ಭಾರತ ತಂಡ ಮೊದಲ ಪಂದ್ಯ ಸೋತಿರಬಹುದು, ಆದರೆ ಸೋಲಿನಿಂದಲೂ ಭಾರತಕ್ಕೆ ಆದ ಟಾಪ್ 4 ಲಾಭಗಳೇನು ಗೊತ್ತೇ??
ವಿಶ್ವಕಪ್ ಪಂದ್ಯಗಳು ಶುರುವಾಗುವುದಕ್ಕಿಂತ ಮೊದಲು ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿದೆ. ಭರ್ಜರಿಯಾದ ಬ್ಯಾಟಿಂಗ್ ಪ್ರದರ್ಶನದ ಮೂಲಕ 208 ರನ್ ಗಳಿಸಿದರು ಸಹ, ಅದನ್ನು ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಬೌಲಿಂಗ್ ವೈಫಲ್ಯತೆಯಿಂದ ಸೋಲುವ ಹಾಗೆ ಆಯಿತು. ಇದರಿಂದ ಕ್ಯಾಪ್ಟನ್ ರೋಹಿತ್ ಶರ್ಮಾ ಟೀಕೆಗೆ ಗುರಿಯಾಗಿದ್ದಾರೆ. ಮಾಜಿ ಆಟಗಾರರು ಭಾರತ ತಂಡದ ತಂತ್ರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದರ ನಡುವೆಯೇ ಈಗ, ಮೊದಲ ಪಂದ್ಯದಲ್ಲಿ ಭಾರತ ಸೋತಿದ್ದರು ಸಹ, ತಂಡಕ್ಕೆ ಲಾಭವೇ ಆಗಿದೆ ಎನ್ನಲಾಗುತ್ತಿದೆ. ವಿಶ್ವಕಪ್ ಗಿಂತ ಮೊದಲು ಸೊತ್ತಿರುವುದರಿಂದ ತಪ್ಪುಗಳನ್ನು ಸರಿಮಾಡಿಕೊಳ್ಳಬಹುದು ಎನ್ನುವ ಮಾತು ಕೇಳಿಬರುತ್ತಿದೆ. ಈ ಸೋಲಿನಿಂದ ಭಾರತಕ ತಂಡಕ್ಕೆ ಆಗಿರುವ ಲಾಭಗಳು ಏನು ಎಂದು ತಿಳಿಸುತ್ತೇವೆ ನೋಡಿ..
*ಲೈನ್ ಲೆಂಥ್ ನಲ್ಲಿ ಎಡವಿದ ತಂಡ :- ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತದ ಬೌಲರ್ ಗಳು ಕಡಿಮೆ ಲೈನ್ ಲೆಂಥ್ ನಲ್ಲಿ ಬೌಲಿಂಗ್ ಮಾಡಿದರು. ಇದರಿಂದಾಗಿ ದೊಡ್ಡ ಸ್ಕೋರ್ ಡಿಫೆಂಡ್ ಮಾಡಿಕೊಳ್ಳುವುದು ಕಷ್ಟವಾಯಿತು. ಯುಜವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್ ಹಾಗೂ ಹರ್ಷಲ್ ಪಟೇಲ್ ಮೂವರು ಸಹ ಇದೇ ರೀತಿ ಬೌಲಿಂಗ್ ಮಾಡಿ, ಹೆಚ್ಚು ರನ್ ಗಳನ್ನು ಬಿಟ್ಟುಕೊಟ್ಟು ದುಬಾರಿಯಾದರು. ಈ ರೀತಿಯ ತಪ್ಪುಗಳು ಮುಂದಕ್ಕೆ ನಡೆಯಬಾರದು.
