ಕನ್ನಡದಲ್ಲಿ ಚೆಕ್ ಬರೆದಿದ್ದಾರೆ ಎಂದು ಚೆಕ್ ತಿರಸ್ಕಾರ ಮಾಡಿದ ಬ್ಯಾಂಕ್ ಗೆ ಬಿಗ್ ಶಾಕ್: ಕೊಟ್ಟ ಆದೇಶ ಏನು ಗೊತ್ತೇ??
ಕರ್ನಾಟಕ ಕನ್ನಡಿಗರ ರಾಜ್ಯ, ಇಲ್ಲಿನ ಆಡಳಿತ ಭಾಷೆ ಕನ್ನಡ. ಕರ್ನಾಟಕದ ಎಲ್ಲಾ ಕಚೇರಿಗಳಲ್ಲಿ ಕನ್ನಡ ಭಾಷೆಯನ್ನೇ ಬಳಸಬೇಕು ಎಂದು ಸರ್ಕಾರ ಕೂಡ ಆದೇಶ ನೀಡಿದೆ. ಆದರೆ ಈಗಲೂ ಕೆಲವು ಕಡೆಗಳಲ್ಲಿ ಕನ್ನಡ ಭಾಷೆ ಎಂದರೆ ಧೋರಣೆ ಇದೆ. ಇಂಥದ್ದೇ ಒಂದು ಘಟನೆ ಧಾರವಾಡದಲ್ಲಿ ನಡೆದಿದೆ. ಎಸ್.ಬಿ.ಐ ಬ್ಯಾಂಕ್ ನಲ್ಲಿ ಕನ್ನಡದಲ್ಲಿ ಬರೆದಿದ್ದ ಚೆಕ್ ಅನ್ನು ತಿರಸ್ಕರಿಸಿದ ಕಾರಣ, ಆ ಬ್ಯಾಂಕ್ ಗೆ ಏನಾಗಿದೆ ಗೊತ್ತಾ?
ಧಾರವಾಡದ ಹಳಿಯಾಳದ ಎಸ್.ಬಿ.ಐ ಬ್ಯಾಂಕ್ ನಲ್ಲಿ ವಾದಿರಾಜಾಚಾರ್ಯ ಇನಾಮದಾರರು ತಮ್ಮ ಚೆಕ್ ಅನ್ನು ಕನ್ನಡದಲ್ಲಿ ಭರ್ತಿ ಮಾಡಿ ಕೊಟ್ಟಿದ್ದರು, ತಮ್ಮ ಉಳಿತಾಯ ಖಾತೆಯಿಂದ ಹಣ ಹಿಂಪಡೆಯಲು ಬಯಸಿದ್ದರು. ಆದರೆ ಕನ್ನಡದಲ್ಲಿ ಬರೆದ ಕಾರಣದಿಂದ, ಎಸ್.ಬಿ.ಐ ಶಾಖೆ ಆ ಚೆಕ್ ಅನ್ನು ಅಮಾನ್ಯ ಮಾಡಿ, ತಿರಸ್ಕರಿಸಿದೆ. ವಾದಿರಾಜಾಚಾರ್ಯ ಅವರು ನ್ಯಾಯಕ್ಕಾಗಿ ಬ್ಯಾಂಕ್ ವಿರುದ್ಧ ನಿಂತರು.

ಧಾರವಾಡ ಜಿಲ್ಲೆಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಹಳಿಯಾಳ ಬ್ಯಾಂಕ್ ಎಸ್.ಬಿ.ಐ ಶಾಖೆಯ ವಿರುದ್ಧ ದೂರು ನೀಡಿದರು. ಕನ್ನಡದಲ್ಲಿ ಬರೆದಿರುವ ಚೆಕ್ ಅನ್ನು ಅಮಾನ್ಯ ಮಾಡಿರುವುದಕ್ಕಾಗಿ, ಇದನ್ನು ಸೇವೆಯ ನೂನ್ಯತೆ ಎಂದು ಪರಿಗಣಿಸಿ, ಎಸ್.ಬಿ.ಐ ಶಾಖೆಯ ವಿರುದ್ಧ ದೂರು ನೀಡಿರುವವರಿಗೆ ಪರಿಹಾರ ಹಾಗೂ ದಂಡವಾಗಿ ₹85,177 ರೂಪಾಯಿಗಳನ್ನು ಬ್ಯಾಂಕ್ ಪಾವತಿ ಮಾಡಬೇಕು ಎಂದು ಆಯೋಗವು ಆದೇಶ ನೀಡಿದೆ. ಈ ಆಯೋಗದ ಅಧ್ಯಕ್ಷರು ಈಶಪ್ಪ ಭೂತೇ, ಸದಸ್ಯರು ವಿ.ಅ.ಬೋಳ ಶೆಟ್ಟಿ, ಹಾಗೂ ಪಿ.ಸಿ.ಹಿರೇಮಠ್ ಅವರು ಈ ತೀರ್ಪು ನೀಡಿದ್ದಾರೆ.