ಅಭಿಮಾನಿಗಳಿಗೆ ಕ್ಷಮೆ ಕೇಳಿದ ಅಕ್ಷಯ್ ಕುಮಾರ್. ಅಜಯ್ ದೇವ್‌ಗನ್ ಹಾಗು ಶಾರುಖ್ ಖಾನ್ ದಾರಿಯಲ್ಲಿ ನಡೆಯದೇ ಅರ್ಧಕ್ಕೆ ಬಂದ ಖಿಲಾಡಿ.
ಅಕ್ಷಯ್ ಕುಮಾರ್ ಯಾರಿಗೆ ಗೊತ್ತಿಲ್ಲ ಹೇಳಿ. ವರ್ಷಕ್ಕೆ ಮೂರು ಸಿನೆಮಾ ಮೂಲಕ ಜನರನ್ನು ಮನರಂಜಿಸಲು ಬರುವ ಖಿಲಾಡಿ ಕುಮಾರ್. ಇವರು ಇತ್ತೀಚಿಗೆ ನಟಿಸಿದ ಎಲ್ಲ ಚಿತ್ರಗಳು ಕೂಡಾ ಸೂಪರ್ ಹಿಟ್ ಆದಂತವುಗಳೇ. ಅಲ್ಲದೇ ಈ ವಯಸ್ಸಲ್ಲೂ ಅತ್ಯಂತ ಫಿಟ್ ಆಗಿರುವ ಬಾಲಿವುಡ್ ನಟ ಇದ್ದರೆ ಅದು ಅಕ್ಷಯ್ ಕುಮಾರ್. ಇತ್ತೀಚಿಗೆ ಒಂದು ಜಾಹಿರಾತಿನಲ್ಲಿ ಕಾಣಿಸಿಕೊಂಡು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಇವರ ಹಿಂದಿನ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೀಗ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ.
ವಿಮಲ್ ಪಾನ್ ಮಸಾಲ ಜಾಹಿರಾತು ನಿಮಗೆಲ್ಲಾ ಗೊತ್ತಿರಬಹುದು. ಬಾಲಿವುಡ್ ನ ಅಜಯ್ ದೇವ್‌ಗನ್ ಹಾಗು ಶಾರುಖ್ ಖಾನ್ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜಾಹಿರಾತು ಮಾಡಲು ಕಂಪೆನಿ ಈ ನಟರಿಗೆ ಎಷ್ಟು ಬೇಕಾದರೂ ಹಣ ನೀಡಲು ತಯಾರಿದೆ ಎಂದು ಸ್ವತಃ ಅಕ್ಷಯ್ ಕುಮಾರ್ ಹೇಳಿದ್ದಾರೆ. ತಾನೂ ಒಪ್ಪಿಕೊಂಡು ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ ಅಕ್ಷಯ್ ಕುಮಾರ್. ನಟರು ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ ಅದರಲ್ಲಿ ವಿವಾದ ಏನಿದೆ ಎಂದು ನೀವು ಪ್ರಶ್ನಿಸಬಹುದು, ಆದರೆ ಇದು ವಿವಾದ ಆಗಿರುವುದು ಹಿಂದೆ ಒಂದು ಸಂದರ್ಶನದಲ್ಲಿ ಅಕ್ಷಯ್ ಕುನಾರ್ ಹೇಳಿದ ಹೇಳಿಕೆಯೆ ಕಾರಣವಾಗಿದೆ.
ಹಿಂದೆ ಒಂದು ಸಂದರ್ಶನದಲ್ಲಿ ಅಕ್ಷಯ್ ಕುಮಾರ್ ನನಗೆ ಈ ಪಾನ್ ಮಸಾಲ ಜಾಹಿರಾತು ಮಾಡುವಂತೆ ಆಪರ್ ಇದೆ. ಇದಕ್ಕೆ ಅವರು ನಾವು ಹಿಂದೆಂದೂ ಕೇಳದೇ ಇರದ ಹಣ ಕೂಡಲು ಕೂಡಾ ತಯಾರಿದ್ದಾರೆ. ಆದರೆ ನಾನು ಇದನ್ನು ಮಾಡಲು ನಿರಾಕರಿಸಿದ್ದೇನೆ. ಆರೋಗ್ಯ ದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ನಾವು ಅದನ್ನು ಬಿಟ್ಟು ಇಂತಹ ಅನಾರೋಗ್ಯಕರ ವಸ್ತುಗಳನ್ನು ನಾವು ಪ್ರಮೋಟ್ ಮಾಡಬಾರದು. ಇದನ್ನು ಪ್ರಮೋಟ್ ಮಾಡುವ ನಾಯಕರ ಬಗ್ಗೆ ನೀವು ಎಚ್ಚರಿಕೆ ಇಂದ ಇರಬೇಕು.
— Akshay Kumar (@akshaykumar) April 20, 2022
ನೀವು ಸರಿಯಾದ ನಟರನ್ನು ನಿಮ್ಮ ಆದರ್ಶವಾಗಿ ಇಟ್ಟು ಕೊಳ್ಳಿ ಎಂದು ಅಕ್ಷಯ್ ಕುಮಾರ್ ಹೇಳಿದ್ದರು. ಅಂದು ಉತ್ತಮ ನಟರನ್ನು ನಿಮ್ಮ ಆದರ್ಶ ವ್ಯಕ್ತಿಯಾಗಿ ಆಯ್ದುಕೊಳ್ಳಿ ಎಂದ ನಟ, ಅಂದು ಆರೋಗ್ಯದ ಬಗ್ಗೆ ಹೇಳಿ ಜಾಹಿರಾತಿನಲ್ಲಿ ಕಾಣಿಸಿಕೊಳ್ಳದ ನಟ ಇಂದು ಹೇಗೆ ಜಾಹಿರಾತು ನಡೆಸಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಕ್ಷಯ್ ಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಕೊನೆಗೆ ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ ಅಲ್ಲದೇ ಈ ಜಾಹಿರಾತಿನಿಂದ ದೊರೆತ ಹಣವನ್ನು ಉತ್ತಮ ಕೆಲಸಕ್ಕಾಗಿ ಮೀಸಲಿಡುತ್ತೇನೆ ಎಂದು ಹೇಳಿದ್ದಾರೆ.