪಿ ನಾಯಕರುಗಳು ಇದನ್ನು ಪ್ರಚಾರ ಮಾಡಿದ್ದಾರೆ.
ಇದೊಂದು ಸತ್ಯ ಘಟನೆ ಆಧಾರಿತ ಚಿತ್ರ ಅದರಿಂದ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ೨೦೦ ಕೋಟಿ ದಾಟುವಲ್ಲಿ ಸಫಲವಾಗಿದೆ. ಇದೀಗ ಈ ಚಿತ್ರದಲ್ಲಿ ನಟಿಸಿದ ನಂತರ ಸಂಭಾವನೆ ಎಷ್ಟು ಎನ್ನುವ ಅಂಕಿ ಅಂಶ ಹೊರಗೆ ಬಂದಿದೆ. ಬಾಲಿವುಡ್ ಲೈಫ್ ಎನ್ನುವ ವೆಬ್ಸೈಟ್ ವರದಿ ಪ್ರಕಾರ ಮಿಥುನ್ ಚಕ್ರವರ್ತಿ ಅವರು ಅತಿ ಹೆಚ್ಚು ಅಂದರೆ ೧.೫ ಕೋಟಿ ರೂಪಾಯಿ ಪಡೆದಿದ್ದರೆ. ಇನ್ನು ಅನುಪಮ್ ಖೇರ್ ೧ ಕೋಟಿ ಸಂಭಾವನೆ ಪಡೆದಿದ್ದಾರೆ. ಪಲ್ಲವಿ ಜೋಶಿ ೫೦-೭೦ ಲಕ್ಷ ಪಡೆದಿದ್ದಾರೆ.
ದರ್ಶನ ಕುಮಾರ್ ೪೫ ಲಕ್ಷ ಹಾಗು ಪುನೀತ್ ಇಸ್ಸಾರ್ ೫೦ ಲಕ್ಷ ಪಡೆದಿದ್ದಾರೆ. ಇನ್ನು ಲಕ್ಷ್ಮಿ ದುತ್ತ್ ಪಾತ್ರ ಮಾಡಿದ್ದ ಮೃಣಾಲ್ ಕುಲಕರ್ಣಿ ೫೦ ಲಕ್ಷ ರೂಪಾಯಿ ಪಡೆದಿದ್ದಾರೆ. ಇನ್ನು ಚಿತ್ರದ ನಿರ್ದೇಶನ ಮಾಡಿದ ವಿವೇಕ್ ಅಗ್ನಿಹೋತ್ರಿ ೧ ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಚಿತ್ರವೂ ಮಾರ್ಚ್ ೧೧ ೨೦೨೨ ರಂದು ಪ್ರದರ್ಶನಗೊಂಡಿವೆ. ಇದು ಕೇವಲ ೧೦ ದಿನಗಳಲ್ಲಿ ವಿಶ್ವದಾದ್ಯಂತ ೨೦೦ ಕೋಟಿ ಗಳಿಕೆ ಮಾಡಿದೆ. ಈ ಚಿತ್ರದ ಬಂಡವಾಳ ಸುಮಾರು ೧೫-೨೦ ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ.