ಡ್ರೈವರ್ ಖಾತೆಯಿಂದ 43 ಲಕ್ಷ ತೆರಿಗೆ ಕಡಿತ! ವಾಪಸ್ಸು ಕೊಡಲು ಹಿಂದೇಟು ಹಾಕಿದ ಟೋಲ್ ಕಂಪನಿ. ಏನಿದು ಅಚಾತುರ್ಯ?
ಟೋಲ್ ವಸೂಲಿ ಮಾಡುವ ಕಂಪನಿ ಇಂದ ಚಾಲಕನ ಖಾತೆಗೆ ೪೩ ಲಕ್ಷ ಕಡಿತವಾಗಿದೆ. ಇದರಿಂದ ದಿಗ್ಬ್ರಮೆ ಗೊಂಡ ಚಾಲಕ ಕಂಪನಿ ಬಳಿ ವಾಪಸ್ಸು ಮಾಡುವಂತೆ ಕೇಳಿದರೆ ಹಿಂದಿರುಗಿಸಲು ಕಂಪನಿ ಹಿಂದೇಟು ಹಾಕುತ್ತಿದೆ. ಆದರೆ ಇದರ ಬದಲಾಗಿ ಕ್ರೆಡಿಟ್ ನೀಡಲು ಮುಂದಾಗಿದೆ. ಇದೆ ವೇಳೆ ತನ್ನ ಹಣ ವಾಪಸ್ಸು ಪಡೆಯಲು ಚಾಲಕ ಅತ್ತ ಇತ್ತ ಅಲೆದಾಡುತ್ತಿದ್ದಾನೆ. ತಪ್ಪು ಕಂಪನಿ ಒಪ್ಪಿಕೊಂಡರು ಕೂಡ ಹಣ ನೀಡಲು ಸತಾಯಿಸುತ್ತಿದೆ.
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನಲ್ಲಿ ಈ ಪ್ರಕರಣ ನಡೆದಿದೆ. ಜಾಸನ್ ಕ್ಲಿಂಟೊನ್ ಅಲ್ಲಿನ ಟೋಲ್ ರಸ್ತೆಯಲ್ಲಿ ತನ್ನ ಟ್ರಕ್ ಮೂಲಕ ಹೋಗುವಾಗ ಟೋಲ್ ಬಳಿ ಅವನ ಖಾತೆಯಿಂದ ೭೫,೦೦೦ ರೂಪಾಯಿ ಅಂದರೆ ೧೦೦೦ ಡಾಲರ್ ತೆರಿಗೆ ರೂಪದಲ್ಲಿ ಕಡಿತಗೊಂಡಿದೆ. ಸೋಮವಾರ ಅದೇ ದಾರಿಯಲ್ಲಿ ಹೋದಾಗ ಅವರ ಖಾತೆಯಿಂದ ೧೩ ಲಕ್ಷ ರೂಪಾಯಿ ಅಂದರೆ ೧೭,೦೦೦ ಡಾಲರ್ ರೂಪಾಯಿ ಕಡಿತಗೊಂಡಿದೆ. ಕಂಪನಿ ಬಳಿ ದೂರು ನೀಡಿದಾಗ ತಪ್ಪನ್ನು ಒಪ್ಪಿಕೊಂಡರು ಕಂಪನಿ ಹಣ ವಾಪಸ್ಸು ಮಾಡಲು ನಿರಾಕರಿಸಿದೆ.

ಹಣ ನೀಡುವ ಬದಲು ೪೩ ಲಕ್ಷಗಳ ಕ್ರೆಡಿಟ್ ಕೋಪನ್ ನೀಡುತ್ತೇವೆ ಎಂದಿದೆ. ಆದರೆ ಈ ಕೂಪನ್ ತೆರಿಗೆ ಪಾವತಿಸಲು ಮಾತ್ರ ಬಳಸಬಹುದು ಎಂದು ಹೇಳಿದೆ. ಟೋಲ್ ರಸ್ತೆಯಲ್ಲಿ ಹೋಗುವಾಗ ಡ್ರೈವರ್ ಇನೊಮ್ ಪಾವತಿಸಬೇಕಾಗಿಲ್ಲ. ಕೋಪನ್ ತೋರಿಸಿದರೆ ಸಾಕು ಎಂದು ಹೇಳಿದೆ. ಆದರೆ ಜಾಸನ್ ಎನ್ನುವ ಡ್ರೈವರ್ ಮತ್ತೆಂದೂ ಆ ರಸ್ತೆಯಲ್ಲಿ ಹಾದು ಹೋಗದಿದ್ದರೆ ಈ ಕೋಪನ್ ವ್ಯರ್ತ ಎನ್ನುವುದು ಡ್ರೈವರ್ ವಾದ. ಅಲ್ಲಿನ ಮಾಧ್ಯಮದ ಜೊತೆ ಮಾತಾಡಿದ ಡ್ರೈವರ್ ಇದೊಂದು ಹಾಸ್ಯಾಸ್ಪದವಾಗಿದೆ ಎಂದು ಹೇಳಿದ್ದಾರೆ. ಅವರ ತಪ್ಪಿನಿಂದ ತನ್ನ ಖಾತೆಯಿಂದ ಕಡಿತವಾದ ಹಣ ಮರು ಪಾವತಿ ಮಾಡಬೇಕೆಂದು ಡ್ರೈವರ್ ಹೇಳಿದ್ದಾನೆ.
ಇದಾದ ನಂತರ ಕಂಪನಿ ತಾನು ಹೆಚ್ಚು ಪಡೆದ ತೆರಿಗೆ ವಾಪಸ್ಸು ನೀಡುವುದಾಗಿ ಹೇಳಿಕೊಂಡಿದೆ. ಅಲ್ಲದೆ ಈ ವ್ಯಕ್ತಿಗಿಂತ ಮೊದಲು ಸುಮಾರು ೪೫ ಸಾವಿರ ಜನರ ಬಳಿಯೂ ಅಧಿಕ ತೆರಿಗೆ ತಪ್ಪಿನಿಂದಾಗಿ ಮಾಡಿಕೊಂಡಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ. ಇದೀಗ ಈ ಪ್ರಕರಣದೊಂದಿಗೆ ಅವರೆಲ್ಲ ಹಣ ವಾಪಸ್ಸು ನೀಡುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಅಲ್ಲಿನ ಸಾರಿಗೆ ಸಚಿವರು ಕೂಡ ಹಣ ಮರುಪಾವತಿ ಮಾಡುವಂತೆ ಹೇಳಿದ್ದಾರೆ.