ಟ್ರೈನ್ ಗಳ ಬೋಗಿಗಳು ಬೇರೆ ಬೇರೆ ಬಣ್ಣದ್ದು ಯಾಕಿರುತ್ತೆ? ಎಂದಾದರೂ ತಿಳಿಯುವ ಕುತೂಹಲ ಮೂಡಿದೆಯಾ ನಿಮಗೆ? ಇಲ್ಲಿದೆ ನೋಡಿ ಅದರ ಹಿಂದಿನ ಕಾರಣ.
ಭಾರತದ ಹೆಚ್ಚಿನ ಜನರು ರೈಲು ಮೂಲಕವೇ ಇಂದಿಗೂ ಪ್ರಯಾಣ ಮಾಡುತ್ತಿದ್ದಾರೆ. ಕಡಿಮೆ ಹಣದಲ್ಲಿ ಹೆಚ್ಚು ದೂರ ಪ್ರಯಾಣ ಮಾಡಬಹುದು ಹಾಗೇನೇ ಪ್ರಯಾಣಿಸಲು ಕೂಡ ಆರಾಮವಾಗಿರುತ್ತದೆ. ಅದಲ್ಲದೆ ಈ ವಯಸ್ಸಾದವರಿಗೆ ಹಾಗು ಶುಗರ್ ಇರುವವರಿಗೆ ಈ ರೈಲು ಒಂದು ಉತ್ತಮ ಪ್ರಯಾಣ ಮಾಡುವ ವಿಧಾನವಾಗಿದೆ. ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಒಟ್ಟು ೨೩ ಮಿಲಿಯನ್ಗಳಿಗೂ ಅಧಿಕ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರಂತೆ. ನಿಮಗೂ ಕೂಡ ರೈಲಿನಲ್ಲಿ ಪ್ರಯಾಣಿಸಿರುವ ಅನುಭವ ಇದ್ದೆ ಇರುತ್ತದೆ.
ಈ ರೈಲಿನಲ್ಲಿ ಹಲವಾರು ಬೋಗಿಗಳಿವೆ. ಈ ಪ್ರತಿ ಬೋಗಿಗಳು ಕೂಡ ಹಲವಾರು ವರ್ಗಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ AC ಬೋಗಿಗಳು, ಸ್ಲೀಪರ್ ಕೋಚ್ ಗಳು, ಮತ್ತು ಸಾಮಾನ್ಯ ಕೋಚ್ ಗಳು ಸೇರಿವೆ. ಅದೇ ರೀತಿ ಈ ಬೋಗಿಗಳ ಬಣ್ಣ ಕೂಡ ಕೆಂಪು, ಹಸಿರು ಹಾಗು ನೀಲಿ ಮತ್ತು ಹಳದಿ ಬಣ್ಣಗಳಿಂದ ಇರುತ್ತದೆ. ಬೋಗಿಗಳಿಗೆ ಬೇರೆ ಬೇರೆ ಬಣ್ಣ ಯಾಕೆ ಕೊಟ್ಟಿರುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದನ್ನು ತಿಳಿಯುವ ಕುತೂಹಲ ನಿಮಗೆ ಎಂದಾದರೂ ಆಗಿದೆಯಾ? ಹಾಗಾದರೆ ಇದರ ಕಾರಣ ನಾವು ನಿಮಗೆ ಇಂದು ತಿಳಿಸುತ್ತೇವೆ.
