೯ ನೇ ತರಗತಿ ಪಾಸಾದ ವ್ಯಕ್ತಿ ರೈತರಿಗೆ ಉಪಯೋಗಕ್ಕೆ ೧೫ ಕ್ಕೂ ಹೆಚ್ಚು ಕಡಿಮೆ ದರದಲ್ಲಿ ಆಹಾರ ಸಂಸ್ಕರಣಾ ಯಂತ್ರ ತಯಾರು ಮಾಡಿದ್ದಾರೆ. ಇದರ ಬಗ್ಗೆ ಪೂರ್ತಿ ಮಾಹಿತಿ ತಿಳಿದುಕೊಳ್ಳಿ.

287

ಅಸ್ಸಾಂ ಮುಖ್ಯವಾಗಿ ಹೆಸರುವಾಸಿ ಆಗಿರೋದು ಚಹಾ ಗೆ. ಅದರ ಕೃಷಿ ಅಲ್ಲಿ ಮುಖ್ಯವಾದ ಭಾಗವಾಗಿದೆ. ಆದರೆ ಈ ಚಹಾ ಕೃಷಿ ಇಂದ ಲಾಭ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಕಾರಣ ಚಹಾ ಸಂಸ್ಕರಣೆ. ಅದರಿಂದ ರೈತರಿಗೆ ಅವರ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಲು ಅಸ್ಸಾಂ ನ ರೈತ ರಾರೀಬ್ ಗೊಗೋಯ್ ಅವರು ತಮ್ಮದೇ ಸಂಸ್ಕರಣಾ ಘಟಕ ಸ್ಥಾಪಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರೇ ಸ್ವಂತ ಸಂಸ್ಕರಣಾ ಯಂತ್ರ ಕೂಡ ಸಿದ್ದಪಡಿಸಿದ್ದಾರೆ.

ಈ ಗೊಗೋಯ್ ಅವರು ೯ ನೇ ತರಗತಿ ತನಕ ಓದಿದ್ದಾರೆ. ಅವರು ಕೂಡ ಚಹಾ ಬೆಳೆಯುವ ರೈತರು. ಅವರು ಬೆಳೆಯುವ ಚಹಾ ಕೃಷಿ ಉತ್ಪನ್ನ ಹತ್ತಿರದ ಕಾರ್ಖಾನೆಗಳಿಗೆ ಸಾಗಿಸುತ್ತಿದ್ದರು. ಆದರೆ ಒಂದು ಮೂಟೆ ಈ ಚಹಾ ಎಲೆಗಳನ್ನು ಕಾರ್ಖಾನೆಗೆ ನೀಡಿದರು ಕೂಡ ೮ ರೂಪಾಯಿ ಗಿಂತ ಮೇಲೆ ಸಿಗುತ್ತಿರಲಿಲ್ಲ. ಅವರ ಆದಾಯವನ್ನು ಹೆಚ್ಚಿಸಲು ಪ್ರಯತ್ನ ಮಾಡುತ್ತಿದ್ದರು. ಅದಕ್ಕಾಗಿ ಚಹಾ ಸಂಸ್ಕರಣೆ ಅವರೇ ಮಾಡಲು ನಿರ್ಧರಿಸಿದರು. ಇದಕ್ಕಾಗಿ ಯಂತ್ರಗಳನ್ನು ಹುಡುಕಲು ನಿರ್ಧರಿಸಿದರು.

