ವಿಷ್ಣು ದಾದ ನಟಿಸಿದ ಕನ್ನಡ ಸಿನೆಮಾ ಕಥೆ ಕದ್ರಾ ತಮಿಳು ಸೂಪರ್ ಸ್ಟಾರ್ ತಲಪತಿ ವಿಜಯ್? ಇದರ ಅಸಲಿಯತ್ತೇನು?
ಕನ್ನಡದ KGF ಚಾಪ್ಟರ್ 2 ಚಿತ್ರಕ್ಕೆ ಸೆಡ್ಡು ಎಂಬಂತೆ ತಮಿಳು ಚಿತ್ರ ರಂಗ ತಮಿಳು ಸೂಪರ್ ಸ್ಟಾರ್ ವಿಜಯ್ ಅಭಿನಯದ ಬೀಸ್ಟ್ ಚಿತ್ರವನ್ನು ತೆರೆಗೆ ಬಿಟ್ಟಿದ್ದಾರೆ. ಪೈಪೋಟಿಯ ಮೇಲೆ ಪೈಪೋಟಿ ಎಂಬಂತೆ ಚಿತ್ರ ಬರುತ್ತಿದೆ. ಆದರೆ ಎಷ್ಟರ ಮಟ್ಟಿಗೆ KGF ಚಾಪ್ಟರ್2 ಅನ್ನು ಭೇಧಿಸುತ್ತದೆ ಎಂದು ಕಾದು ನೋಡಬೇಕು. ಆದರೆ ಬಿಡುಗಡೆ ಹಂತದಲ್ಲಿರುವ ಚಿತ್ರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹೌದು ಕನ್ನಡದ ಸಿನಿಮಾವನ್ನೇ ಕದ್ದು ಚಿತ್ರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
1993 ನೆಯ ಇಸವಿಯಲ್ಲಿ ತೆರೆಕಂಡ ಚಿತ್ರ ನಮ್ಮ ವಿಷ್ಣುದಾದನ ನಿಷ್ಕರ್ಷ. ಹೌದು ಈ ಸಿನೆಮಾವನ್ನು ಕನ್ನಡ ಚಿತ್ರ ರಂಗ ಎಂದಿಗೂ ಮರೆಯಲು ಸಾಧ್ಯವಿಲ್ಲ. ಯಾಕೆಂದ್ರೆ ಅಂತಹ ಕಥೆಯ ರಚನೆ ಮಾಡಲಾಗಿತ್ತು. ಮತ್ತು ವಿಷ್ಣು ದಾದ ಈ ಕಥೆಗೆ ಅಷ್ಟೇ ಜೀವ ಕೂಡ ತುಂಬಿದ್ದರು. ಈಗ ತಮಿಳಿನಲ್ಲಿ ಬಿಡುಗಡೆ ಆಗುತ್ತಿರುವ ಬೀಸ್ಟ್ ಚಿತ್ರ ವಿಷ್ಣು ದಾದ ನಟನೆಯ ನಿಷ್ಕರ್ಷ ಸಿನೆಮಾದ ರೀಮೇಕ್ ಎಂದು ಜನರು ಹೇಳುತ್ತಿದ್ದಾರೆ. ಟ್ರೇಲರ್ ವೀಕ್ಷಿಸಿದ ಜನರು ಇದು ನಿಷ್ಕರ್ಷ ಸಿನೆಮಾದ ಕಥೆ.
ಮಾಲ್ ಒಂದನ್ನು ಭಯೋತ್ಪಾದಕ ಗುಂಪು ಆವರಿಸಿ ಜನರನ್ನು ಒತ್ತೆಯಾಳಾಗಿ ಮಾಡಿ ಯೋಧನೊಬ್ಬ ಅವರನ್ನು ಬಿಡಿಸುವ ಕಥೆ ಇದಾಗಿದ್ದು. ವಿಷ್ಣು ದಾದ ನಟನೆಯ ನಿಷ್ಕರ್ಷ ಸಿನೆಮಾ ಇದೆ ಕಥೆಯನ್ನು ಆದರಿಸಿದ್ದು ಇದೀಗ ತಮಿಳು ಚಿತ್ರ ರಂಗ ಅದನ್ನೇ ಕಾಪಿ ಮಾಡಿದೆ ಎಂದು ಆರೋಪ ಕೇಳಿ ಬರುತ್ತಿದೆ. ವಿಜಯ್ ಸಿನೆಮಾ ವಿದೇಶದಲ್ಲಿ ಅಂದರೆ ಕುವೈತ್ ಅಲ್ಲಿ ಬಿಡುಗಡೆ ಕೂಡಾ ಆಗುತ್ತಿಲ್ಲ. ಇದೆಲ್ಲಾ ಚಿತ್ರ ತಂಡಕ್ಕೆ ಮೈನಸ್ ಪಾಯಿಂಟ್ ಆಗಿ ಬರಬಹುದು.