IPL 2022 ಇಂದು ಗೆಲ್ಲುವ ತಂಡಕ್ಕೆ ಎಷ್ಟು ಹಣ ಸಿಗಲಿದೆ ಗೊತ್ತೇ? ರಾಜಸ್ತಾನದೆದುರು ಸೋತ RCB ಗೆ ಸಿಕ್ಕಿದ ಹಣವೆಷ್ಟು?

938

ಇಂಡಿಯನ್ ಪ್ರೀಮಿಯರ್ ಲೀಗ್ ೨೦೨೨ ರ ಕೊನೆಯ ಪಂದ್ಯ ಇಂದು ಟ್ರೋಫಿ ಗಾಗಿ ಗುಜರಾತ್ ಹಾಗು ರಾಜಸ್ತಾನ್ ತಂಡಗಳ ನಡುವೆ ನಡೆಯಲಿದೆ. ಲೀಗ್ ಹಂತದ ನಂತರ ಈ ಎರಡು ತಂಡಗಳು ಎರಡನೇ ಬಾರಿ ಮುಖಾಮುಖಿ ಆಗಿದೆ. ಮೊದಲ ಕ್ವಾಲಿಫೈರ್ ನಲ್ಲಿ ಗೆದ್ದು ಸೀದಾ ಫೈನಲ್ ತಲುಪಿದ ಗುಜರಾತ್ ಹಾಗು ಕ್ವಾಲಿಫೈರ್ ೧ ರಲ್ಲಿ ಸೋತು ಕ್ವಾಲಿಫೈರ್ ೨ ರಲ್ಲಿ RCB ವಿರುದ್ಧ ಗೆದ್ದು ಇದೀಗ ಮತ್ತೆ ಗುಜರಾತ್ ಎದುರು ಪಂದ್ಯ ಆಡಲಿದೆ ರಾಜಸ್ತಾನ ತಂಡ. ಈ ಫೈನಲ್ ಅಲ್ಲಿ ಯಾರು ಗೆಲ್ಲಲಿದ್ದಾರೆ ಎನ್ನುವ ಕುತೂಹಲ ಈಗಾಗಲೇ ಕೆರಳಿಸಿದೆ.

ಐಪಿಎಲ್ ಭಾರತದ ಒಂದು ಪ್ರತಿಷ್ಠಿತ ಕ್ರೀಡೆಗಳಲ್ಲಿ ಒಂದಾಗಿದೆ. ವಿಶ್ವದ ಕ್ರಿಕೆಟ್ ಬೋರ್ಡ್ ಅಲ್ಲಿ ಬಿಸಿಸಿಐ ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಆಗಿದೆ. ಇದರ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಐಪಿಎಲ್ ಕೂಡ ಅಷ್ಟೇ ಶ್ರೀಮಂತ ರೀತಿಯಲ್ಲಿ ನಡೆಯುತ್ತದೆ. ಹಾಗೇನೇ ಇದೀಗ ಈ ಟೂರ್ನಿಯಲ್ಲಿ ಫೈನಲ್ ಆಡಲಿರುವ ತಂಡಗಳಿಗೆ ಎಷ್ಟು ಮೊತ್ತ ಸಿಗುತ್ತದೆ ಎನ್ನುವ ಕುತೂಹಲ ಎಲ್ಲರಿಗು ಇದೆ. ಗೆದ್ದವರಿಗೆ, ರನ್ನರ್ ಆಫ್ ಹಾಗು ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿ ಗೆಲ್ಲುವ ತಂಡಗಳಿಗೆ ಭರ್ಜರಿಯಾಗಿ ಮೊತ್ತ ಸಿಗಲಿದೆ.

ಐಪಿಎಲ್ ೨೦೨೨ ರ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡಕ್ಕೆ ಬರೋಬ್ಬರಿ ೨೦ ಕೋಟಿ ನಗದು ಬಹುಮಾನ ಸಿಗಲಿದೆ. ಅದೇ ರೀತಿ ರನ್ನರ್ ಆಫ್ ಆಗುವ ತಂಡಕ್ಕೆ ೧೩ ಕೋಟಿ ಸಿಗಲಿದೆ. ಇನ್ನು ಮೂರನೇ ಸ್ಥಾನ ಪಡೆಯುವ ತಂಡ ಅಂದರೆ ಮೊನ್ನೆಯ ಪಂದ್ಯದಲ್ಲಿ ಸೋತ ಬೆಂಗಳೂರು ತಂಡಕ್ಕೆ ೭ ಕೋಟಿ ಸಿಗಲಿದೆ. ಹಾಗೇನೇ ನಾಲ್ಕನೇ ಸ್ಥಾನ ಪಡೆದ ಲೂಕ್ನೋ ತಂಡಕ್ಕೆ ಸಿಗಲಿದೆ ೬.೫ ಕೋಟಿ ನಗದು ಬಹುಮಾನಗಳು. ಈ ಕೊನೆ ಪಂದ್ಯಕ್ಕೆ ಬಾಲಿವುಡ್ ತಾರೇ ರಣವೀರ್ ಸಿಂಗ್ ಬರಲಿದ್ದಾರೆ ಹಾಗೇನೇ ಸಂಗೀತ ನಿರ್ದೇಶಕ ಏ.ಆರ್. ರೆಹಮಾನ್ ಕೂಡ ಬರಲಿದ್ದಾರೆ.

Leave A Reply

Your email address will not be published.