ದಕ್ಷಿಣದ ನಟರನ್ನು ಬಾಲಿವುಡ್ ಹೊರಗಿನವರ ಹಾಗೆ ಪರಿಗಣಿಸಿದೆ ಎಂದ ಕ್ವೀನ್ ಕಂಗನಾ ರಣಾವತ್. ಇದಕ್ಕೆ ಹೌದು ಎಂದ ನೆಟ್ಟಿಗರು.

1,150

ಬಾಲಿವುಡ್ ಅನ್ನು ದಕ್ಷಿಣ ಭಾರತದ ಸಿನೆಮಾಗಳು ಮೂಲೆಗುಂಪು ಮಾಡುತ್ತಿದೆಯಾ? ಎನ್ನುವ ಚರ್ಚೆಗೆ ಅನೇಕ ಸಿನಿಮಾ ನಟರು ದುಮುಕಿದ್ದಾರೆ. ಅನೇಕರು ತಮ್ಮ ವಾದಗಳನ್ನು ಮಂಡಿಸುತ್ತಿದ್ದಾರೆ. ಇದರಲ್ಲಿ ಕಂಗನಾ ರಣಾವತ್ ಕೂಡ ಒಬ್ಬರು. ಈ ಚರ್ಚೆಗೆ ಕಾರಣವೇನು? ಇದಕ್ಕೆ ಮುಖ್ಯ ಕಾರಣ ದಕ್ಷಿಣದ ಸಿನಿಮಾಗಳು ಉತ್ತರದಲ್ಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವುದು. ಹಿಂದಿ ಡಬ್ ಆದರೂ ಕೂಡ ಹಿಂದಿ ಪ್ರೇಕ್ಷಕರು ಈ ದಕ್ಷಿಣ ಭಾರತದ ನಟರು ಹಾಗು ಇಲ್ಲಿನ ಸಿನಿಮಾಗಳನ್ನು ಮನಃಪೂರ್ತಿ ಇಷ್ಟ ಪಡುತ್ತಿದ್ದಾರೆ.

ಇದಕ್ಕೆ ಉತ್ತಮ ಉದಾಹರಣೆ ಎಂದರೆ ಎರಡು ವರ್ಷದ ಹಿಂದೆ ಬಿಡುಗಡೆ ಆಗಿ ದೊಡ್ಡ ಸೌಂಡ್ ಮಾಡಿದ ಬಾಹುಬಲಿ ಹಾಗು ಬಾಹುಬಲಿ ೨ ಸಿನಿಮಾಗಳು ಸುಮಾರು ೧೬೦೦ ಕೋಟಿ ಗು ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಬಾಲಿವುಡ್ ಹಾಗು ವಿದೇಶಿಗರನ್ನು ನಿಬ್ಬೆರಗಾಗಿಸುವಂತೆ ಮಾಡಿದೆ. ಇದು ದಕ್ಷಿಣ ದಲ್ಲಿ ಪಾನ್ ಇಂಡಿಯಾ ಸಿನಿಮಾ ಮಾಡಲು ದಾರಿ ಮಾಡಿಕೊಟ್ಟಿತು ಎಂದರು ತಪ್ಪಾಗಲಾರದು. ಅದಾದ ನಂತರ ಅನೇಕ ಪಾನ್ ಇಂಡಿಯಾ ಸಿನಿಮಾಗಳು ಬಂದರು ಕೂಡ ಅಷ್ಟೊಂದು ಕ್ಲಿಕ್ ಆಗಿಲ್ಲ.

