ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಟಿ 20 ಕ್ರಿಕೆಟ್ ನಲ್ಲಿ ಪಂತ್ ಪಾಲಿಗೆ ವಿಲ್ಲನ್ ಆಗಿರುವ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರಸ್ತುತ ಭಾರತ ಕ್ರಿಕೆಟ್ ತಂಡದಲ್ಲಿ ಕಾಂಪಿಟೇಶನ್ ಹೆಚ್ಚಾಗುತ್ತಿದೆ. ಪ್ರತಿಯೊಂದು ಸ್ಥಾನಕ್ಕೂ ಎರಡರಿಂದ ಮೂರು ಜನ ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ. ಇದೇ ವೇಳೆ ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ ಗೆ ಭಾರತ ತಂಡಕ್ಕೆ ಯಾವ ಆಟಗಾರರನ್ನು ಆಯ್ಕೆ ಮಾಡಬೇಕು ಎಂಬುದು ಸದ್ಯ ಆಯ್ಕೆದಾರರಿಗೆ ಇರುವ ತೀವ್ರ ತಲೆನೋವಾಗಿದೆ.
ಈ ನಡುವೆ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸಮನ್ ರಿಷಭ್ ಪಂತ್, ಇತ್ತಿಚೆಗೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಯಲ್ಲಿ ದಯನೀಯ ವೈಫಲ್ಯ ಅನುಭವಿಸಿದರು. ಆಡಿದ ಐದು ಪಂದ್ಯಗಳಲ್ಲಿ ಕೇವಲ 57 ರನ್ ಗಳಿಸಿದ್ದಾರೆ.ಇದು ರಿಷಭ್ ಪಂತ್ ಪಾಲಿಗೆ ಎಚ್ಚರಿಕೆಯ ಕರೆಘಂಟೆಯಾಗಿದೆ. ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕೂಡ ಟಿ 20 ಸರಣಿಗೆ ಪ್ರಯೋಜನವಿಲ್ಲ. ಆದರೆ ಈತನ್ಮದ್ಯೆ ರಿಷಭ್ ಪಂತ್ ಟೀಂ ಇಂಡಿಯಾದಲ್ಲಿ ಇಬ್ಬರು ವಿಲನ್ ಗಳು ಇದ್ದಾರೆ ಎಂದು ಹೇಳಲಾಗುತ್ತಿದೆ. ಬನ್ನಿ ಪಂತ್ ಪಾಲಿನ ಆ ಇಬ್ಬರು ವಿಲನ್ ಗಳು ಯಾರು ಎಂಬುದನ್ನು ತಿಳಿಯೋಣ.

1.ಇಶಾನ್ ಕಿಶನ್ – ಸ್ವತಃ ವಿಕೆಟ್ ಕೀಪರ್ ಬ್ಯಾಟ್ಸಮನ್ ಆಗಿರುವ ಇಶಾನ್ ಕಿಶನ್ ಉತ್ತಮ ಲಯದಲ್ಲಿದ್ದಾರೆ. ಆರಂಭಿಕ ಬ್ಯಾಟ್ಸ್ಮನ್ ಆಗಿ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಮಿಂಚಿದ್ದಾರೆ. ಐಪಿಎಲ್ ನಲ್ಲಿಯೂ ಇಶಾನ್ ಕಿಶನ್ ಬ್ಯಾಟ್ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. ಹೀಗಾಗಿ ರಿಷಭ್ ಪಂತ್ ಜಾಗದಲ್ಲಿ ಇಶಾನ್ ಕಿಶನ್ ಆಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
2.ದಿನೇಶ್ ಕಾರ್ತಿಕ್ – ಬಹಳಷ್ಟು ವರ್ಷಗಳ ತನ್ನ ಬ್ಯಾಟ್ ಮೂಲಕವೇ ಉತ್ತರ ನೀಡಿ ಸದ್ಯ ಅಂತಾರಾಷ್ಟ್ರೀಯ ತಂಡಕ್ಕೆ ಕಮ್ ಬ್ಯಾಕ್ ಮಾಡಿರುವ ಡಿಕೆ, ತಮ್ಮ ಐಪಿಎಲ್ ಫಾರ್ಮ್ ನ್ನು ಭಾರತ ಕ್ರಿಕೆಟ್ ತಂಡದಲ್ಲಿಯೂ ಸಹ ಮುಂದುವರೆಸಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಭಾರತದ ಆಪತ್ಭಾಂದವರಾದ ಡಿಕೆ, ತಾವೊಬ್ಬ ಅತ್ಯುತ್ತಮ ಫೀನಿಶರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇನ್ನು ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ , ಡಿಕೆ ಐಸಿಸಿ ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡದ ಸದಸ್ಯರಾಗಿರುತ್ತಾರೆ ಎಂಬುದನ್ನು ಹೇಳಿದ್ದಾರೆ. ಹಾಗಾಗಿ ವಿಕೆಟ್ ಕೀಪರ್ ಬ್ಯಾಟ್ಸಮನ್ ಆಗಿರುವ ಡಿಕೆ ತಂಡದೊಳಗೆ ಬಂದರೇ, ರಿಷಭ್ ಪಂತ್ ತಂಡದ ಹೊರಗೆ ಹೋಗುವ ಸಾಧ್ಯತೆಯಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.