ಪ್ರಭು ಶ್ರೀ ರಾಮನ ವನವಾಸ 14 ವರ್ಷನೆ ಯಾಕಿತ್ತು? ಅದಕ್ಕಿಂತ ಕಡಿಮೆ ಅಥವಾ ಜಾಸ್ತಿ ಯಾಕೆ ಇರಲಿಲ್ಲ? ಇದರ ಹಿಂದೆ ಇದೆ ಒಂದು ಕಾನೂನು ವಿಷಯ.
ಶ್ರೀ ರಾಮ ಎಂದರೆ ಎಲ್ಲರಿಗೂ ಗೊತ್ತು. ಭರತ ಖಂಡ ಕಂಡ ಆದರ್ಶ ಪುರುಷ ಶ್ರೀ ರಾಮ. ಮನುಷ್ಯ ಬದುಕಿದರೆ ಶ್ರೀ ರಾಮನ ಹಾಗೆ ಬದುಕಬೇಕು ಎಂದು ಹೇಳುವ ವಾಡಿಕೆ ಉಂಟು. ಕಾರಣ ಶ್ರೀ ರಾಮ ಬದುಕಿದ ಆದರ್ಶ ಅಂತಹುದು, ನಡೆಸಿದ ಜೀವನ ಅಂತಹುದು. ಹಾಗಾದರೆ ರಾಮಾಯಣದ ಪ್ರಮುಖ ಘಟ್ಟ ರಾಮನ ವನವಾಸದ ವಿಚಾರಕ್ಕೆ ಬಂದಾಗ, ರಾಮ 14 ವರ್ಷ ವನವಾಸ ಮಾಡಿದ್ದರು. ಆದರೆ ನೀವು ಎಂದಾದರೂ ಯೋಚನೆ ಮಾಡಿದ್ದೀರಾ ? ಯಾಕಿದೂ 14 ಯಾಕೆ ಅದು 10,9,8 ವರ್ಷಗಳು ಆಗಿಲ್ಲ. ಹೀಗೊಂದು ಯೋಚನೆ ಈಗ ಬಂದಿದ್ದರು ಇಲ್ಲಿದೆ ಉತ್ತರ.
ಕೈಕೆಯು ತನ್ನ ಪತಿಯಿಂದ ಪಡೆದ ವರದಾನ ದಂತೆ ತನ್ನ ಮಗನನ್ನು ಪಟ್ಟದ ಮೇಲೆ ಕೂರಿಸಬೇಕು ಎಂಬ ದೂರಾಲೋಚನೆ ಇಂದಾಗಿ ತನ್ನ ಪತಿಯಲ್ಲಿ ಶ್ರೀ ರಾಮ 14 ವರ್ಷ ಕಾಡಿಗೆ ವನವಾಸ ಹೋಗಬೇಕು ಎಂದು ವರದಾನ ಕೇಳುತ್ತಾಳೆ. ಕೊಟ್ಟ ಮಾತಿನಂತೆ ನಡೆಯದೆ ಹೋದರೆ ರಾಜ ಧರ್ಮಕ್ಕೆ ಮೋಸ ಎಂಬಂತೆ ಶ್ರೀ ರಾಮ ತಂದೆಯ ಮಾತನ್ನು ಉಳಿಸಲು ಕಾಡಿಗೆ ಹೊರಡುತ್ತಾನೆ. ಹಾಗಾದರೆ ಇಲ್ಲಿ 14 ವರ್ಷ ಏಕೆ ಎಂಬ ಪ್ರಶ್ನೆ ಬಂದೆ ಇಲ್ಲ ಯಾರಿಗೂ ಇದಕ್ಕೂ ಒಂದು ಕಾರಣ ಇದೆ
ಕಾನೂನು ಪ್ರಕಾರ ಯಾವುದೇ ಭೂಮಿಯ ಒಡೆಯ 14ವರ್ಷಗಳ ದೀರ್ಘ ಕಾಲ ತನ್ನ ಭೂಮಿಯ ಒಡೆತನ ಇಲ್ಲದೆ ದೂರದಲ್ಲಿ ಇದ್ದಾಗ ಆತ ಅದರ ಮೇಲಿನ ಹಕ್ಕನ್ನು ಕಳೆದು ಕೊಳ್ಳುತ್ತಾನೆ. ಆಗಿನ ಕಾಲದಲ್ಲಿ ಕೂಡ ಹಾಗೆ ರಾಜನು 14ವರ್ಷಗಳ ಧೀರ್ಘ ಕಾಲದವರೆಗೆ ಆಡಳಿತ ನಡೆಸಿದೆ ಹೋದಲ್ಲಿ ಆತನನ್ನು ರಾಜ ಸ್ಥಾನದಿಂದ ಅನರ್ಹ ಗೊಳಿಸುತ್ತಿದ್ದರು. ಇದೆ ಕಾರಣದಿಂದಾಗಿ ಶ್ರೀರಾಮನು 14ವರ್ಷ ರಾಜ್ಯಕ್ಕೆ ಬಾರದಂತೆ ಬೇಡಿಕೆ ಇಟ್ಟು ಆತನನ್ನು ಕಾಡಿಗೆ ಕಳುಹಿಸಲಾಗಿತ್ತು.