ಇದ್ದಕ್ಕಿದ್ದ ಹಾಗೆ ಕೊಹ್ಲಿ ಹಾಗೂ ಅನುಷ್ಕಾ ರವರಿಗೆ ಶಾಕ್ ಕೊಟ್ಟ ಎಬಿಡಿ: ವಿಶೇಷ ಫೋಟೋ ಶೇರ್ ಮಾಡಿ ಹೇಳಿದ್ದೇನು ಗೊತ್ತೇ?
ಬರೋಬ್ಬರಿ 1021 ದಿನಗಳ ಬಳಿಕ ಕಿಂಗ್ ಕೋಹ್ಲಿ ಕಂಬ್ಯಾಕ್ ಮಾಡಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು 71ನೇ ಸೆಂಚುರಿ ಭಾರಿಸಿದ್ದಾರೆ. 61 ಬಾಲ್ ಗಳಲ್ಲಿ, 6 ಸಿಕ್ಸರ್ ಹಾಗೂ 12 ಬೌಂಡರಿಗಳ ಮೂಲಕ ಅಮೋಘ 122 ರನ್ ಚಚ್ಚಿದ್ದಾರೆ ಕಿಂಗ್ ಕೋಹ್ಲಿ. ಕೋಹ್ಲಿ ಅವರ ನಿನ್ನೆಯ ಇನ್ನಿಂಗ್ಸ್ ನೋಡಿ ಅವರ ಅಭಿಮಾನಿಗಳು ಬಹಳ ಸಂತೋಷ ಪಟ್ಟಿದ್ದಾರೆ. ಕೊನೆಗೂ ಕೋಹ್ಲಿ ಅವರು ಫಾರ್ಮ್ ಗೆ ಬಂದಿರುವುದು ಎಲ್ಲರಿಗೂ ಬಹಳ ಸಂತೋಷ ತಂದಿರುವ ವಿಷಯ.
ಇದೇ ಫಾರ್ಮ್ ವಿಶ್ವಕಪ್ ಪಂದ್ಯಗಳಲ್ಲೂ ಮುಂದುವರೆದರೆ, ಬಹಳ ಸಹಾಯ ಆಗುತ್ತದೆ ಎನ್ನುವುದು ಎಲ್ಲರ ಅಭಿಪ್ರಾಯ ಆಗಿದೆ. ಕೋಹ್ಲಿ ಅವರು ತಂಡಕ್ಕೆ ಬಹಳ ಅಗತ್ಯವಾದ ಸಮಯದಲ್ಲೇ ಫಾರ್ಮ್ ಗೆ ಮರಳಿದ್ದಾರೆ. ಒಂದು ತಿಂಗಳ ಕಾಲ ಕೋಹ್ಲಿ ಅವರು ವಿಶ್ರಾಂತಿ ಪಡೆದು, ಏಷ್ಯಾಕಪ್ ಪಂದ್ಯಗಳಿಗೆ ಮರಳಿ ಬಂದರು, ಶುರುವಿನ ಮೊದಲ ಪಂದ್ಯದಿಂದಲೂ ಕೋಹ್ಲಿ ಅವರು ಉತ್ತಮವಾದ ಪ್ರದರ್ಶನವನ್ನೇ ನೀಡುತ್ತಾ ಬಂದರು, ಕೋಹ್ಲಿ ಅಬರ ಕಠಿಣ ಪರಿಶ್ರಮ ಫಲಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ, ಆ ಎಲ್ಲಾ ಶ್ರಮವು ನಿನ್ನೆಯ ಸೆಂಚುರಿ ಇಂದ ಸಂತೋಷದಲ್ಲಿ ಬಂದು ನಿಂತಿದೆ.

ಕೋಹ್ಲಿ ಅವರು ಸೆಂಚುರಿ ಗಳಿಸಿದ ಸಂತೋಷ ಎಲ್ಲರಲ್ಲೂ ಇದ್ದು, ಸೋಷಿಯಲ್ ಮೀಡಿಯಾದಲ್ಲಿ ಹಾಗೂ ನಿನ್ನೆ ಮೈದಾನದಲ್ಲಿ ಸಾಕಷ್ಟು ಜನರು ಕೋಹ್ಲಿ ಅವರಿಗೆ ವಿಶ್ ಮಾಡಿದರು, ಕೋಹ್ಲಿ ಅವರ ಆಪ್ತಗೆಳೆಯ ಎಬಿಡಿ ಅವರು ಸಹ ವಿಶೇಷವಾಗಿ ವಿಶ್ ಮಾಡಿದ್ದಾರೆ, ನಿನ್ನೆ ಕೋಹ್ಲಿ ಅವರು ಶತಕ ಸಿಡಿಸಿದ್ದಕ್ಕೆ, ಎಬಿಡಿ ಅವರು ಒಂದು throwback ಫೋಟೋ ಶೇರ್ ಮಾಡಿದ್ದಾರೆ, ಅದರಲ್ಲಿ ಕೋಹ್ಲಿ ಹಾಗೂ ಎಬಿಡಿ ಇಬ್ಬರು ಸಹ ಸ್ಕೂಟರ್ ಮೇಲೆ ಕುಳಿತಿದ್ದಾರೆ, “ವಿರಾಟ್ ಕೋಹ್ಲಿ ಶತಕ ಗಳಿಸಿರುವ ಸಂತೋಷದ ಸಂದರ್ಭದಲ್ಲಿ ಈ ಫೋಟೋ ಶೇರ್ ಮಾಡುತ್ತಿದ್ದೇನೆ..” ಎಂದು ಬರೆದು ಎಬಿಡಿ ಅವರು ಫೋಟೋ ಶೇರ್ ಮಾಡಿದ್ದು, ವಿರಾಟ್ ಅವರು, “ಹಹಹ..ಥ್ಯಾಂಕ್ ಯೂ ಬಿಸ್ಕೆಟ್.. ಲವ್ ಯೂ..” ಎಂದು ಕಮೆಂಟ್ ಬರೆದಿದ್ದಾರೆ, ಅನುಷ್ಕಾ ಅವರು, “ಓ ಮೈ ಗಾಡ್..” ಎಂದು ಆಶ್ಚರ್ಯವಾಗಿ ಕಮೆಂಟ್ ಮಾಡಿದ್ದಾರೆ. ಇನ್ನು ಅಭಿಮಾನಿಗಳು ಈ ಫೋಟೋ ಸಂತೋಷದಿಂದ ಕಮೆಂಟ್ಸ್ ಮಾಡಿದ್ದಾರೆ.