ಆಸ್ಟ್ರೇಲಿಯಾ ತಂಡದ ಸ್ಮಿತ್ ವಿರುದ್ಧ ಮೈದಾನದಲ್ಲಿಯೇ ಬಹಿರಂಗವಾಗಿ ಅಸಮಾಧಾನ ತೋರಿಸಿದ ರೋಹಿತ್ ಶರ್ಮ: ಯಾಕೆ ಗೊತ್ತೇ??

127

ನಿನ್ನೆ ನಡೆದ ಆಸ್ಟ್ರೇಲಿಯಾ ವರ್ಸಸ್ ಭಾರತ ಪಂದ್ಯದಲ್ಲಿ ಭಾರತ ತಂಡ ಸೋಲುವ ಮೂಲಕ ಹಿನ್ನಡೆ ಅನುಭವಿಸಿದೆ. ಬ್ಯಾಟ್ಸ್ಮನ್ ಗಳು ಉತ್ತಮವಾದ ಪ್ರದರ್ಶನ ನೀಡಿದರು, ಹಾರ್ದಿಕ್ ಪಾಂಡ್ಯ ಅವರು 71 ರನ್, ಕೆ.ಎಲ್.ರಾಹುಲ್ ಅರ್ಧಶತಕದಿಂದ, 208 ರನ್ ಗಳನ್ನು ಭಾರತ ತಂಡ ಕಲೆಹಾಕಿತು. ಆದರೆ ಭಾರತ ತಂಡದ ಬೌಲರ್ ಗಳು ದುಬಾರಿಯಾಗಿ ಕಾಣಿಸಿಕೊಂಡರು. ಅಕ್ಷರ್ ಪಟೇಲ್ ಅವರನ್ನು ಹೊರತುಪಡಿಸಿ ಬೇರೆ ಯಾವಬ ಬೌಲರ್ ಸಹ ನಿರೀಕ್ಷೆಯ ಮಟ್ಟದಲ್ಲಿ ಬೌಲಿಂಗ್ ಮಾಡಲಿಲ್ಲ. ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಯುಜವೇಂದ್ರ ಚಾಹಲ್, ಎಲ್ಲರು ದುಬಾರಿಯಾಗಿದ್ದರು.

ನಿನ್ನೆಯ ಪಂದ್ಯದಲ್ಲಿ ಬೌಲರ್ ಗಳು ರೋಹಿತ್ ಶರ್ಮಾ ಅವರ ಭರವಸೆ ಉಳಿಸಿಕೊಳ್ಳಲಿಲ್ಲ, 20ನೇ ಓವರ್ ಮುಗಿಯಲು ಇನ್ನು 4 ಚೆಂಡುಗಳು ಬಾಕಿ ಇರುವಾಗಲೇ, ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿತು. ಆದರೆ ನಿನ್ನೆ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಮಾಡುವಾಗ, 12ನೇ ಓವರ್ ನಲ್ಲಿ ನಡೆದ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನುಭವಿ ಆಟಗಾರ ಸ್ಮಿತ್ ಅವರು ಬ್ಯಾಟಿಂಗ್ ಮಾಡುವಾಗ, ಉಮೇಶ್ ಯಾದವ್ ಅವರು ಹಾಕಿದ ಬಾಲ್, ಸ್ಮಿತ್ ಅವರ ಬ್ಯಾಟ್ ಗೆ ತಾಗಿ ನಂತರ ವಿಕೆಟ್ ಕೀಪರ್ ಕೈಗೆ ಸಿಕ್ಕಿತು. ಔಟ್ ಆಗಿದ್ದರು ಸಹ ಸ್ಮಿತ್ ಅವರು ಕ್ರೀಸ್ ಇಂದ ಹೊರಬರದೆ ಅಲ್ಲಿಯೇ ನಿಂತು, ಅಂಪೈರ್ ನಿರ್ಣಯಕ್ಕೆ ಕಾದರು. ಫೀಲ್ಡ್ ಅಂಪೈರ್ ಸಹ ಅದಕ್ಕೆ ನಾಟ್ ಔಟ್ ಕೊಟ್ಟರು.

ಆದರೆ ರೋಹಿತ್ ಶರ್ಮಾ ಅವರು ರಿವ್ಯೂ ತೆಗೆದುಕೊಂಡ ಬಳಿಕ, 4ನೇ ಅಂಪೈರ್ ಅವರು ಬಾಲ್ ಬ್ಯಾಟ್ ಗೆ ತಾಗಿ, ನಂತರ ವಿಕೆಟ್ ಕೀಪರ್ ಕೈಗೆ ಹೋಗಿದ್ದನ್ನು ಪರಿಶೀಲಿಸಿ, ಔಟ್ ನೀಡಿದ ಬಳಿಕ ಸ್ಮಿತ್ ಹೊರನಡೆದರು. ಸ್ಮಿತ್ ಅವರು ಅನುಭವಿ ಆಟಗಾರ ಆಗಿದ್ದರು, ಔಟ್ ಆದಮೇಲು ಆ ರೀತಿ ಹೊರಬರದೆ ಇದ್ದಿದ್ದಕ್ಕೆ ರೋಹಿತ್ ಶರ್ಮ ಅವರು ಅಸಮಾಧಾನಗೊಂಡು, ಸ್ಮಿತ್ ಅವರ ಕಡೆಗೆ ಕೈತೋರಿಸಿ, ಇದು ನಿಮ್ಮ ನಡೆಯೇ.. ಎಂದು ಪ್ರಶ್ನೆ ಮಾಡುವ ಹಾಗೆ ಕೈ ತೋರಿಸಿದರು. ರೋಹಿತ್ ಶರ್ಮಾ ಅವರಿಗೆ ಸ್ಮಿತ್ ಅವರ ಈ ನಡೆ ಇಷ್ಟವಾಗದ ಕಾರಣ ಈ ರೀತಿ ರಿಯಾಕ್ಟ್ ಮಾಡಿದ್ದು, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Leave A Reply

Your email address will not be published.