ಮಾರುಕಟ್ಟೆಯಲ್ಲಿ ಹೆಚ್ಚಿನ ಯಂತ್ರಗಳು ದೊಡ್ಡ ಚಹಾ ತೋಟ ಗಳಿರುವವರನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ ಎಂದು ತಿಳಿದುಕೊಂಡರು. ಸಣ್ಣ ರೈತರಿಗೆ ಅದನ್ನು ಕೊಳ್ಳುವಷ್ಟು ಹಾಗು ಅದರ ಉಪಯೋಗ ಅಷ್ಟು ಇರುವುದಿಲ್ಲ ಎಂದು ಮನವರಿಕೆ ಮಾಡಿಕೊಂಡರು. ಅದಕ್ಕಾಗಿ ೨೦೦೮ ರಲ್ಲಿ ಅವರೇ ಒಂದು ಸ್ವಂತ ಯಂತ್ರ ತಯಾರು ಮಾಡಿದರು. ಇದು ಸಣ್ಣ ರೈತರಿಗೆ ಬಹಳ ಉಪಯೋಗಿ ಆಗಿದೆ. ಇವರು ಸಂಸ್ಕರಣಾ ಯಂತ್ರಗಳ ಜೊತೆಗೆ ಬೇರೆ ಯಂತ್ರಗಳನ್ನು ತಯಾರಿಸಲು ನಿರ್ಧರಿಸಿದರು.

೨೦೦೯ ರ ನಂತರ ಮಿನಿ ಟೀ ಸ್ಟ್ರೀಮರ್, ರೋಲಿಂಗ್ ಟೇಬಲ್, ರೌಂಡ್ ಡ್ರಾಯರ್, ಕಾಂಪ್ಯಾಕ್ಟ್ ಹೀಟರ್, ಟೀ ಬ್ರೇಕರ್ ಇಂತಹ ಅನೇಕ ಯಂತ್ರ ಗಳನ್ನೂ ಸಣ್ಣ ರೈತರ ಅಗತ್ಯತೆಗೆ ತಕ್ಕಾಗೆ ತಯಾರಿಸಿದರು. ಇವರ ಬಳಿ ೧೫ ಕ್ಕೂ ಹೆಚ್ಚು ರೀತಿಯ ಸಂಸ್ಕರಣಾ ಯಂತ್ರಗಳು ಸಿದ್ಧವಿದೆ. ಇದು ರೈತರಿಗೆ ಒಳ್ಳೆ ಲಾಭ ತಂದು ಕೊಟ್ಟಿದೆ ಅಂತಾನೂ ಹೇಳುತ್ತಾರೆ ಅಲ್ಲಿ ಈ ಯಂತ್ರ ಖರೀದಿಸಿದ ರೈತರು. ಗೊಗೋಯ್ ಅವರು ಇದುವರೆಗೂ ೨೦೦ ಕ್ಕೂ ಹೆಚ್ಚು ಯಂತ್ರಗಳನ್ನು ಮಾರಾಟ ಮಾಡಿದ್ದಾರೆ.

ಯಂತ್ರಗಳ ವಿನ್ಯಾಸ ಕ್ಷಮತೆ ಹಾಗು ಅವಶ್ಯಕತೆಗಳ ಅನುಗುಣದ ಮೇಲೆ ಅವುಗಳ ಬೆಲೆ ೪೦,೦೦೦ ದಿಂದ ೧೦ ರೂಪಾಯಿವರೆಗೂ ಇದೆ. ಅವರು ರೈತರ ಬಜೆಟ್ ಗೆ ಅನುಗುಣವಾಗಿ ತಯಾರು ಮಾಡುತ್ತಿದ್ದಾರೆ ಈ ಯಂತ್ರಗಳನ್ನು. ಈ ಯಂತ್ರಗಳನ್ನು ಅಭಿವೃದ್ಧಿ ಪಡಿಸಲು NIF ಇಂದ ಆರ್ಥಿಕ ಸಹಾಯ ಕೂಡ ಪಡೆದಿದ್ದಾರಂತೆ. ನೀವು ಕೂಡ ಈ ಗೊಗೋಯ್ ಅವರನ್ನು ಸಂಪರ್ಕಿಸಲು ಬಯಸಿದರೆ ಅವರಿಗೆ ಈ ಇಮೇಲ್ id ಮೂಲಕ ಸಂಪರ್ಕಿಸಬಹುದಾಗಿದೆ. ಅವರ ಈ ಮೇಲ್ – [email protected]

Leave A Reply

Your email address will not be published.