*ಕಳಪೆ ಫೀಲ್ಡಿಂಗ್ ಕಡೆಗೆ ಗಮನ :- ಮೊನ್ನೆಯ ಪಂದ್ಯ ಸೋಲಲು ಕಳಪೆ ಬೌಲಿಂಗ್ ಜೊತೆಗೆ ಕಳಪೆ ಫೀಲ್ಡಿಂಗ್ ಸಹ ಮುಖ್ಯ ಕಾರಣವಾಗಿದ್ದ. ಕೆ.ಎಲ್.ರಾಹುಲ್, ಹರ್ಷಲ್ ಪಟೇಲ್ ಹಾಗೂ ಅಕ್ಷರ್ ಪಟೇಲ್ ಸುಲಭದ ಕ್ಯಾಚ್ ಗಳನ್ನು ಬಿಟ್ಟರು. ಇದು ಕೂಡ ಸೋಲಿಗೆ ಕಾರಣ, ಹಾಗಾಗಿ ಫೀಲ್ಡಿಂಗ್ ಬಗ್ಗೆ ಸಹ ಆಟಗಾರರು ಗಮನ ಹರಿಸಬೇಕಿದೆ.

*ಬೌಲರ್ ಗಳ ಎಕಾನಮಿ ಮೇಲೆ ಗಮನ ಹರಿಸಿ :- ಭುವನೇಶ್ವರ್ ಕುಮಾರ್ ಅವರು ಡೆತ್ ಓವರ್ ಗಳಲ್ಲಿ ಬಹಳ ದುಬಾರಿ ಆಗುತ್ತಿದ್ದಾರೆ. ಹಾಗಾಗಿ ಅವರ ಬದಲಿಗೆ ಅಕ್ಷರ್ ಪಟೇಲ್ ಅವರಿಗೆ ಅವಕಾಶ ನೀಡಬೇಕು ಎನ್ನಲಾಗುತ್ತಿದೆ. ಹಾರ್ದಿಕ್ ಪಾಂಡ್ಯ ಮತ್ತು ಉಮೇಶ್ ಯಾದವ್ ಅವರ ಎಕಾನಮಿ 10ಕ್ಕಿಂತ ಹೆಚ್ಚಾಗಿದೆ, ಹಾಗಾಗಿ ಆರಂಭಿಕ ಬೌಲರ್ ಸ್ಥಾನ ಯಾರಿಗೆ ಕೊಡಬೇಕೆಂದು ಸರಿಯಾದ ನಿರ್ಧಾರ ಮಾಡಬೇಕಿದೆ.
*ಸುಧಾರಣೆ ಎಲ್ಲಿ ಆಗಬೇಕು :- ಭಾರತ ತಂಡದಲ್ಲಿ ಈಗ ಎಲ್ಲೆಲ್ಲಿ ತೊಂದರೆ ಆಗುತ್ತಿದೆ, ರೋಹಿತ್ ಶರ್ಮಾ ಯಾವೆಲ್ಲಾ ಸಂದರ್ಭಗಳಲ್ಲಿ ಒತ್ತಡ ಆಗುತ್ತಿದೆ ಎಂದು ಮ್ಯಾನೇಜ್ಮೆಂಟ್ ಗೆ ಈಗ ಗೊತ್ತಾಗಿದೆ. ಇದರ ಮೇಲೆ ಮ್ಯಾನೇಜ್ಮೆಂಟ್ ಕೆಲಸ ಮಾಡಲಿದೆ. ಬ್ಯಾಟಿಂಗ್ ಪ್ರದರ್ಶನ ಚೆನ್ನಾಗಿಯೇ ಇದ್ದರೂ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೋಹ್ಲಿ ಇಬ್ಬರು ಕಡಿಮೆ ರನ್ಸ್ ಗಳಿಸಿದರು, ಇವರಿಬ್ಬರು ಬ್ಯಾಟಿಂಗ್ ನಲ್ಲಿ ಹೆಚ್ಚು ಶ್ರಮ ಹಾಕಿದರೆ, ತಂಡಕ್ಕೆ ಇನ್ನು ಹೆಚ್ಚಿನ ರನ್ಸ್ ಬರುತ್ತದೆ.