157 Kmph ವೇಗದಲ್ಲಿ ಬೌಲಿಂಗ್ ಮಾಡುತ್ತಿರುವ ಉಮ್ರಾನ್ ಮಲ್ಲಿಕ್, ಆದರೆ ರನ್ ತಡೆಯಲು ಸಾಧ್ಯವಾಗುತ್ತಿಲ್ಲ ಈ ವೇಗಿಗೆ. ಆಡಿದ ೧೦ ಪಂದ್ಯಗಳಲ್ಲಿ ಕೊಟ್ಟ ರನ್ ಗಳೆಷ್ಟು?
ಐಪಿಎಲ್ ಅಲ್ಲಿ ಎಲ್ಲರ ಗಮನ ಸೆಳೆದಿದ್ದು ಸನ್ ರೈಸರ್ಸ್ ಹೈದೆರಾಬಾದ್ ತಂಡದ ವೇಗದ ಬೌಲರ್ ಉಮ್ರಾನ್ ಮಲ್ಲಿಕ್. ನಿನ್ನೆ ಅಂದರೆ ಗುರುವಾರ ಕೊನೆಯ ೨೦ ನೇ ಓವರ್ ನಲ್ಲಿ ಮಲಿಕ್ ಗಂಟೆಗೆ 157 ಕಿಮಿ ವೇಗದಲ್ಲಿ ಬಾಲ್ ಎಸೆದು ಎಲ್ಲರನ್ನು ತನ್ನತ್ತ ಸೆಳೆದಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿಯೇ ಎರಡನೇ ಅತಿ ವೇಗದ ಬೌಲಿಂಗ್ ಸ್ಪೀಡ್ ಆಗಿದೆ. ಆದರೂ ಕೂಡ ಹೈದೆರಾಬಾದ್ ತಂಡ ಡೆಲ್ಲಿ ವಿರುದ್ಧ ಸರಿಯಾಗಿ ರನ್ ಗಳಿಸಿದೆ.
ಹಾಗೇನೇ ಡೆಲ್ಲಿ ಕ್ಯಾಪಿಟಲ್ ವಿರುದ್ಧ ಪಂದ್ಯ ಗೆಲ್ಲುವಲ್ಲಿ ಕೂಡ ವಿಫಲವಾಯಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ೩ ವಿಕೆಟ್ ಕಳೆದುಕೊಂಡು ೨೦೭ ರನ್ ಗಳ ಬ್ರಹತ್ ಮೊತ್ತ ಹೈದೆರಾಬಾದ್ ಗೆ ನೀಡಿತು. ಡೇವಿಡ್ ವಾರ್ನರ್ ಹಾಗು ರೊವ್ಮಾನ್ ಪೊವೆಲ್ ಅವರ ಅರ್ಧ ಶತಕದಿಂದಾಗಿ ಡೆಲ್ಲಿ ತಂಡ ೨೦೦ ರ ಗಡಿ ದಾಟುವಂತಾಯಿತು. ಇದಕ್ಕೆ ಉತ್ತರವಾಗಿ ರನ್ ಚೇಸ್ ಮಾಡಿದ ಹೈದೆರಾಬಾದ್ ತಂಡ ೮ ವಿಕೆಟ್ ಕಳೆದುಕೊಂಡು ಕೇವಲ ೧೮೬ ರನ್ ಗಳಿಸಲು ಅಷ್ಟೇ ಶಕ್ತವಾಯಿತು.
