RCB ತಂಡವನ್ನು ಅರ್ಧಕ್ಕೆ ಬಿಟ್ಟು ಮನೆಗೆ ಮರಳಿದ ಹರ್ಷಲ್ ಪಟೇಲ್ ? ಇದ್ದಕ್ಕಿದ್ದಂತೆ ನಡೆದದ್ದು ಏನು?
RCB ತಂಡವನ್ನು ಅರ್ಧಕ್ಕೆ ಬಿಟ್ಟು ಮನೆಗೆ ಮರಳಿದ ಹರ್ಷಲ್ ಪಟೇಲ್ ? ಇದ್ದಕ್ಕಿದ್ದಂತೆ ನಡೆದದ್ದು ಏನು?
RCB ತಂಡ ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಈ ಬಾರಿ ಕಪ್ ಗೆಲ್ಲುವ ಭರವಸೆ ಮೂಡಿಸಿದೆ. ನಾಯಕತ್ವದಲ್ಲಿ ಬದಲಾವಣೆ ಆದ ನಂತರ ತಂಡ ಉತ್ತಮ ಸ್ಥಿತಿಗೆ ಮರಳಿರುವುದು ಕಾಣಬಹುದು. ಡುಪ್ಲೆಸಿಸಿ ನಾಯಕ ಸ್ಥಾನ ವಹಿಸಿಕೊಂಡ ನಂತರ ತಂಡ ಗೆಲುವಿನ ಹಳಿಯಲ್ಲಿ ಇದೆ. ಈ ಬಾರಿಯ ಚಾಂಪಿಯನ್ ಆಗುವ ಎಲ್ಲಾ ಲಕ್ಷಣಗಳು ಪ್ರದರ್ಶನದಲ್ಲಿ ಕಾಣುತ್ತಿದೆ.
ತಂಡದ ಯಶಸ್ಸಿಗೆ ಕಾರಣಕರ್ತರು ತುಂಬಾ ಜನರು ಅದರಲ್ಲಿ ಬೌಲರ್ ಹರ್ಷಲ್ ಪಟೇಲ್ ಕೂಡ ಒಬ್ಬರು. ಹೌದು ಈ ಬಾರಿ ಕೋಟ್ಯಾಂತರ ಹಣ ಖರ್ಚು ಮಾಡಿ ಹರ್ಷಲ್ ಪಟೇಲ್ ಅನ್ನು ಉಳಿಸಿ ಕೊಂಡಿದ್ದು ತಂಡ ಅದಕ್ಕೆ ಪುಷ್ಟಿ ಎಂಬಂತೆ ಪ್ರದರ್ಶನ ಕೂಡ ನೀಡುತ್ತಿದ್ದಾರೆ. ಇದೀಗ RCB ತಂಡಕ್ಕೆ ದೊಡ್ಡ ಆಘಾತ ಆಗಿದೆ. ಹೌದು ಹರ್ಷಲ್ ಪಟೇಲ್ ಅರ್ಧಕ್ಕೆ ಟೂರ್ನಿ ನಿಲ್ಲಿಸಿ ಮನೆಗೆ ಮರಳಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. ಹರ್ಷಲ್ ಪಟೇಲ್ ಅವರ ಸಹೋದರಿ ನಿನ್ನೆ ನಡೆದ ಮ್ಯಾಚ್ ವೇಳೆ ತಮ್ಮ ಕೊನೆಯುಸಿರು ಎಳೆದಿದ್ದಾರೆ.
ಸ್ವಲ್ಪ ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದ, ನಿನ್ನೆಯ ದಿನ ಕೊನೆಯುಸಿರು ಬಿಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಹರ್ಷಲ್ ಅರ್ಧಕ್ಕೆ ಮನೆಗೆ ವಾಪಸ್ ಆಗಿದ್ದಾರೆ. ಇನ್ನು ಯಾವಾಗ ತಂಡವನ್ನು ಸೇರಲಿದ್ದಾರೆ ಎಂಬ ಮಾಹಿತಿ ಇಲ್ಲ. ಆದರೂ ತಂಡಕ್ಕೆ ಇದು ಬಲು ದೊಡ್ಡ ಹಿನ್ನಡೆ ಆದರೂ ತಪ್ಪಾಗಲಿಕ್ಕಿಲ್ಲ. ಆದರೂ ಈ ಒಂದು ಅಗಲಿಕೆ ಹರ್ಷಲ್ ಅವರಿಗೆ ಬರಿಸಲಾಗದ್ದು. ಅವರೀಗ ಇದೆಲ್ಲವನ್ನೂ ಸಹಿಸಿ ಕೊಳ್ಳುವ ಶಕ್ತಿ ಕೊಡಲಿ ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವ.