ವಿಶೇಷ ಹಾರುವ ಬೈಕ್ ಅನ್ನು ಅನಾವರಣ ಗೊಳಿಸಿದ ಜಪಾನ್: ಹಾರೋದೇನೋ ಚೆನ್ನಾಗಿಯೇ ಇರುತ್ತೆ, ಆದರೆ ಬೆಲೆ ಕೇಳಿದರೆ ಮೈಂಡ್ ಬ್ಲಾಕ್ ಆಗುತ್ತೆ. ಎಷ್ಟು ಗೊತ್ತೇ??

203

ಹಾರುವ ಬೈಕ್ ಬಗ್ಗೆ ಎಂದಾದರೂ ಕೇಳಿದ್ದೀರಾ? ಈ ಕಲ್ಪನೆ ಹಲವು ಜನರ ಕನಸಾಗಿತ್ತು, ಇದೀಗ ಆ ಕನಸು ನಿಜವಾಗಿದೆ. ನೀವೀಗ ಬಾರಬಹುದು, ಅದು ಬೈಕ್ ನಲ್ಲಿ.. ಇದೀಗ ವಿಶ್ವದ ಮೊದಲ ಹಾರುವ ಬೈಕ್ ಜಪಾನ್ ನಲ್ಲಿ ಲಾಂಚ್ ಆಗಿದೆ. ಈ ಬೈಕ್ ನಲ್ಲಿ ನೀವು ಯಾವುದೇ ಟ್ರಾಫಿಕ್ ಜಾಮ್ ಅಡೆತಡೆ ಇಲ್ಲದೆ, ಒಂದು ನಗರದಿಂದ ಇನ್ನೊಂದು ನಗರಕ್ಕೆ ಬೈಲ್ ನಲ್ಲಿ ಹಾರಿಕೊಂಡು ಹೋಗಬಹುದು. ಜಪಾನ್ ನ AERWINS Technologies ಎನ್ನುವ ಸ್ಟಾರ್ಟಪ್ ಈ ಬೈಕ್ ನಿರ್ಮಣ ಮಾಡಿದೆ.

ಸೆಪ್ಟೆಂಬರ್ 15ರಂದು, ಡೆಟ್ರಾಯಿಟ್ ಆಟೋ ಶೋನಲ್ಲಿ ಇದನ್ನು ಶುರು ಮಾಡಲಾಗಿದೆ. ಪ್ರದರ್ಶನದ ಸಮಯದಲ್ಲಿ ಬೈಕ್ ಬಗ್ಗೆ ಒಳ್ಳೆಯ ಪ್ರಶಂಸೆ ಸಿಕ್ಕಿದೆ. ಈ ಹಾರುವ ಬೈಕ್ ನ ಹೆಸರು Xtursimo, ಡೆಟ್ರಾಯಿಟ್ ಆಟೋ ಶೋನ ಸಹ ಅಧ್ಯಕ್ಷರಾದ ಥಾಡ್ ಸ್ಜೋಟ್ ಅವರು ಬೈಕ್ ಓಡಿಸಿದ ಅನುಭವ ಹಂಚಿಕೊಂಡು ಅದು ರೋಮಾಂಚನಕಾರಿಯಾಗಿತ್ತು ಮತ್ತು ಅದ್ಭುತವಾಗಿತ್ತು ಎಂದಿದ್ದಾರೆ. ಹಲವರ ಕನಸನ್ನು ಈ ಬೈಕ್ ನನಸು ಮಾಡಲಿದೆ, ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಈ ಬೈಕ್ ನ ಬೆಲೆ 7 ಲಕ್ಷದ 77 ಸಾವಿರ ರೂಪಾಯಿ, ಭಾರತದ ರೂಪಾಯಿಯಲ್ಲಿ 6 ಕೋಟಿ 18 ಲಕ್ಷ ರೂಪಾಯಿ ಆಗುತ್ತದೆ.

ಬೈಕ್ ನ ತೂಕ 300 ಕೆಜಿ ಆಗಿದ್ದು, ಗಂಟೆಗೆ 100ಕಿಮೀ ವೇಗದಲ್ಲಿ ಈ ಬೈಕ್ ಹಾರುತ್ತದೆ. ಇದು ಬ್ಯಾಟರಿಯಿಂದ ಚಲಿಸುವ ಬೈಕ್ ಆಗಿದ್ದು, ಕಂಪನಿ ಹೇಳುವ ಪ್ರಕಾರ, ಈ ಬೈಕ್ ಬೆಲೆ, ₹39,82,525 ರೂಪಾಯಿ ಆಗಿದೆ. ಜಪಾನ್ ನಲ್ಲಿ ಈ ಬೈಕ್ ಲಭ್ಯವಿದ್ದು, ಕಪ್ಪು, ಬಿಳಿ ಹಾಗೂ ಕೆಂಪು ಬಣ್ಣದಲ್ಲಿ ತಯಾರಿಸಲಾಗಿದೆ. 2023ರಿಂದ ಯುಎಸ್ ನಲ್ಲಿ ಮಾರಾಟ ಪ್ರಾರಂಭಿಸಲು ಪ್ಲಾನ್ ಮಾಡಿದ್ದಾರೆ. ಈ ಬೈಕ್ ಸುರಕ್ಷತೆ ಹಾಗೂ ಭದ್ರತೆಯ ಜೊತೆಗೆ ಹಾರುವ ಥ್ರಿಲ್ ನೀಡುತ್ತದೆ ಎಂದು AERWINS ಸಂಸ್ಥೆ ವೆಬ್ಸೈಟ್ ನಲ್ಲಿ ತಿಳಿಸಿದೆ. ಈ ಬೈಕ್ ಖರೀದಿ ಮಾಡಬೇಕಾದರೆ, ಜಪಾನ್ ಗೆ ಹೋಗಬೇಕಾಗಿದೆ.

Leave A Reply

Your email address will not be published.