ಆದರೆ ಇತ್ತೀಚಿಗೆ ಬಂದ ಪುಷ್ಪ ಆಗಿರಲಿ RRR ಹಾಗು KGF Chapter 2 ಬಾಕ್ಸ್ ಆಫೀಸ್ ಅಲ್ಲಿ ಹವಾ ಎಬ್ಬಿಸಿದೆ. ಇದರಿಂದ ಬಾಲಿವುಡ್ ಕಂಗಾಲಾಗಿದೆ. RRR ಹಾಗು KGF ಚಾಪ್ಟರ್ ೨ ಎರಡು ಕೂಡ ವಿಶ್ವದಲ್ಲಿಯೇ ಒಟ್ಟು ೧೦೦೦ ಕೋಟಿ ಗು ಅಧಿಕ ಹಣ ಸಂಪಾದಿಸಿದೆ. ಇದು ಬಾಲಿವುಡ್ ಅನ್ನು ನಿದ್ದೆಗೆಡುವಂತೆ ಮಾಡಿದೆ. ಇದೆ ವಿಷಯದಲ್ಲಿ ಕಂಗನಾ ರಣಾವತ್ ಅವರು ಕೂಡ ತಮ್ಮ ಅಭಿಪ್ರಾಯ ಮುಂದಿಟ್ಟಿದ್ದಾರೆ. ಹಿಂದಿ ಚಿತ್ರದಲ್ಲಿ ದಕ್ಷಿಣದ ಯಾವುದೇ ನಟರು ಮೇನ್ ರೋಲ್ ಅಲಿ ಕಾಣಿಸಿಲ್ಲ. ಈ ಬಾಲಿವುಡ್ ಎಷ್ಟು ನಿಕಟವಾಗಿ ಹಣೆದಿದೆ ಎನ್ನುವುದು ನಿಮಗೆ ತಿಳಿಯುತ್ತದೆ.

ಈ ಬಾಲಿವುಡ್ ಹೊರಗಿನವರನ್ನು ಹೇಗೆ ನಟಿಸಲು ಬಿಡುವುದಿಲ್ಲ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ. ಅಲ್ಲದೆ ತನ್ನ ಮಾತನ್ನು ಮುಂದುವರೆಸುತ್ತ ದಕ್ಷಿಣದವರು ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. ಅದು ನ್ಯಾಯಯುತವಾಗಿ ಅವರದೇ ಆಗಿದೆ. ನಾವು ಅವರನ್ನು ನಮ್ಮ ಪರದೆಯನ್ನು ಕಿತ್ತುಕೊಳ್ಳುತ್ತಿದರೆ ಎನ್ನುವಂತೆ ಬಿಂಬಿಸುತ್ತಿದ್ದೇವೆ. ಇಡೀ ರಾಷ್ಟ್ರ ಅವರದ್ದು ಕೂಡ ಆಗಿದೆ. ಅವರನ್ನು ಹೊರಗಿನವರಂತೆ ನೋಡುವುದನ್ನು ನಾವು ನಿಲ್ಲಿಸಬೇಕಿದೆ.

ಈ ಸಿನೆಮಾ ಇಂಡಸ್ಟ್ರಿ ಅಲ್ಲಿ ಅವರೇ ಗಾಡ್ ಫಾದರ್ ಎಂದು ಮೆರೆಯುತ್ತಿದ್ದವರಿಗೆ ಇದು ಕಪಾಳಮೋಕ್ಷ ಮಾಡಿದ ಹಾಗೆ ಇದೆ. ದಕ್ಷಿಣದ ಸಿನೆಮಾ ಈ ರೀತಿಯ ಸಾಧನೆ ಮಾಡಲು ಅವರು ಕೂಡ ಅರ್ಹರು. ಇದಕ್ಕೆ ನಾನು ತುಂಬಾ ಸಂತೋಷ ಪಡುತ್ತೇನೆ ಎಂದು ಅವರು ಹೇಳಿದ್ದಾರೆ. ನಮ್ಮ ಪ್ರಕಾರ ಕಂಗನಾ ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಂಗನಾ ಅವರ ಮಾತಿಗೆ ನಿಮ್ಮ ಸಹಮತ ಇದೆಯಾ? ಎನ್ನುವುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.

Leave A Reply

Your email address will not be published.