ತನ್ನ ಕ್ರಿಕೆಟ್ ಜೀವನದಲ್ಲಿ ಪೈಪೋಟಿ ನೀಡಿದ ಆಟಗಾರನನ್ನು ಹೆಸರಿಸಿದ ಕೊಹ್ಲಿ; ಷಾಕಿಂಗ್ ಆಗಿ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕೆಲವೊಬ್ಬರು ಇರುತ್ತಾರೆ. ಅವರು ಯಶಸ್ಸು ಗಳಿಸಿದಾಗ ರೂಂ ಸುದ್ದಿಯಲ್ಲಿರುತ್ತಾರೆ, ವೈಫಲ್ಯ ಅನುಭವಿಸಿದಾಗ ಸಹ ಸುದ್ದಿಯಲ್ಲಿರುತ್ತಾರೆ. ಅಂತಹವರಲ್ಲಿ ಈಗ ಪ್ರಮುಖರೆಂದರೇ ವಿರಾಟ್ ಕೊಹ್ಲಿ. ರನ್ ಮಶೀನ್, ಕಿಂಗ್ ಕೊಹ್ಲಿ ಎಂದು ಹೆಸರುವಾಸಿಯಾಗಿದ್ದ ಕೊಹ್ಲಿ ಯ ಬ್ಯಾಟ್ ನಿಂದ ಈಗ ರನ್ನುಗಳೇ ಬರುತ್ತಿಲ್ಲ. ಕೊಹ್ಲಿ ಶತಕ ಸಿಡಿಸಿ ಬರೋಬ್ಬರಿ ಮೂರು ವರ್ಷಗಳಾಗುತ್ತಾ ಬಂದಿದೆ.
ಬಿಸಿಸಿಐ ಸಹ ವಿರಾಟ್ ಕೊಹ್ಲಿಗೆ ಲಾಸ್ಟ್ ವಾರ್ನಿಂಗ್ ನೀಡಿದ್ದು, ಮುಂಬರುವ ಜಿಂಬಾಬ್ವೆ ಪ್ರವಾಸದಲ್ಲಿ ಆ ತಂಡದ ವಿರುದ್ಧ ಆಡಿ, ಫಾರ್ಮ್ ಖಚಿತಪಡಿಸಿದರೇ ಮಾತ್ರ ತಂಡದಲ್ಲಿ ಸ್ಥಾನ ಮುಂದುವರೆಯಲಿದೆ.ಕಳಪೆ ಫಾರ್ಮ್ ನ್ನು ಮುಂದುವರೆಸಿದರೇ, ಮಾತ್ರ ತಂಡದಲ್ಲಿ ಸ್ಥಾನ, ಇಲ್ಲವಾದಲ್ಲಿ ತಂಡದಿಂದ ಗೇಟ್ ಪಾಸ್ ಎಂಬ ಎಚ್ಚರಿಕೆಯ ಸಂದೇಶ ನೀಡಿದೆ. ಈ ನಡುನೆ ಸದ್ಯ ಲಂಡನ್ ನಲ್ಲಿ ಕುಟುಂಬದ ಜೊತೆ ಸಮಯ ಕಳೆಯುತ್ತಿರುವ ವಿರಾಟ್ ಕೊಹ್ಲಿ, ತನ್ನ ವೃತ್ತಿ ಜೀವನದಲ್ಲಿ ಎದುರಿಸಿದ ಅತ್ಯಂತ ಕಠಿಣ ಪ್ರತಿಸ್ಪರ್ಧಿ ಆಟಗಾರ ಯಾರು ಎಂಬುದನ್ನು ಹೆಸರಿಸಿದ್ದಾರೆ.

ಅಷ್ಟಕ್ಕೂ ಆ ಆಟಗಾರ ಬೇರೆ ಯಾರು ಅಲ್ಲ, ಆತ ಇಂಗ್ಲೆಂಡ್ ತಂಡಕ್ಕೆ ಏಕದಿನ ವಿಶ್ವಕಪ್ ಗೆಲ್ಲಿಸುವಲ್ಲಿ ಹರಸಾಹಸ ಪಟ್ಟ ಬೆನ್ ಸ್ಟೋಕ್ಸ್. ಹೌದು ವಿಶ್ವಕಪ್ ಫೈನಲ್ ಪಂದ್ಯದ ಹೀರೋ ಆಗಿದ್ದ ಬೆನ್ ಸ್ಟೋಕ್ಸ್ ಕಳೆದ ವಾರ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಗೆ ವಿದಾಯ ಘೋಷಿಸಿದ್ದರು. ಟೆಸ್ಟ್ ಹಾಗೂ ಟಿ 20 ಕ್ರಿಕೆಟ್ ನಲ್ಲಿ ಹೆಚ್ಚು ಏಕಾಗ್ರತೆ ಹರಿಸಲು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಸ್ಟೋಕ್ಸ್ ಹಾಕಿದ್ದ ಪೋಸ್ಟ್ ಗೆ , ಕಾಮೆಂಟ್ ಮಾಡಿರುವ ವಿರಾಟ್ ಕೊಹ್ಲಿ, ನಾನು ವೃತ್ತಿ ಜೀವನದಲ್ಲಿ ಎದುರಿಸಿದ ಅತ್ಯಂತ ಕಠಿಣ ಪ್ರತಿಸ್ಪರ್ಧಿ ನೀವು, ನಿಮಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ಯಾವ ಅರ್ಥದಲ್ಲಿ ಕೊಹ್ಲಿ ಈ ರೀತಿ ಹೇಳಿದ್ದಾರೆಂಬುದರ ಬಗ್ಗೆ ಈಗ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.