ಕೆಂಪು ಬಣ್ಣದ ಬೋಗಿಯನ್ನು LHB ಅಂದರೆ ಲಿಂಕ್ ಹಾಲ್ಫ್ಮ್ಯಾನ್ ಬುಷ್ ಎಂದು ಕರೆಯುತ್ತಾರೆ. ಈ ಬೋಗಿಗಳನ್ನು ೨೦೦೦ ನೇ ಇಸವಿಯಲ್ಲಿ ಜರ್ಮನಿ ಇಂದ ಭಾರತಕ್ಕೆ ತರಲಾಗಿತ್ತು. ಆದರೆ ಇಂದು ಇದನ್ನು ಪಂಜಾಬ್ ನಲ್ಲಿ ತಯಾರಿಸಲಾಗುತ್ತದೆ. ಈ ಬೋಗಿಗಳಲ್ಲಿ ಡಿಸ್ಕ್ ಬ್ರೇಕ್ ಅಳವಡಿಸಲಾಗಿರುತ್ತದೆ. ಅದೇ ಕಾರಣಕ್ಕೆ ಈ ಬಣ್ಣದ ರೈಲುಗಳು ಗಂಟೆಗೆ ೨೦೦ ಕಿಲೋ ಮೀಟರ್ ವೇಗದಲ್ಲಿ ಪ್ರಯಾಣಿಸುತ್ತದೆ. ರಾಜಧಾನಿ ಎಕ್ಸ್ಪ್ರೆಸ್ ಹಾಗು ಶತಾಬ್ದಿ ಎಕ್ಸ್ಪ್ರೆಸ್ ಗಳಂತಹ ವೇಗಧೂತಗಳಲ್ಲಿ ಈ ಬಣ್ಣದ ಬೋಗಿಗಳು ಇರುತ್ತವೆ. ಆದರೆ ಇಂದು ಸಾಮಾನ್ಯವಾಗಿ ಎಲ್ಲ ಟ್ರೈನ್ ಗಳಲ್ಲಿ ಈ LHB ಬೋಗಿಗಳನ್ನು ಅಳವಡಿಸಲಾಗಿದೆ.
ನೀಲಿ ಬಣ್ಣದ ಬೋಗಿಗಳನ್ನು ಇಂಟೆಗ್ರಾಲ್ ಕೋಚ್ ( Integral coach Factory – ICF ) ಎಂದು ಕರೆಯಲಾಗುತ್ತದೆ. ಈ ಕೋಚ್ ಗಳು ಕಬ್ಬಿಣದಿಂದ ಮಾಡಲ್ಪಟ್ಟಿದೆ. ಹಾಗೇನೇ ಇದರಲ್ಲಿ ಏರ್ ಬ್ರೇಕ್ ಅಳವಡಿಸಲಾಗಿದೆ. ಇದು ಚೆನ್ನೈ ನ ಇಂಟೆಗ್ರಾಲ್ ಕೋಚ್ ಫ್ಯಾಕ್ಟರಿ ಯಲ್ಲಿ ತಯಾರಿಸಲಾಗುತ್ತದೆ. ಆದರೆ ಇಂದು ಕ್ರಮೇಣವಾಗಿ LBH ನ ಬಳಕೆ ಮಾಡಲಾಗುತ್ತಿದೆ. ಇಂದು ಕೂಡ ಇದು ಇಂಟರ್ಸಿಟಿ ನಂತಹ ಟ್ರೈನ್ ಗಳಲ್ಲಿ ಕಾಣಾ ಸಿಗುತ್ತದೆ.
ಇನ್ನು ಹಸಿರು ಬಣ್ಣದ ರೈಲುಗಳು. ಇದನ್ನು ಬಡವರ ರಥ ಅಂತಾನೂ ಕರೆಯುತ್ತಾರೆ. ಮೀಟರ್ ಗೇಜ್ ರೈಲುಗಳಲ್ಲಿ ಕಂದು ಬಣ್ಣದ ಕೋಚ್ ಗಳನ್ನೂ ಕೂಡ ಬಳಸಲಾಗುತ್ತಿದೆ. ಇದು ಹವಾ ನಿಯಂತ್ರಿತ ರೈಲಾಗಿದ್ದು ೨೦೦೫ ರಲ್ಲಿ ಮೊದಲ ಬಾರಿಗೆ ಬಳಸಲು ಪ್ರಾರಂಭ ಮಾಡಲಾಯಿತು. ವಿಮಾನ ಪ್ರಯಾಣ ಸಾಧ್ಯವಾಗದೆ ಇರುವ ಪ್ರಯಾಣಿಕರಿಗೆ ಸಬ್ಸಿಡಿ ದರದಲ್ಲಿ ದೂರದ ಪ್ರಯಾಣ ಒದಗಿಸಲು ಇದನ್ನು ಪ್ರಾರಂಭಿಸಲಾಯಿತು. ಇತರ ರೈಲಿನ ಹವಾ ನಿಯಂತ್ರಿತ ದರಗಳಿಗಿಂತ ಈ ರೈಲಿನ ದರ ಬಹಳ ಕಡಿಮೆಯಾಗಿರುತ್ತದೆ. ಈ ರೈಲಿನಲ್ಲಿ ಹೆಚ್ಚು ಬರ್ತ್ ಗಳು ಹಾಗು ಆಸನಗಳಿವೆ.