ಈ ಮೂಲಕ ಡೆಲ್ಲಿ ೨೧ ರನ್ ಗಳಿಂದ ಪಂದ್ಯವನ್ನು ಗೆದ್ದು ಕೊಂಡಿತು. ಇಲ್ಲಿ ಹೆಚ್ಚು ಆಕರ್ಷಣೆ ಆದ ಆಟಗಾರ ಡೇವಿಡ್ ವಾರ್ನರ್ ಹಾಗು ಹೈದೆರಾಬಾದ್ ತಂಡದ ಉಮ್ರಾನ್ ಮಲ್ಲಿಕ್. ಉಮರಾನ್ ಮಲ್ಲಿಕ್ ೨೦ ನೇ ಓವರ್ ನ ನಾಲ್ಕನೇ ಎಸೆತವನ್ನು ೧೫೭ ಕಿಮಿ ವೇಗದಲ್ಲಿ ಎಸೆದರು. ಆದರೆ ಡೆಲ್ಲಿ ತಂಡದ ರಾವ್ಮಾನ್ ಪೊವೆಲ್ ಈ ಚೆಂಡನ್ನು ಬೌಂಡರಿಗೆ ಕಲಿಸುವ ಮೂಲಕ ವೇಗಕ್ಕೆ ಕಿಮ್ಮತ್ತು ಇಲ್ಲದ ಹಾಗೆ ಮಾಡಿದರು. ಈ ಉತ್ತಮ ವೇಗ ಇದ್ದರು ಕೂಡ ಈ ಪಂದ್ಯದಲ್ಲಿ ಅತ್ಯಂತ ದುಬಾರಿ ಬೌಲರ್ ಆಗಿ ಉಮ್ರಾನ್ ಮಲ್ಲಿಕ್ ಅವರೇ ಸ್ಥಾನ ಪಡೆದಿದ್ದಾರೆ. ಅಂದರೆ ಅವರ ಪ್ರತಿ ಓವರ್ ನಿಂದ ಸರಾಸರಿ ೧೩ ರನ್ ಬಂದಿದೆ. ಅವರ ಒಟ್ಟು ಓವರ್ ನಲ್ಲಿ ೬ ಫೋರ್ ಹಾಗು ೨ ಸಿಕ್ಸರ್ ಗಳು ಇದ್ದವು.
ಅಂದರೆ ಕೇವಲ ಫೋರ್ ಹಾಗು ಸಿಕ್ಸ್ ಇಂದ ೩೬ ರನ್ ಗಳು ಬಂದಿವೆ. ಈ ಉಮ್ರಾನ್ ಮಲಿಕ್ ಕಳೆದ ಎರಡು ಪಂದ್ಯದಲ್ಲಿ ೮ ಓವರ್ ಬೌಲ್ ಮಾಡಿ ಬರೋಬ್ಬರಿ ೧೦೦ ರನ್ ನೀಡಿದ್ದಾರೆ ಆದರೆ ಒಂದೇ ಒಂದು ವಿಕೆಟ್ ಕೂಡ ಪಡೆಯಲು ಇವರು ಸಫಲರಾಗಿಲ್ಲ. ಚೆನ್ನೈ ವಿರುದ್ದದ ಪಂದ್ಯದಲ್ಲೂ ಕೂಡ ೪ ಓವರ್ ಅಲ್ಲಿ ೪೮ ರನ್ ನೀಡಿದ್ದಾರೆ. ವೇಗದ ಬೌಲರ್ ಅನಿಸಿಕೊಂಡಿರುವ ಈ ಉಮ್ರಾನ್ ಮಲಿಕ್ ಈ ಐಪಿಎಲ್ ಆವೃತ್ತಿಯಲ್ಲಿ ೯ ರ ಎಕಾನಮಿ ಅಲ್ಲಿ ಬೌಲಿಂಗ್ ಮಾಡಿದ್ದಾರೆ. ಆಡಿದ ೧೦ ಪಂದ್ಯಗಳಿಂದ ೮.೯೨ ರ ಎಕಾನಮಿ ಅಲ್ಲಿ ಬರೋಬ್ಬರಿ ೩೩೯ ರನ್ ಬಿಟ್ಟು ಕೊಟ್ಟಿದ್ದಾರೆ. ಈ ಬೌಲಿಂಗ್ ಬಗ್ಗೆ ರನ್ ನೀಡುವುದಕ್ಕೆ ಕಡಿವಾಣ ಹಾಕಿದರೆ ಈ ವೇಗಿಗೆ ಉತ್ತಮ ಭವಿಷ್ಯವಿದೆ.