ಫಾರ್ಮ್ ಕಳೆದುಕೊಂಡು ಟೀಕೆಗಳನ್ನು ಎದುರಿಸುತ್ತಿರುವ ರಾಹುಲ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಗವಾಸ್ಕರ್: ಹೇಳಿದ್ದೇನು ಗೊತ್ತೇ??
ನಮ್ಮ ಕನ್ನಡ ಹೆಮ್ಮೆಯ ಹುಡುಗ ಕೆ.ಎಲ್.ರಾಹುಲ್ ಗಾಯಗಳ ಕಾರಣದಿಂದ ಕೆಲ ಸಮಯ ಟೀಮ್ ಇಂಡಿಯಾ ಇಂದ ದೂರ ಉಳಿದಿದ್ದರು, ಇದೀಗ ಟೀಮ್ ಇಂಡಿಯಾದ ಉಪನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದರೆ, ಆದರೆ ರಾಹುಲ್ ಈಗ ಕಳಪೆ ಫಾರ್ಮ್ ನಲ್ಲಿದ್ದಾರೆ, ರಾಹುಲ್ ಅವರ ಬ್ಯಾಟ್ ಇಂದ ಬಹಳ ನಿಧಾನವಾಗಿ ರನ್ ಗಳು ಬರುತ್ತಿದೆ. ಏಷ್ಯಾಕಪ್ ನ ಎರಡು ಪಂದ್ಯಗಳಲ್ಲೂ ನೀರಸ ಪ್ರದರ್ಶನ ನೀಡಿದ್ದಾರೆ, ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಜೀರೋಗೆ ಡಗೌಟ್ ಆದ ರಾಹುಲ್, ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಬಹಳ ನಿಧಾನವಾಗಿ 36 ರನ್ ಗಳಿಸಿ, ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಕನ್ನಡಿಗನ ಬೆಂಬಲಕ್ಕೆ ನಿಂತಿದ್ದಾರೆ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್.
ಕೆ.ಎಲ್.ರಾಹುಲ್ ಅವರ ಬಗ್ಗೆ ಮಾತನಾಡಿ, “ನನ್ನ ಪ್ರಕಾರ ಕೆ.ಎಲ್.ರಾಹುಲ್ ಕ್ಲಾಸ್ ಆಟಗಾರ, ಭಾರತ ತಂಡಕ್ಕೆ ಅದ್ಭುತವಾದ ಕೊಡುಗೆಯನ್ನು ಕಳೆದ ಕೆಲವು ವರ್ಷಗಳಿಂದ ಕೊಡುತ್ತಲೇ ಬಂದಿದ್ದಾರೆ. ತಂಡದಲ್ಲಿ ಬೇರೆ ಆಟಗಾರರು ಫಾರ್ಮ್ ಕಳೆದುಕೊಂಡಾಗ, ಅವರಿಗೆ ಮರಳಿ ಬರಲು ಸಮಯ ಮತ್ತು ಬೆಂಬಲ ಎರಡನ್ನು ಕೊಡುತ್ತಾರೆ. ಆದರೆ ಕೆ.ಎಲ್.ರಾಹುಲ್ ಅವರಿಗೆ ಯಾಕೆ ಕೊಡುತ್ತಿಲ್ಲ? ರಾಹುಲ್ ತಂಡದ ಉಪನಾಯಕ ಕೂಡ ಹೌದು, ಈ ಹಿಂದೆ ಟಿ20 ಪಂದ್ಯಗಳಲ್ಲಿ ಅವರು ನೀಡಿರುವ ಪ್ರದರ್ಶನ ನೋಡಿ, ಅವರಿಗೆ ಇನ್ನು ಹೆಚ್ಚು ಸಮಯಾವಕಾಶ ಕೊಡಬಹುದು..” ಎಂದು ಟೀಕೆ ಮಾಡುವವರಿಗೆ ತಕ್ಕ ಉತ್ತರ ನೀಡಿದ್ದಾರೆ ಸುನೀಲ್ ಗವಾಸ್ಕರ್.

ಕೆ.ಎಲ್.ರಾಹುಲ್ ಅವರ ಬಗ್ಗೆ ಇನ್ನೂ ಮಾತನಾಡಿದ ಸುನೀಲ್ ಗವಾಸ್ಕರ್ ಅವರು, “ಕೆ.ಎಲ್. ರಾಹುಲ್ ಅವರು ಈಗ ಗಾಯದಿಂದ ಚೇತರಿಸಿಕೊಂಡು ಕಂಬ್ಯಾಕ್ ಮಾಡಿದ್ದಾರೆ. ಪ್ರಸ್ತುತ ಅವರು ಲಯ ಕಂಡುಕೊಳ್ಳುವಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಅವರು ಲಯವನ್ನು ಕಂಡುಕೊಳ್ಳುತ್ತಾರೆ, ಮರಳಿ ಬರುತ್ತಾರೆ. ಬಂದು ಎದುರಾಳಿಗೆ ಭಯ ಹುಟ್ಟಿಸುತ್ತಾರೆ…” ಎಂದು ಹೇಳಿದ್ದಾರೆ ಸುನೀಲ್ ಗವಾಸ್ಕರ್. ಕೆ.ಎಲ್.ರಾಹುಲ್ ಅವರು ಹಾಂಗ್ ಕಾಂಗ್ ಪಂದ್ಯದಲ್ಲಿ 39 ಬಾಲ್ ಗಳಲ್ಲಿ 36 ರನ್ ಗಳನ್ನು ನಿಧಾನವಾಗಿ ಕಲೆಹಾಕಿ ಬಹಳ ಟೀಕೆಗೆ ಗುರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ರಾಹುಲ್ ಅವರು ಲಯ ಕಂಡುಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.