ಈ ಕೃಷಿ ಮಾಡಿ ೬ ತಿಂಗಳಲ್ಲಿ ೧೦ ಲಕ್ಷದವರೆಗೆ ಕಮಾಯಿ ಮಾಡಬಹುದು. ಇದರ ಬಗ್ಗೆ ಮಾಹಿತಿ ಇಲ್ಲಿದೆ.
ಕೃಷಿಯನ್ನು ನಂಬಿಕೊಂಡು ಬದುಕುವ ಅದೆಷ್ಟೋ ಜನರು ಇದ್ದಾರೆ. ಅವರಿಗೆ ಕೃಷಿಯೇ ಮೂಲ ಅದನ್ನು ಬಿಟ್ಟರೆ ಬೇರೆ ಯಾವುದೇ ಆದಾಯ ಮೂಲ ಇಲ್ಲ. ಹೀಗಿರುವಾಗ ಕೆಲವೊಮ್ಮೆ ಪ್ರಕೃತಿಯ ಅನಾವೃಷ್ಟಿ ಅಥವಾ ಬೇರೇನಾದರೂ ಕಾರಣಗಳಿಂದ ಬೆಳೆ ನಾಶ ಆಗುತ್ತದೆ. ಆ ಸಮಯದಲ್ಲಿ ಅತೀವ ನಷ್ಟ ಉಂಟಾಗುತ್ತದೆ. ಆದರೆ ಇಂತಹ ಕೆಲವೊಂದು ಸನ್ನಿವೇಶದಿಂದ ದೂರ ಇರಲು ಕಡಿಮೆ ಕರ್ಚಿನಲ್ಲು ಅತೀ ಹೆಚ್ಚು ಲಾಭ ಪಡೆಯುವ ಬೇಸಾಯ ಪದ್ಧತಿಯನ್ನು ನಾವು ಅನುಸರಿಸಬೇಕು. ಹೌದು ಅಂತಹುದೇ ಒಂದು ಬೆಲೆಯ ಬಗ್ಗೆ ನಾವಿಂದು ತಿಳಿಸುತ್ತೇವೆ.
ಈ ಬೆಳೆ ಯನ್ನು ಮಳೆಗಾಲ ಮುಗಿದ ನಂತರ ಅಂದರೆ ಅಕ್ಟೋಬರ್ ತಿಂಗಳ ಸಮಯಕ್ಕೆ ಬೆಳೆಯಲು ಶುರು ಮಾಡುತ್ತಾರೆ. ಬೆಳೆಯನ್ನು ಬೆಳೆಯಲು ಆ ಗಿಡದ ಮೊಗ್ಗನ್ನು ತಳಿ ಮಾಡುತ್ತಾರೆ ಅದರಿಂದ ಆ ಬೆಳೆ ಬೆಳೆಯುತ್ತಾರೆ. ಇದು ಬೆಳೆದೆ ಫಸಲು ಬರಲು 6 ತಿಂಗಳ ಸಮಯ ಬೇಕು. ಹೌದು ಆ ಬೆಲೆ ಮತ್ಯಾವುದೋ ಅಲ್ಲ ನಾವು ದಿನ ನಿತ್ಯ ಬಳಸುವ ಬೆಳ್ಳುಳ್ಳಿ ಬೆಳೆ. ಒಂದು ಎಕರೆಗೆ 10ಕ್ವಿಂಟಾಲ್ ನಶ್ಟು ಬೆಳೆ ಬರುತ್ತದೆ. ಪ್ರತಿ ಕ್ವಿಂಟಾಲ್ ಗೆ 10,000ಕ್ಕಿಂತಲೂ ಹೆಚ್ಚು ಬೆಲೆ ಇದೆ.
ಇದರಿಂದಾಗಿ 6 ತಿಂಗಳ ಸಮಯದಲ್ಲಿ 10ಲಕ್ಷದ ವರೆಗೆ ಲಾಭ ಪಡೆಯಬಹುದು. ನಷ್ಟದ ಸಾಂಪ್ರದಾಯಿಕ ಬೇಸಾಯ ಪದ್ಧತಿಯಿಂದ ಸೋತಿರುವ ರೈತರು ಇದನ್ನು ಕೂಡ ಪರೀಕ್ಷೆ ಮಾಡಿ ನೋಡಬಹುದು ಇದರಿಂದ ಏನಾದರೂ ಅಲ್ಪ ಸ್ವಲ್ಪ ಮಟ್ಟಿಗೆ ಲಾಭ ಆದ್ರೂ ಅದರಿಂದ ಈ ಹಿಂದೆ ಆದ ನಷ್ಟವನ್ನು ಭರಿಸಬಹುದು. ದೈನಂದಿನ ಕೆಲಸದಿಂದ ಬೇಸತ್ತಿದ್ದಾರೆ ಈ ಕೃಷಿಯನ್ನೇ ಉದ್ಯಮವನ್ನಾಗಿಸಿ ಉತ್ತಮ ಜೀವನ ಸಾಗಿಸಬಹುದು.